fbpx
ಹೆಚ್ಚಿನ

ಏಪ್ರಿಲ್ 18ನೇ ತಾರೀಖು ಅಕ್ಷಯ ತೃತೀಯ ಈ ರೀತಿ ಶಾಸ್ತ್ರದ ಪ್ರಕಾರ ಆಚರಿಸಿದ್ರೆ ಅನಂತ ಅಕ್ಷಯ ಫಲ ಸಿಗುತ್ತೆ

ಅಕ್ಷಯ ತೃತೀಯದ ದಿನ ಈ ರೀತಿಯಾಗಿ ಆಚರಿಸಿದರೆ ಅನಂತ ಅಕ್ಷಯ ಫಲ ಲಭಿಸುವುದು.

 

 

ಪರಮ ಪವಿತ್ರವಾದ ಅಕ್ಷಯ ತೃತೀಯ ಇದೇ ಏಪ್ರಿಲ್ 18 ನೇ ತಾರೀಖಿನಂದು ನಾವೆಲ್ಲರೂ ಆಚರಿಸುತ್ತಿದ್ದೇವೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತದಿಗೆ ಎಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ಚಂದ್ರರು ತಮ್ಮ ಗನಿಷ್ಠ ತಾಪಮಾನವನ್ನು ಮತ್ತು ಕಾಂತಿಯನ್ನು ಹೊಂದಿರುವುದರಿಂದ.

ಆ ಸಂಪೂರ್ಣ ದಿನವೂ ಮಂಗಳಕರವಾದದು, ಪುಣ್ಯಕರವಾದದ್ದು ಮತ್ತು ಫಲ ಪ್ರದವಾದದ್ದು ಎಂದು ಹೇಳಲಾಗುತ್ತದೆ . ಮುಖ್ಯವಾಗಿ ಮದುವೆ, ಮುಂಜಿ, ಅಕ್ಷರಾಭ್ಯಾಸ ಗೃಹಪ್ರವೇಶ ಹೊಸ ವ್ಯವಹಾರಗಳನ್ನು ಆರಂಭಿಸುವುದಕ್ಕೆ ಇಂದಿನ ದಿನ ಅತ್ಯುತ್ತಮವಾದದ್ದು, ಸೂಕ್ತವಾದದ್ದು ಎಂದು ಶಾಸ್ತ್ರಕಾರರು ಪಂಡಿತರು ಹೇಳುತ್ತಾರೆ. ಯಾಕೆಂದರೆ ಈ ಗಳಿಗೆ ಅಷ್ಟು ಶ್ರೇಷ್ಠವಾದದ್ದು ಎನ್ನಲಾಗಿದೆ ನಮ್ಮ ಪುರಾಣಗಳಲ್ಲಿ.
ಈ ದಿನ ನನ್ನ ಶಾಸ್ತ್ರಗಳಲ್ಲಿ ಕೆಲವು ವಿಶೇಷತೆಗಳನ್ನು ಮುಖ್ಯವಾಗಿ ಉಲ್ಲೇಖಿಸಲಾಗಿದೆ.

 

 

ಈ ಆಕ್ಷಯ ತೃತೀಯದ ದಿನ ಮಾಡಿದ ಹೋಮ, ಹವನ, ಜಪ, ತಪ ,ಪೂಜೆ ಪುನಸ್ಕಾರಗಳು ದಿನ ನಿತ್ಯಕ್ಕಿಂತ ನೂರು ಪಟ್ಟು ಹೆಚ್ಚಾಗಿ ಫಲವನ್ನು ನೀಡುತ್ತವಂತೆ
ಸೂರ್ಯೋದಯಕ್ಕೂ ಮೊದಲು ಎದ್ದು ನದಿಗಳಲ್ಲಿ ಸ್ಥಾನಗಳನ್ನು ಮಾಡುವುದರಿಂದ ವಿಶೇಷ ಪುಣ್ಯ ಫಲ ಒದಗಿ ಬರುತ್ತದೆ ಎಂದು ಹೇಳುತ್ತವೆ ಶಾಸ್ತ್ರಗಳು.

ಗುರು ಮುಖದಿಂದ ಮಂತ್ರೋಪದೇಶಕ್ಕೆ ಇದು ಅಂದರೆ ಆಕ್ಷಯ ತೃತೀಯ ಬಹಳ ಪ್ರಶಸ್ತವಾದ ದಿನ ಎಂದು ಉಲ್ಲೇಖಿತವಾಗಿದೆ. ಯಾಕೆಂದರೆ ವೇದವ್ಯಾಸರು ಗಜಾನನ ಆದೇಶವನ್ನು ಪಡೆದುಕೊಂಡು ಮಹಾಭಾರತ ರಚನೆ ಆರಂಭಿಸಿದ ದಿನವಾದ್ದರಿಂದ. ವೇದ, ಉಪನಿಷತ್ತುಗಳ ಪಾರಾಯಣಕ್ಕೂ ಕೂಡ ಇದು ಅತ್ಯುತ್ತಮ ದಿನ ಎಂದು ಹೇಳಲಾಗುತ್ತಿದೆ.

 

 

ಪಿತೃತರ್ಪಣ ಕೊಡಬೇಕಾದ ದಿನವಾಗಿದೆ. ಅಕ್ಷಯ ತೃತೀಯದ ದಿನ ಪಿತೃಗಳಿಗೆ ತರ್ಪಣವನ್ನು ನೀಡಿದಲ್ಲಿ ಅನಂತ ಪುಣ್ಯ ಫಲ ಒದಗಿ ಬರುತ್ತದೆ.
ದಾನ ಮಾಡಲು ಅಕ್ಷಯ ತೃತೀಯ ಅತೀ ಸೂಕ್ತವಾದ ದಿನ ಮತ್ತು ಹೆಚ್ಚಿನ ಫಲವನ್ನು ನೀಡುವಂತಹ ದಿನ ಎಂದು ಹೇಳಲಾಗುತ್ತಿದೆ.

ಲಕ್ಷ್ಮಿ ಸಾನ್ನಿಧ್ಯವಿರುವ ವಸ್ತುಗಳನ್ನು ಕೊಳ್ಳಲು ಇದು ವಿಶೇಷ ದಿನ ಎನ್ನುತ್ತಾರೆ. ಯಾಕಂದ್ರೆ ಹೊಸದು ಯಾವಾಗಲೂ ಎಲ್ಲರಿಗೂ ಇಷ್ಟವಾಗುತ್ತದೆ. ಹೊಸ ವಸ್ತುವನ್ನು ಮನೆಯಲ್ಲಿ ತಂದುಕೊಂಡು ಹೆಚ್ಚು ಹೆಚ್ಚು ಉತ್ಸಾಹದಿಂದ ನವ ನವೋಲ್ಲಾಸದಿಂದ ಜೀವನ ಸಾಗಿಸುವ ಉದ್ದೇಶವೇ ಅಕ್ಷಯ ತೃತೀಯವಾಗಿದೆ.

 

 

ಆದ್ದರಿಂದ ಲಕ್ಷ್ಮಿ ಸಾನಿಧ್ಯವಿರುವ ಯಾವುದೇ ವಸ್ತುಗಳನ್ನಾದರೂ ಅಕ್ಷಯ ತೃತೀಯದ ದಿನದಂದು ಕೊಂಡು ಕೊಂಡರೆ ಶುಭವಾಗುತ್ತದೆ. ಬದುಕು ಉತ್ತಮವಾಗುತ್ತದೆ . ಇನ್ನಷ್ಟು ನಿಮ್ಮ ಐಶ್ವರ್ಯ ಸಂಪತ್ತು ಸುಖ ವೃದ್ಧಿಸುತ್ತದೆ ಎನ್ನುವ ಅಪಾರವಾದ ನಂಬಿಕೆ ಇದೆ. ಈ ರೀತಿಯಾಗಿ ವಿಶೇಷವಾದ ಈ ಆಕ್ಷಯ ತೃತೀಯ ದಿನವನ್ನು ನಾವೆಲ್ಲರೂ ಭಕ್ತಿ ಶ್ರದ್ದೆಗಳಿಂದ ಆಚರಿಸಿದರೆ ಸಾಕು ಅನಂತ ಅಕ್ಷಯ , ಸಂಪತ್ತು ಹಾಗೆಯೇ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ದೇಶಾದ್ಯಂತ ಈ ದಿನ ಚಿನ್ನದ ಆಭರಣಗಳನ್ನು ಖರೀದಿಸಲು ಮಂಗಳಕರವೆಂದು ಪರಿಗಣಿಸಲಾಗಿದೆ ಆದರೆ ಚಿನ್ನವನ್ನೇ ಖರೀದಿಸಬೇಕು ಎಂದು ಯಾವ ಶಾಸ್ತ್ರದಲ್ಲೂ ಉಲ್ಲೇಖವಿಲ್ಲ. ಯಾವುದಾದರೂ ಹೊಸ ವಸ್ತುಗಳನ್ನು ಕೊಂಡುಕೊಳ್ಳಲು ಈ ದಿನ ಶುಭ ದಿನ. ಸೈಟು ,ಮನೆ, ಮೊಬೈಲು, ಭೂಮಿ, ಟಿವಿ, ಇತ್ಯಾದಿ ಚಿಕ್ಕ ಪುಟ್ಟ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುಗಳನ್ನು ಸಹ ಖರೀದಿಸಬಹುದು.

ಮದುವೆ ಮಾಡಲು ಇದು ಅತ್ಯುತ್ತಮವಾದ ದಿನ ಈ ದಿನ ಯಾವುದೇ ಮುಹೂರ್ತ ನೋಡುವ ಅವಶ್ಯಕತೆ ಇಲ್ಲ. ಎಲ್ಲ ಸಮಯವೂ ಶುಭ ಸಮಯವೇ ಆಗಿದೆ. ಎಲ್ಲಾ ಮುಹೂರ್ತಗಳು ಶುಭವಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top