fbpx
ಹೆಚ್ಚಿನ

ಭಾರತೀಯ ರೈಲ್ವೆ ಬಗ್ಗೆ ಈ 12 ವಿಶೇಷ ಮಾಹಿತಿ ತಿಳ್ಕೊಂಡ್ಮೇಲೆ ಮುಂದೆ ರೈಲಲ್ಲಿ ಹೋಗೋವಾಗ ಮತ್ತೆ ಮತ್ತೆ ನೆನಪಿಸಿಕೊಳ್ತೀರ

ನಮ್ಮ ಭಾರತೀಯ ರೈಲುಗಳ ಬಗ್ಗೆ ನಿಮಗೆ ಎಷ್ಟು ಗೊತ್ತು ? ಅಂತಹ ಕೆಲವು ಕುತೂಹಲಕಾರಿ ಮಾಹಿತಿಗಳನ್ನು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರ ?

 

 

ನಾವು ಒಂದೂರಿನಿಂದ ಮತ್ತೊಂದು ಊರಿಗೆ ಮತ್ತು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಾವು ಪ್ರಯಾಣ ಮಾಡಲು ಹೋಗುವಾಗ ನಾವು ಅತೀ ಹೆಚ್ಚು ಅವಲಂಭಿಸುವುದು ರೈಲನ್ನೇ . ಈ ಒಂದು ರೈಲಿನ ಬಗ್ಗೆ ನಿಮಗೆ ಕೆಲವೊಂದು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

 

 

ನಾವು ಈ ರಾಜಧಾನಿ ಎಕ್ಸ್ ಪ್ರೆಸ್ ಎಂದು ಕರೆಯುವ ರೈಲುಗಳು. ಈ ರಾಜಧಾನಿ ಎಕ್ಸ್ ಪ್ರೆಸ್ ಗಳಲ್ಲಿ ಕೆಲಸ ಮಾಡುವ ಟ್ರೈನ್ ಡ್ರೈವರ್ ಗಳು ಎಂದು ಕರೆಯುವ, ರೈಲ್ವೆ ಭಾಷೆಯಲ್ಲಿ ಇವರನ್ನು ಲೋಕೋಪೈಲೆಟ್ ಎಂದು ಕರೆಯುತ್ತಾರೆ. ಈ ಲೋಕೋಪೈಲೆಟ್ ಗಳಿಗೆ ಒಂದು ತಿಂಗಳ ಸಂಬಳ ಸುಮಾರು ಒಂದು ಲಕ್ಷ ರುಪಾಯಿ.

ಹೌದು ತುಂಬಾನೇ ಜವಾಬ್ದಾರಿಯುತವಾದ ಕೆಲಸ ಇದು. ಅವರಿಗೆ ಆರ್ಥಿಕವಾಗಿ ಯಾವುದೇ ಸಂಕಷ್ಟ ಬರಬಾರದು, ಮನೆಯ ವಿಷಯಗಳು ಆಗಿರಬಹುದು, ಬೇರೆ ಏನು ಅವರಿಗೆ ತೊಂದರೆ ಇರಬಾರದು. ಅವರು ಗಮನ ಬೇರೆ ಕಡೆ ಹೋಗಬಾರದು, ಎನ್ನುವುದಕ್ಕೆ ಅವರಿಗೆ ಕೈ ತುಂಬಾ ಸಂಬಳವನ್ನು ಕೊಡುತ್ತಾರೆ.

 

 

ರೈಲಿನಲ್ಲಿ ಪ್ರಯಾಣ ಮಾಡುವವರು ನೂರಕ್ಕೆ ಅರುವತ್ತು ಜನ ಮಲಗಿರುತ್ತಾರೆ. ಅದಕ್ಕೆ ಮುಖ್ಯ ಕಾರಣ 1.2 ಗೀಗ ಹರ್ಟ್ಸ್ ಕಂಪನಾಂಕ.ಅಂದರೆ ಇದು ಜನರನ್ನು ತುಂಬಾನೇ ಕಂಫರ್ಟ್ ಆಗಿ ಇಡುತ್ತದೆ. ಆ ಒಂದು ಕಾರಣಕ್ಕೋಸ್ಕರ ರೈಲಿನಲ್ಲಿ ಪ್ರಯಾಣ ಮಾಡುವವರು ಬೇಗನೆ ನಿದ್ದೆಗೆ ಜಾರುತ್ತಾರೆ .

ನಮ್ಮ ಭಾರತದಲ್ಲಿ ಪ್ರತಿನಿತ್ಯ ಹದಿನಾಲ್ಕು ಸಾವಿರದ ಮುನ್ನೂರು ರೈಲುಗಳು ಸಂಚರಿಸುತ್ತವೆ. ಈ ರೈಲು ಹೋಗುವ ದೂರ ಎಷ್ಟು ಎಂದು ಕೇಳಿದರೆ ನಿಜಕ್ಕೂ ನಿಮಗೆ ಅಚ್ಚರಿ ಉಂಟಾಗಬಹುದು. ನಮ್ಮ ಭೂಮಿಯಿಂದ ಚಂದ್ರನಿಗೆ ಎಷ್ಟು ದೂರ ಇದೆಯೋ ಅದಕ್ಕಿಂತ ಮೂರುವರೆ ಪಟ್ಟು ಜಾಸ್ತಿ ರೈಲು ನಮ್ಮ ದೇಶದಲ್ಲಿ ಪ್ರತಿದಿನ ಓಡಾಡುತ್ತವೆ. ಅಂದರೆ ನೀವೇ ಯೋಚನೆ ಮಾಡಿ ಎಷ್ಟು ದೂರ ಚಲಿಸುತ್ತದೆ, ಎಷ್ಟು ಲಕ್ಷ ಕಿಲೋಮೀಟರ್ ಗಳು ರೈಲುಗಳು ಚಲಿಸುತ್ತವೆ ಒಂದು ದಿನಕ್ಕೆ ಎಂದು.

 

ಭಾರತೀಯ ರೈಲ್ವೆ ವೆಬ್ ಸೈಟ್ ಗೆ ಪ್ರತಿ ನಿಮಿಷ ಹನ್ನೆರಡು ಲಕ್ಷ ಜನ ಟಿಕೆಟ್ ಬುಕ್ ಮಾಡುವುದಕ್ಕೆ ಎಂಟ್ರಿ ಕೊಡುತ್ತಾರಂತೆ. ಅಂದರೆ ಅದು ಎಷ್ಟು ದೊಡ್ಡ ಸರ್ವರ್ ಇರಬಹುದೆಂದು ನೀವೇ ಯೋಚನೆ ಮಾಡಿ ನೋಡಿ.

ಹಳೆಯ ಕಾಲದಲ್ಲಿ ರೈಲಿನ ಬೋಗಿಗಳನ್ನು ಜೋಡಿಸಲು ಆನೆಗಳನ್ನು ಬಳಸುತ್ತಿದ್ದರು. ಈಗ ಆ ಪರಿಸ್ಥಿತಿ ಇಲ್ಲ ಆದರೂ ಸಹ ಹಿಂದಿನ ಕಾಲದಲ್ಲಿ ಅಷ್ಟು ದೊಡ್ಡ ಬೋಗಿಯನ್ನು ಕೂರಿಸಲು ಆನೆಯನ್ನು ಬಳಸುತ್ತಿದ್ದರು ಅಂದರೆ ಆಶ್ಚರ್ಯವೇ. ಆನೆ ಇನ್ನೆಷ್ಟು ಶಕ್ತಿಶಾಲಿ ಎಂದು ನೀವೇ ಊಹಿಸಿ.

ನಮ್ಮ ಭಾರತದಲ್ಲಿ ಅತ್ಯಂತ ಉದ್ದವಾದ ಹೆಸರಿನ ರೈಲ್ವೆ ಸ್ಟೇಷನ್ ಎಂದರೆ “ವೆಂಕಟರಾಜು ನರಸಿಂಹ ವಾರಿಪೇಟ” ಇದು ಆಂಧ್ರದಲ್ಲಿ ಇದೆ. ತುಂಬಾ ಉದ್ದನೆಯ ಹೆಸರಿರುವ ರೈಲ್ವೆ ಸ್ಟೇಷನ್ ಇದಾಗಿದೆ .
ಅತಿ ಚಿಕ್ಕ ಹೆಸರಿನ ರೈಲ್ವೆ ನಿಲ್ದಾಣ ಎಂದರೆ ಅದು ಒರಿಸ್ಸಾ ರಾಜ್ಯದಲ್ಲಿ ಇದೆ . ಆ ಹೆಸರು “ಐಬಿ” ಬರಿ ಎರಡೇ ಅಕ್ಷರ ಇರುವ ಅತಿ ಚಿಕ್ಕ ಹೆಸರಿನ ರೈಲ್ವೆ ನಿಲ್ದಾಣ ಇದಾಗಿದೆ.

 

 

ಇನ್ನೂ ತುಂಬಾ ಅತಿ ನಿಧಾನವಾಗಿ ಹೋಗುವ , ತಲುಪುವ ರೈಲು ಎಂದರೆ ಗುವಾಹಟಿ ಟ್ರಿವೇಂಡ್ರಮ್ ಎಕ್ಸ್ ಪ್ರೆಸ್. ಭಾರತದ ಎಲ್ಲಾ ರೈಲುಗಳಿಗಿಂತ ಅತಿ ಹೆಚ್ಚು ಲೇಟಾಗಿ ಹೋಗುವ ರೈಲು ಎಂದರೆ ಇದೆ. ಸುಮಾರು ಹತ್ತರಿಂದ ಹನ್ನೆರಡು ಗಂಟೆ ಲೇಟಾಗಿ ಚಲಿಸುವ ರೈಲು ಎಂದರೆ ಇಂದಿಗೂ ಸಹ ಇದೇ ಆಗಿದೆ .

ಅತ್ಯಂತ ದೂರ ಹೋಗುವ ರೈಲು ವಿವೇಕ್ ರೈಲು ಅಂದರೆ ವಿವೇಕ್ ಎಕ್ಸ್ ಪ್ರೆಸ್. ಸುಮಾರು ನಾಲ್ಕು ಸಾವಿರದ ಇನ್ನೂರ ಎಪ್ಪತ್ತಮೂರು ಕಿಲೋಮೀಟರ್ ದೂರ ಕ್ರಮಿಸುತ್ತದೆ. ದಿಬ್ಬುಗರ್ ನಿಂದ ಕನ್ಯಾಕುಮಾರಿಯವರೆಗೆ ಈ ರೈಲು ಚಲಿಸುತ್ತದೆ. ಇದು ಅತ್ಯಂತ ದೂರ ಪ್ರಯಾಣ ಹೋಗುವ ರೈಲಾಗಿದೆ .

 

 

ಎರಡು ಜಂಕ್ಷನ್ ಮಧ್ಯದಲ್ಲಿರುವ ಅತಿ ಕಡಿಮೆ ಅಂತರದಲ್ಲಿರುವ ಜಂಕ್ಷನ್ ಎಂದರೆ ಅದು ನಾಗ್ಪುರ ಮತ್ತು ಅಂಜನಿ ಜಂಕ್ಷನ್ ಗಳ ನಡುವೆ ಇರುವ ಜಂಕ್ಷನ್. ಇದು ಇವೆರಡರ ಅಂತರ ಕೇವಲ ಮೂರು ಕಿಲೋ ಮೀಟರ್ . ಇದು ಅತ್ಯಂತ ಕಡಿಮೆ ಅಂತರದಲ್ಲಿರುವ ಜಂಕ್ಷನ್ ಆಗಿದೆ.

ಮುಂದೆ ರೈಲ್ವೇ ಸ್ಟೇಷನ್ ಎರಡು ರಾಜ್ಯಕ್ಕೆ ಸೇರಿದ್ದಾಗಿದೆ. ಅದು ನವ ಪುರದಲ್ಲಿ ಬರುತ್ತದೆ. ಒಂದು ಗುಜರಾತ್ ರಾಜ್ಯಕ್ಕೆ ಸೇರಿದ್ದಾಗಿದೆ. ಇನ್ನೊಂದು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ್ದಾಗಿದೆ. ಒಂದೂವರೆ ಆಡಿ ಆ ಕಡೆ ನಿಂತುಕೊಂಡರೆ ಗುಜರಾತ್ ಇನ್ನೊಂದು ಅಡಿ ಈ ಕಡೆ ನಿಂತುಕೊಂಡರೆ ಮಹಾರಾಷ್ಟ್ರಕ್ಕೆ ಸೇರುತ್ತದೆ. ಈ ರೈಲ್ವೆ ನಿಲ್ದಾಣದ ಹೆಸರು ನವಪುರ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top