ಆರೋಗ್ಯ

ದ್ರಾಕ್ಷಿ ಬೀಜದಲ್ಲಿದೆ ಮಹಾಮಾರಿ ಕ್ಯಾನ್ಸರ್ ಅನ್ನು ಗುಣಪಡಿಸೋ ಗುಣ?ಕ್ಯಾನ್ಸರ್ ಬರಬಾರ್ದು ಅಂದ್ರೆ ಹೀಗ್ ಮಾಡಿ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ದ್ರಾಕ್ಷಿ ಬೀಜದಲ್ಲಿದೆ ಮಹಾಮಾರಿ ಕ್ಯಾನ್ಸರ್ ಅನ್ನು ಗುಣಪಡಿಸೋ ಗುಣ?ಕ್ಯಾನ್ಸರ್ ಬರಬಾರ್ದು ಅಂದ್ರೆ ಹೀಗ್ ಮಾಡಿ.

 

 

 

ಎಷ್ಟೋ ಜನ ನಮಗೆ ಸೀಡ್‌ಲೆಸ್ ದ್ರಾಕ್ಷಿ ಹಣ್ಣೇ ಬೇಕು. ಬೀಜ ಇರುವ ದ್ರಾಕ್ಷಿ ಹಣ್ಣು ಬೇಡ ಎಂದು ಹೇಳುತ್ತಿದ್ದರು ಆದರೆ ಈಗ ದ್ರಾಕ್ಷಿ ಹಣ್ಣಿನ ಬೀಎಜದಲ್ಲಿರುವ.ಶಕ್ತಿಗಳು ಕರಳು,,ತಲೆ ಮತ್ತು ಕುತ್ತಿಗೆ ಮೂಳೆಯಲ್ಲಿರುವ ಆರೋಗ್ಯವಂತ ಜೀವಕೋಶಗಳಿಗೆ ತೊಂದರೆಯಾಗದಂತೆ ಕ್ಯಾನ್ಸರನ್ನು ತರುವಂತಹ ಜೀವಕೋಶಗಳನ್ನು ಕೊಲ್ಲುತ್ತದೆ ಎಂದು ಭಾರತೀಯ ಮೂಲದ ವಿಜ್ಞಾನಿಗಳು ಸಂಶೋಧಿಸಿದ್ದಾರೆ. ವಿಜ್ಞಾನಿಗಳು ತಮ್ಮ ಈ ಪ್ರಯೋಗವನ್ನು ಇಲಿಗಳ ಮೇಲೆ ಪ್ರಯೋಗಿಸಿ ಸಂಶೋಧನೆ ನಡೆಸಿದ್ದಾರೆ.

 

 

ಅಮೆರಿಕಾದಲ್ಲಿ ಪ್ರತಿವರ್ಷ ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಜನರು ತಲೆ ಮತ್ತು ಕುತ್ತಿಗೆ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ನಡೆಸಿದ ಸಂಶೋದನೆಯಲ್ಲಿ ಭಾರತೀಯ ವಿಜ್ಞಾನಿಗಳು ಯಶಸ್ಸನ್ನು ಪಡೆದಿದ್ದರೆ.

 

 

ಕರುಳಿನ ಕ್ಯಾನ್ಸರ್ ಎನ್ನುವುದು ಅತ್ಯಂತ ಸಂಕಟದಾಯಕವಾಗಿದ್ದು, ಕೀಮೋತೆರಪಿ ಚಿಕಿತ್ಸೆ ಮಾಡಿಸುವುದು ಕ್ಯಾನ್ಸರ್ ರೋಗಿಗಳಿಗೆ ಅತಿಯಾದ ನೋವನ್ನು ಮತ್ತು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತದೆ. ಇಂಥ ಸಮಸ್ಯೆಯನ್ನು ದ್ರಾಕ್ಷಿ ಬೀಜದ ಬಳಕೆಯಿಂದ ಪರಿಣಾಮಕಾರಿಯಾಗಿ ನಿವಾರಿಸಬಹುದು ಎನ್ನುವುದು ದೊಡ್ಡದೊಂದು ವರದಾನ ಎಂದು ವೈದ್ಯರು ಹೇಳುತ್ತಾರೆ.

 

 

ದ್ರಾಕ್ಷಿಹಣ್ಣಿನ ಬೀಜವನ್ನು ಚನ್ನಾಗಿ ಅಗಿದು ನುಂಗುವುದರಿಂದ ಕರುಳಿನ ಉರಿಯೂತ ಮತ್ತು ಕೀಮೋತೆರಪಿಯಿಂದ ಆಗಿರುವ ಅಡ್ಡ ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ಕಾಯಿಲೆಗೆ ಕೀಮೋತೆರಪಿ ಚಿಕಿತ್ಸೆ ಮಾಡಿಸುವುದು ಕ್ಯಾನ್ಸರ್ ಕೋಶಗಳನ್ನಲ್ಲದೆ,ಇತರ ಆರೋಗ್ಯವಂತ ಜೀವಕೋಶಗಳಿಗೂ ಕಿರಿಕಿರಿಯನ್ನುಂಟು ಮಾಡುತ್ತವೆ..ಆದರೆ, ದ್ರಾಕ್ಷಿ ಬೀಜಗಳು ಕ್ಯಾನ್ಸರ್ ಜೀವಕೋಶಗಳ ಮೇಲಷ್ಟೇ ಪರಿಣಾಮ ಬೀರುವುದು ದೊಡ್ಡ ಆನಂದಕರ ಸಂಗತಿಯಾಗಿದೆ.

 

 

ಈ ವಿಜ್ಞಾನಿಗಳು ದ್ರಾಕ್ಷಿ ಹಣ್ಣಿನ ಬೀಜಗಳು ದೇಹದಲ್ಲಿ ಅತಿ ವೇಗವಾಗಿ ಬೆಳೆಯುವ ಕ್ಯಾನ್ಸರ್ ಜೀವಜೋಶಗಳನ್ನು ನಾಶಪಡಿಸುವ ಗುಣವನ್ನು ಹೊಂದಿದ್ದು ಇವು ಕ್ಯಾನ್ಸರ್ ಜೀವಕೋಶಗಳಿಂದ ಜೀವಕೋಶಗಳನ್ನು ರಕ್ಷಿಸಿ DNAಯನ್ನು ಹಾನಿಯಾಗದ ಹಾಗೆ ಕಾಪಾಡುತ್ತದೆ.ದ್ರಾಕ್ಷಿ ಬೀಜದ ಸಾರವು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತಾದರೂ ಆರೋಗ್ಯವಂತ ಕೋಶಗಳಿಗೆ ಇದು ಯಾವುದೇ ರೀತಿಯ ಹಾನಿಯನ್ನುಂಟುಮಾಡುವುದಿಲ್ಲ. ಸಂಶೋಧನೆ ನಡೆಸಿದ ವೈದ್ಯರುಗಳ ಪ್ರಕಾರ ದ್ರಾಕ್ಷಿ ಬೀಜಗಳು ಕೇವಲ 48 ಗಂಟೆಗಳಲ್ಲಿ ಶೇಕಡಾ 76 ರಷ್ಟು ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ.

 

ಇನ್ನು ಮುಂದೆ ಅಂಗಡಿಯಲ್ಲಿ ದ್ರಾಕ್ಷಿಹಣ್ಣನ್ನು ಕೊಳ್ಳುವಾಗ ಸೀಡ್ ದ್ರಾಕ್ಷಿ ಬೇಕಾ? ಅಥವಾ ಸೀಡೆಡ್ ಬೇಕಾ ಅಂತ ಎರೆಡೆರಡು ಭಾರಿ ಯೋಚ್ನೆ ಮಾಡಿ ಡಿಸೈಡ್ ಮಾಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top