ರಾಜಕೀಯ

ಕೈತಪ್ಪಿದ ಬಿಜೆಪಿ ಟಿಕೆಟ್: ಬಿಜೆಪಿ ತೊರೆದು ಜೆಡಿಎಸ್ ಸೇರಿಕೊಂಡ್ರು ನಟಿ ಅಮೂಲ್ಯ ಮಾವ!

ವಿಧಾನಸಭಾ ಚುನಾವಣೆಯ ಬಿಸಿಗಾಳಿ ರಾಜ್ಯಾದಂತ ಜೋರಾಗಿಯೇ ಬೀಸಲಾರಂಭಿಸಿದೆ. ಆದರೆ ಇದರ ಎಫೆಕ್ಟೆಂಬುದು ಈ ಸಲ ರಾಜಕಾರಣಿಗಳ ವಲಯಕ್ಕಿಂತಲೂ ಸಿನಿಮಾ ರಂಗದಲ್ಲಿಯೇ ತೀವ್ರವಾಗಿರುವಂತಿದೆ. ಯಾಕೆಂದರೆ, ಆ ವಲಯದಲ್ಲಿ ನಡೆಯುತ್ತಿರೋ ಚುನಾವಣಾ ರೇಸಿನ ರಂಗಿನಾಟ, ಹತ್ತಿರವಿದ್ದುಕೊಂಡೇ ಮಾಡುತ್ತಿರೋ ಮಸಲತ್ತು, ಯಾರದ್ದೋ ಗಮನ ಸೆಳೆಯುವ ಕಸರತ್ತು, ಮತ್ಯಾರನ್ನೋ ಓವರ್‌ಟೇಕ್ ಮಾಡಿ ಟಿಕೆಟು ಪಡೆಯೋ ಚಾಲಾಕಿತನಗಳ ಸುದ್ದಿ ನಿಜಕ್ಕೂ ಇಂಟರೆಸ್ಟಿಂಗ್. ಇದೀಗ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಹೊರಬಂದಿರೋದು ಮಾತ್ರ ಪಕ್ಕಾ ಶಾಕಿಂಗ್ ಸ್ಟೋರಿ!

 

 

ರಾಜರಾಜೇಶ್ವರಿ ನಗರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ ನಟಿ ಅಮೂಲ್ಯ ಅವರ ಮಾವ ಜಿ.ಎಚ್.ರಾಮಚಂದ್ರ ಅವರು ನೆನ್ನೆ ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.. ಸುಮಾರು ಇಪ್ಪತ್ತು ವರ್ಷಗಳಿಂದಲೂ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ರಾಮಚಂದ್ರ ಅವರು ರಾಜರಾಜೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದ್ದುದರಿಂದ ಬೆಂಬಲಿಗರೊಂದಿಗೆ ಜೆಡಿಎಸ್ ನೆನ್ನೆ ಸೇರಿಕೊಂಡಿದ್ದಾರೆ.

ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ನಿರಾಕರಿಸುವುದರಿಂದ ಜಿ.ಎಚ್.ರಾಮಚಂದ್ರ ಅವರಿಗೆ ಜೆಡಿಎಸ್ ಟಿಕೆಟ್ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೂ ಮೊದಲು ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಟಿಕೆಟ್’ಗಾಗಿ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಕೂಡ ಅರ್ಜಿ ಸಲ್ಲಿಸಿದ್ದರು. ಹಾಗಾಗಿ ಟಿಕೆಟ್ ಗಾಗಿ ರಾಮಚಂದ್ರ ಮತ್ತು ಶಿಲ್ಪಾ ಅವರ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗಿತ್ತು.. ಈ ವಿಚಾರವಾಗೆಯೇ ಶಿಲ್ಪಾ ಮತ್ತು ಅಮೂಲ್ಯಾ ಫ್ಯಾಮಿಲಿ ನಡುವೆ ಮುಸುಕಿನ ಗುದ್ದಾಟ ಏರ್ಪಟ್ಟಿತ್ತು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top