ಸಮಾಚಾರ

ಬೆತ್ತಲೆ ಸ್ಟಾರ್ ಶ್ರೀ ರೆಡ್ಡಿ ವಿವಾದದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಪವನ್ ಕಲ್ಯಾಣ್!

ಕೆಲವು ದಿನಗಳ ಹಿಂದೆಯಷ್ಟೇ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಅವರಣದಲ್ಲಿರುವ ಚಲನಚಿತ್ರ ಕಲಾವಿದರ ಸಂಘದ ಮುಂದೆ ಶ್ರೀ ರೆಡ್ಡಿ ಕಾಸ್ಟ್ ಕೌಚಿಂಗ್ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಳು. ಆದರೆ ಯಾರೊಬ್ಬರೂ ಆಕೆಯ ಧರಣಿಗೆ ಸ್ಪಂದಿಸಲೇ ಇಲ್ಲ. ಇದರಿಂದಾಗಿ ಶ್ರೀ ರೆಡ್ಡಿ ರೊಚ್ಚಿಗೆದ್ದಿದ್ದ ಶ್ರೇರೆಡ್ಡಿ ಓಪನ್ ಪ್ಲೇಸಿನಲ್ಲಿಯೇ ತಾನು ಧರಿಸಿದ್ದ ಟಾಪ್ ಕಿತ್ತೆಸೆದು ತೆರೆದೆದೆಯಲ್ಲಿಯೇ ಧರಣಿ ಆರಂಭಿಸಿ ಕಾಮುಖರ ವಿರುದ್ಧ ತನ್ನ ಹೋರಾಟಕ್ಕೆ ಯಾರೂ ಬೆಂಬಲ ಸೂಚಿಸುತ್ತಿಲ್ಲ. ಆದ್ದರಿಂದಲೇ ಹೀಗೆ ನಡುರಸ್ತೆಯಲ್ಲಿ ಬೆತ್ತಲಾಗಿ ಕುಳಿತಿರೋದಾಗಿ ಶ್ರೀ ಹೇಳಿಕೊಂಡಿದ್ದಳು.

 

 

ಇಷ್ಟೇ ಅಲ್ಲದೆ ರಾಣಾ ದಗ್ಗುಬಾಟಿ ತಮ್ಮ ಅಭಿರಾಮ್ ಎಂಬಾತನೊಂದಿಗಿನ ಲಿಪ್ ಟು ಲಿಪ್ ಕಿಸ್ ಮಾಡುತ್ತಿರುವ ಖಾಸಗಿ ಫೋಟೋಗಳನ್ನು ಶ್ರೀ ರೆಡ್ಡಿ ಬಹಿರಂಗಪಡಿಸಿದ್ದರು. ಅನೇಕ ಕಾಮುಕರ ಬಗ್ಗೆಯೂ ಈಕೆ ಬಹಿರಂಗವಾಗಿಯೇ ಮಾತನಾಡಿದ್ದಳು. ತೆಲುಗು ಚಿತ್ರರಂಗದಲ್ಲಿನ ಕಾಸ್ಟ್ ಕೌಚಿಂಗ್ ಕಾಯಿಲೆಯ ವಿರುದ್ಧ ಕಾಲೂರಿ ನಿಂತು ಸಮರ ಸಾರುವ ಸೂಚನೆ ರವಾನಿಸಿದ್ದಾರೆ.

 

 

ಈ ಮಧ್ಯೆ ಪವನ್ ಕಲ್ಯಾಣ್ ನನ್ನ ಅಣ್ಣನಿದ್ದಂತೆ ಈ ವಿಷಯದಲ್ಲಿ ಅವರು ನನ್ನ ನೆರವಿಗೆ ಬರಬೇಕು ಎಂದು ಶ್ರೀ ರೆಡ್ಡಿ ಕೇಳಿಕೊಂಡಿದ್ದರು. ಆದರೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದ ಪವನ್ ಕಲ್ಯಾಣ್ ಇದೀಗ ಮಾತನಾಡಿದ್ದಾರೆ. ಕಠುವಾದಲ್ಲಿ 8 ವರ್ಷದ ಪುಟ್ಟ ಬಾಲಕಿ ಆಸಿಫಾ ಮೇಲೆ ಕಾಮಾಂಧರ ಕಾಮಚೇಷ್ಟೆಯನ್ನು ಖಂಡಿಸಿ ಹೈದ್ರಬಾದ್’ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪವನ್ ಕಲ್ಯಾಣ್ ಪಾಲ್ಗೊಂಡಿದ್ದರು. ಈ ವೇಳೆ ಶ್ರೀ ರೆಡ್ಡಿ ವಿಷಯವನ್ನು ಪ್ರಸ್ತಾಪಿಸಿದ ಪವನ್ ಕಲ್ಯಾಣ್ “ನ್ಯಾಯ ಬೇಕಾದಲ್ಲಿ ಕೋರ್ಟ್ ಅಥವಾ ಪೊಲೀಸ್ ಠಾಣೆಗೆ ಹೋಗಬೇಕೆ ಹೊರತು ಟಿವಿ ಚಾನಲ್’ಗಳ ಮುಂದೆ ಹೋಗುವುದಲ್ಲ..ಕೋರ್ಟ್’ನಲ್ಲಿ ಹೋರಾಡುವುದಲ್ಲದೇ ಟಿವಿ ಚಾನಲ್’ಗಳ ಬಳಿ ಹೋದರೆ ಯಾವುದೇ ಪ್ರಯೋಜನವಾಗುವುದಿಲ್ಲ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top