ಭವಿಷ್ಯ

ಜಾತಕದಲ್ಲಿ ನೀಚ ರಾಜ ಭಂಗ ದೋಷ ಇದ್ರೆ ಬಹಳಷ್ಟು ಹಣಕಾಸಿನ ವಿಚಾರದಲ್ಲಿ ತೊಂದರೆ ಅನುಭವಿಸಬೇಕಾಗುತ್ತೆ , ಇದಕ್ಕೆ ಯಾವ ಪರಿಹಾರಗಳನ್ನು ಮಾಡಬೇಕು ತಿಳ್ಕೊಳ್ಳಿ

ನೀಚ  ರಾಜ ಭಂಗ ದೋಷ ಎಂದರೇನು ? ಈ ದೋಷ ಉಂಟಾದರೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ತೊಂದರೆಗಳು ಬರುತ್ತವೆ. ಜೊತೆಗೆ ದೋಷಗಳು ಕೂಡ ಕಾಡುತ್ತವೆ ಎಂದು ಹೇಳುತ್ತಾರೆ ,ಈ ರೀತಿ ಎದುರಾಗುವ ಸಂಕಷ್ಟಗಳಿಂದ ಮುಕ್ತಿ ಹೊಂದುವುದಕ್ಕೆ  ಏನು ಮಾಡಬೇಕು ? ಇದಕ್ಕೆ ಪರಿಹಾರ ಏನು ?

 

ನಿಮ್ಮ ಜಾತಕವನ್ನು ಮೊದಲು ವಿಮರ್ಶೆ ಮಾಡಿಕೊಳ್ಳಿ. ನಿಮ್ಮ ಜಾತಕದಲ್ಲಿ ಕರ್ಮ ಸ್ಥಾನಾಧಿಪತಿ ಆಗಿರುವವನು ಸುಖ ಸ್ಥಾನದಲ್ಲಿ, ಭಾಗ್ಯ ಸ್ಥಾನದಲ್ಲಿ ಅಥವಾ ಲಾಭ ಸ್ಥಾನದಲ್ಲಿ ಇದ್ದರೆ, ಜಯ ಸ್ಥಾನದಲ್ಲಿ ಇದ್ದರೆ ಮಾತ್ರ ನಿಮಗೆ ಜಯ ಪ್ರಾಪ್ತಿಯಾಗುತ್ತದೆ.

 

 

ನೀಚ ರಾಜ ಭಂಗ ದೋಷ ಎಂದರೇನು ?

ಕರ್ಮ ಸ್ಥಾನಾಧಿಪತಿ ಆಗಿರುವವನು ಎಲ್ಲಿಯಾದರೂ ವ್ಯವಸ್ಥಿತವಾಗಿ ಮುಖ್ಯವಾಗಿ ಆರನೇ ಮನೆ, ಎಂಟನೇ ಮನೆ ಅಥವಾ ಐದನೇ ಮನೆಯಲ್ಲಿ ಏನಾದರೂ ಇದ್ದರೆ, ನೀವು ಸ್ವಲ್ಪ ಅಂತರದಲ್ಲಿಯೇ ಎಲ್ಲ ಕಡೆಗಳಲ್ಲಿಯೂ ಸಹ ಸೋಲನ್ನು ಅನುಭವಿಸಬೇಕಾಗುತ್ತದೆ. ಅಂದರೆ ಇದನ್ನು ನೀಚ ರಾಜ ಭಂಗ ದೋಷ ಅಥವಾ ಯೋಗ ಎಂದು ಕರೆಯಲಾಗುತ್ತದೆ.

ನಾವು ಗೆಲ್ಲುತ್ತೇವೆ ಎಂದು ಬಹಳಷ್ಟು ಆಸೆಗಳನ್ನು ಇಟ್ಟುಕೊಂಡಿರುತ್ತೇವೆ. ನಾವು ಗೆಲ್ಲಬೇಕು ಎಂದರೆ ಈ ಪರಿಹಾರಗಳನ್ನು ಅನುಸರಿಸಿ.

 

 

 

ಪರಿಹಾರ.

 

ನಿಮ್ಮ ಜಾತಕವನ್ನು ಸರಿಯಾದ ಜ್ಯೋತಿಷ್ಯರ ಬಳಿ ಸರಿಯಾಗಿ ವಿಮರ್ಶೆ ಮಾಡಿಸಿ ನಂತರ ಅದಕ್ಕೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ. ಅಕಸ್ಮಾತ್  ಕರ್ಮ ಸ್ಥಾನಾಧಿಪತಿ ಆಗಿರುವವನು ನೀಚ ಸ್ಥಾನದಲ್ಲಿ ಇದ್ದರೆ, ಮೊದಲು ನೀವು ಮಾಡಬೇಕಾಗಿರುವ ಕೆಲಸ ಏನೆಂದರೆ ಜನ ಆಕರ್ಷಣ ಚಕ್ರವನ್ನು  ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿ ನಿತ್ಯ ಅದಕ್ಕೆ ಪೂಜೆ ಮಾಡಬೇಕು, ಪೂಜೆ, ಹೋಮ, ಹವನಗಳನ್ನು ಮಾಡುತ್ತಿರಬೇಕು.

ಹಿಂದೆ ರಾಜ ಮಹಾರಾಜರು ಏನು ಮಾಡುತ್ತಿದ್ದರು ಎಂದರೆ ,ಬೇರೆ ರಾಜ್ಯದ ಮೇಲೆ ದಂಡೆತ್ತಿ ಹೋಗುವ ಸಂದರ್ಭದಲ್ಲಿ ಜನ ಆಕರ್ಷಣಾ ಚಕ್ರಗಳನ್ನು , ಆಕರ್ಷಣಾ ಹೋಮಗಳನ್ನು ಆಚರಣೆಯನ್ನು ಮಾಡುತ್ತಿದ್ದರು. ಒಂದೊಂದು ದೇವರ ಪ್ರಾರ್ಥನೆಯನ್ನು ಕೂಡ ಮಾಡಿ ಜಯಭೇರಿಯನ್ನು ಬಾರಿಸುತ್ತಿದ್ದರು.

 

 

ಆದರೂ ಕೂಡ ವ್ಯವಸ್ಥಿತವಾಗಿ ಮನುಷ್ಯ ಏನು ಬೇಕಾದರೂ ಅಂದುಕೊಂಡಿರಬಹುದು ಆದರೆ ಭಾಗವತ್ ಆಜ್ಞೆ ಅಂದರೆ ಭಗವಂತನ ಆಜ್ಞೆ ಅನುಗ್ರಹ ಎಲ್ಲದಕ್ಕೂ ಇರಬೇಕು. ಜೊತೆಗೆ ನಿಮ್ಮ ಕುಲದೇವರ ಪ್ರಾರ್ಥನೆಯನ್ನು ಮಾಡಿ,ಪ್ರಾರ್ಥಿಸಿ ಆಗ ನೀವು ಜಯವನ್ನು ಗಳಿಸಿ ಜಯಭೇರಿ ಆಗುತ್ತೀರ.

 

ಜನಾಕರ್ಷಣದ  ಅನುಕೂಲತೆಗಳು ಏನು ?

 

ನೀವು ಯಾವುದೇ ಒಂದು ಕ್ಷೇತ್ರದಲ್ಲಿರಲಿ, ಉದ್ಯೋಗದಲ್ಲಿರಲಿ, ರಾಜಕೀಯ, ವ್ಯಾಪಾರ, ವ್ಯವಹಾರಗಳಲ್ಲಿ ಯಾವುದೇ ಕ್ಷೇತ್ರದಲ್ಲಾದರೂ ಸಹ ಈ ಜನಾಕರ್ಷಣೆ ಮಂತ್ರ ಆಕರ್ಷಣೆಯನ್ನು ಮಾಡುತ್ತದೆ. ಅದಕ್ಕೆ ಹಿರಿಯರು ಏನು ಮಾಡುತ್ತಾರೆ ಜನಾಕರ್ಷಣೆ,  ಧನಾಕರ್ಷಣೆ  ಎಂದು ಹೇಳುತ್ತಾರೆ .

ಯಾರು ದರಿದ್ರ ನಾಗಿರುತ್ತಾನೆ ಮೊದಲು ಅವನಿಗೆ ಜನಾಕರ್ಷಣೆ ಮುಖ್ಯವಾಗಿ ಬೇಕು. ಜನಾಕರ್ಷಣೆ ಅದರೆ ದನಾಕರ್ಷಣೆ ತಾನಾಗಿಯೇ ಆಗುತ್ತದೆ. ಇದರ ಒಂದು ಸಂಕೇತವೇ ಲಕ್ಷ್ಮೀ ನಾರಾಯಣ ಯೋಗ .ಈ ಲಕ್ಷ್ಮೀ ನಾರಾಯಣನ ಅನುಗ್ರಹ ಬೇಕು .

 

 

ಅದಕ್ಕೆ “ವಿಷ್ಣು ಪುರಾಣದ” ಪ್ರಕಾರ ಹೀಗೆ ಹೇಳುತ್ತಾರೆ. ಎಲ್ಲಿ ಶ್ರೀ ಮಹಾಲಕ್ಷ್ಮೀ ದೇವಿಯ ಇರುತ್ತಾಳೋ ಅಲ್ಲಿ ಶ್ರೀಮನ್ನಾರಾಯಣನು ಸಹ ನೆಲೆಸಿರುತ್ತಾನೆ. ಎಲ್ಲಿ ನಾರಾಯಣನು ಇರುತ್ತಾನೋ, ಅಲ್ಲಿ ಲಕ್ಷ್ಮೀ  ದೇವಿಯು ಸಹ ಇರುತ್ತಾಳೆ. ಅದಕ್ಕೆ ಹಿರಿಯರು ಮನೆಯ ಮುಂದೆ ತುಳಸಿ ಗಿಡ ಬೆಳೆಸಿ ಎಂದು ಹೇಳಿರುವುದು. ವೈಜ್ಞಾನಿಕವಾಗಿ ತುಳಸಿ ಗಿಡ ಇದ್ದರೆ ಗಾಳಿ ಬೀಸುತ್ತದೆ, ರೋಗ ರುಜಿನಗಳನ್ನು ತಡೆಯುತ್ತದೆ ನಿಜ.

ಆದರೆ ಸಂಪ್ರದಾಯ ಬದ್ಧವಾಗಿ ನಮ್ಮ ಹಿಂದಿನ ಋಷಿಮುನಿಗಳು, ಆಗಿನ ಕಾಲದಲ್ಲಿ ಅವರೇನು ಮಾಡಿದ್ದಾರೆ. ಮನೆ ಮುಂದೆ ತುಳಸಿ ಗಿಡ ಬೆಳೆಸಿ ಅದಕ್ಕೆ ಪೂಜೆ ಪುನಸ್ಕಾರ ಮಾಡಿ ಎಂದು ಹೇಳಿದ್ದಾರೆ. ಇವತ್ತು ಆಧ್ಯಾತ್ಮಿಕತೆ ತಿಳಿದುಕೊಂಡಿರುವವರು ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರು ಸರಿ, ತುಳಸಿ ಗಿಡಕ್ಕೆ ನಮಸ್ಕಾರವನ್ನು ಮಾಡುತ್ತಾರೆ. ಆದರ ಸ್ಪರ್ಶವನ್ನು ಮಾಡಿ ನಮಸ್ಕಾರವನ್ನು ಮಾಡಿ ಅಮ್ಮ ತುಳಸಿ ಮಾತೆ ನಮ್ಮನ್ನು ಕಾಪಾಡು ಎಂದು ಹೇಳುತ್ತಾರೆ.

ಗೃಹಿಣಿಯಾದವಳು ಕೂಡ ತುಳಸಿಗೆ ಪೂಜೆ ಮಾಡುತ್ತಾಳೆ. ಹಾಗೆ ಈ ಜನಾಕರ್ಷಣೆ, ದನಾಕರ್ಷಣೆ ಎನ್ನುವುದನ್ನು ಯಾರೂ ವ್ಯವಸ್ಥಿತವಾಗಿ ಮಾಡಿಕೊಳ್ಳುತ್ತೀರೋ ಅಂತಹವರಿಗೆ ಜಯ ಶತಸಿದ್ದ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top