ಆರೋಗ್ಯ

ಪೂಜೆ ಮಾಡೋಕೆ ಮಾತ್ರ ಅಲ್ಲ ಆರೋಗ್ಯಕ್ಕೂ ಕರ್ಪೂರ ಈ 11 ಲಾಭ ತಂದ್ಕೊಡುತ್ತೆ ಅಂತ ಗೊತ್ತಾದ್ರೆ ನಮ್ಮ್ ಸಂಸ್ಕೃತಿ ಬಗ್ಗೆ ಹೆಮ್ಮೆ ಅನ್ಸುತ್ತೆ

ಪೂಜೆಗೆ ಮಾತ್ರ ಅಲ್ಲ ಕರ್ಪೂರ ಆರೋಗ್ಯಕ್ಕೂ ಬೇಕು !

ಸಿನಮೋಮಮ್ ಕ್ಯಾಂಫೋರ( Cinnamomum Camphora) ಎಂಬ ವೃಕ್ಷದ ತೊಗಟೆಯಿಂದ
ಕರ್ಪೂರವನ್ನು ತಯಾರಿಸುತ್ತಾರೆ.ಆದರೆ ಈಗ ಕರ್ಪೂರವನ್ನು ರಾಸಾಯನಿಕವಾಗಿ ಟರ್ಪಂಟೈನ್ ಎಣ್ಣೆಯಲ್ಲಿ ತಯಾರಿಸುತ್ತಾರೆ.
ಇದನ್ನು ಹೆಚ್ಚಾಗಿ ಪೂಜಾ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ.

ಮನೆಯಲ್ಲಿ ಮಾಡಿದ ಕರ್ಪೂರ ತೈಲವನ್ನು ಗರ್ಭಧಾರಣೆಯ ಸಮಯದಲ್ಲಿ ಉಂಟಾಗುವ ಸೆಳೆತದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.
ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಂಡು ಕರ್ಪೂರವನ್ನು ಸೇರಿಸಿ ಬಿಸಿ ಮಾಡಿ ತಣ್ಣಗಾದ ಮೇಲೆ ಕಾಲುಗಳ ಮೇಲೆ ಮಸಾಜ್ ಮಾಡುವುದರಿಂದ ತ್ವರಿತ ಸುಲಭ ವಿಶ್ರಾಂತಿ ನೀಡುತ್ತದೆ.

ನೀರಿನಲ್ಲಿ ಕರ್ಪೂರವನ್ನು ಸೇರಿಸಿ ಇರುವೆಗಳು ಜಾಗಕ್ಕೆ ಹಾಕಿದರೆ ತಕ್ಷಣ ಇರುವೆಗಳು ಮಾಯವಾಗುತ್ತದೆ.

ಮಸ್ಲಿನ್ ಚೀಲದಲ್ಲಿ ಕರ್ಪೂರವನ್ನು ಸೇರಿಸಿ ಹಾಸಿಗೆ ಕೆಳಗೆ ಇರಿಸಿದರೆ ಹಾಸಿಗೆಯಲ್ಲಿ ಇರುವ ಹುಳುಗಳು ಮಾಯವಾಗುತ್ತದೆ.

ಚರ್ಮದ ಮೊಡವೆಗಳನ್ನ ಗುಣಪಡಿಸಲು ಉತ್ತಮ ಗುಣಮಟ್ಟದ ಕರ್ಪೂರವನ್ನು ತೈಲದ ಜೊತೆಗೆ ಬೆರೆಸಿ ನಿಮ್ಮ ಚರ್ಮವನ್ನು ಮಸಾಜ್ ಮಾಡಿಕೊಳ್ಳಬಹುದು, ತೈಲ ಎಂದರೆ ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.

ಎದೆಯ ದಟ್ಟಣೆ ಚಿಕಿತ್ಸೆಗೆ ತುಂಬಾ ಪರಿಣಾಮಕಾರಿಯಾಗಿದೆ, ಸಾಸಿವೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಂಡು ಸ್ವಲ್ಪ ಕೃತಕ ಕರ್ಪೂರ ಜತೆ ಬಿಸಿ ಮಾಡಿ ಮಗುವಿನ ಎದೆಯ ಮೇಲೆ ಉಜ್ಜುತ್ತಾ ಇದ್ದರೇ ಎದೆಯ ದಟ್ಟಣೆಯಿಂದ ಉತ್ತಮ ಪರಿಹಾರ ಪಡೆಯಬಹುದು.

ಕೊಬ್ಬರಿ ಎಣ್ಣೆ ತೆಗೆದುಕೊಂಡು ಕರ್ಪೂರವನ್ನು ಸೇರಿಸಿ ಬಿಸಿ ಮಾಡಿ ತಣ್ಣಗಾದ ಮೇಲೆ ತಲೆಗೆ ಹಚ್ಚಿಕೊಂಡರೆ ತಲೆಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.


ಕರ್ಪೂರವನ್ನು ವಿವಿಧ ಮನೆಯ ಮದ್ದುಗಳಲ್ಲಿ ಬಳಸಲಾಗುತ್ತದೆ. ಸಣ್ಣ ಪ್ರಮಾಣದ ಕರ್ಪೂರವನ್ನು ನೀರಿನಲ್ಲಿ ಬೆರೆಸಿ ಚರ್ಮದ ಅಲರ್ಜಿ ಸಮಸ್ಯೆಗಳಿಗೆ ಬಳಸಬಹುದು.

ಈ ಹೊಗೆಯಿಂದ ವಾತಾವರಣದಲ್ಲಿರುವ ಬ್ಯಾಕ್ಟೀರಿಯ,ಸಣ್ಣ ಕ್ರಿಮಿಗಳು,ವೈರಸ್ ಗಳು ನಾಶವಾಗುತ್ತವೆ.

ಜ್ಞಾಪಕ ಶಕ್ತಿ ವೃದ್ಧಿಸುತ್ತದೆ,ಚರ್ಮದ ಕಾಯಿಲೆಗಳು ಗುಣವಾಗುತ್ತವೆ.

ಕರ್ಪೂರದಿಂದ ಬರುವ ಹೊಗೆಯಿಂದ ಅಸ್ತಮಾ,ಟೈಪಾಯಿಡ್, ಮನಸ್ಸಿನ ದುಗುಡ,ಬೆಚ್ಚಿ ಬೀಳುವಿಕೆ,ಹಿಸ್ಟೀರಿಯಾ,ಕೀಲುಗಳನೋವು ಮೊದಲಾದ ಖಾಯಿಲೆಗಳಿಂದ ಮುಕ್ತಿ ಹೊಂದಬಹುದು.

ಕರ್ಪೂರ ಹೊಗೆ ವಾಸನೆಯಿಂದ ಅಪಸ್ಮಾರ, ಉನ್ಮಾದ ಮತ್ತು ಸಂಧಿವಾತ ಪೀಡಿತವಾಗಿರುವ ಜನರಿಗೆ ಬಹಳ ಲಾಭಕರವಾಗಿರುತ್ತದೆ.

ಪೂಜೆಗೆ, ಚರ್ಮದ ರಕ್ಷಣೆಯಗೆ, ಕೊಠಡಿ ಸ್ವಚ್ಛಗೊಳಿಸಲು ಹೀಗೆ ಕರ್ಪೂರವನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ.

ಕರ್ಪೂರವನ್ನು ಪೂಜೆಯಲ್ಲಿ ಏಕೆ ಬಳಸುತ್ತಾರೆ ವೈಜ್ಞಾನಿಕ ಕಾರಣಗಳು ಇಲ್ಲಿ ಓದಿ [http://www.aralikatte.com/2017/03/20/camphor/]

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top