ಕಿರುತೆರೆ

ರಕ್ಷಿತಾ ಆಡಿದ ಈ ಮಾತಿಗೆ ‘ಇದು ಅವಮಾನ ನನಗೆ’ ಅಂದ್ರು ಶಿವಣ್ಣ!

ಬಹುಷಃ ಕಳೆದ ದಶಕದ ಅಗ್ರ ಸ್ಯಾಂಡಲ್ ವುಡ್ ನಾಯಕಿಯರ ಪಟ್ಟಿಯ ಮಿಂಚೂಣಿ ಸ್ಥಾನದಲ್ಲಿ ರಕ್ಷಿತಾ ಪ್ರೇಮ್ ಕೂಡ ನಿಲ್ಲುತ್ತಾರೆ. ತಮ್ಮ ಅಭಿಮಾನಿಗಳಿಂದ ಕ್ರೇಜಿ ಕ್ವೀನ್ ಅಂತಲೇ ಕರೆಸಿಕೊಳ್ಳುವ ಇವರು ಫಿಲ್ಟರ್ ಇಲ್ಲದೆ ತಾವು ಮಾತನಾಡುವ ತಮ್ಮ ನೇರ ನುಡಿಗಳಿಗೆ ಯದ್ವಾ ತದ್ವಾ ಫೇಮಸ್ಸಾಗಿದ್ದಾರೆ. ತಮ್ಮ ಎದುರು ಇರುವ ವ್ಯಕ್ತಿ ಎಂತವರೇ ಆಗಿದ್ದರು ತಮಗನಿಸಿದ್ದನ್ನು ಕಡ್ಡಿ ತುಂಡಾಗುವ ಹಾಗೆ ಹೇಳುವುದು ರಕ್ಷಿತಾ ಅವರ ನೇಚರ್. ಇದೀಗ ಶಿವಣ್ಣನ ಶೋನಲ್ಲೂ ಕೂಡ ರಕ್ಷಿತಾ ಅಷ್ಟೇ ಸ್ಟ್ರೈಟ್ ಆಗಿ ಫಿಲ್ಟರ್ ಲೆಸ್ ಮಾತುಕತೆಯನ್ನ ನಡೆಸಿದ್ದಾರೆ

 

 

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ನಟಿಯರಾದ ರಕ್ಷಿತಾ ಮತ್ತು ರಾಗಿಣಿ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಮುಕ್ತವಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ನಿಯಮ. ಅದರಂತೆ ರಾಗಿಣಿ ಮತ್ತು ರಕ್ಷಿತಾ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದ ಮೊದಲನೇ ಸುತ್ತು (ಸತ್ಯ ಅಥವಾ ಧೈರ್ಯ) ನಲ್ಲಿ ಸತ್ಯವನ್ನ ಹೇಳಲು ರಕ್ಷಿತಾ ಆಯ್ಕೆ ಮಾಡಿಕೊಂಡಾಗ ರಕ್ಷಿತಾಗೆ ನೀವು ನಟಿಸಿದ ಹೀರೋಗಳಲ್ಲಿ ಯಾರ ಜೊತೆ ಮತ್ತೆ ನಟಿಸಲು ನಿಮಗೆ ಆಸೆ’ ಎಂದು ಶಿವಣ್ಣ ಕೇಳುತ್ತಾರೆ ಇದಕ್ಕೆ ಉತ್ತರ ಕೊಟ್ಟ ರಕ್ಷಿತಾ ನನಗೆ ಯಾವಾಗಾದರೂ ಮತ್ತೆ ಆಕ್ಟ್ ಮಾಡಬೇಕು ಅಂತ ಅನಿಸಿದರೆ, ಅಭಿಮಾನಿಗಳ ಒತ್ತಾಯದ ಮೇರೆಗೆ ದರ್ಶನ್ ಜೊತೆ ಮತ್ತೆ ಅಭಿನಯ ಮಾಡುವ ಆಸೆ ಇದೆ ಎಂದು ಉತ್ತರಿಸುತ್ತಾರೆ.

 

 

ಉತ್ತರ ಕೇಳಿ ಖುಷಿಯಾದ ಶಿವಣ್ಣ ” ನಮ್ ಜೊತೆ ನಟಿಸೋಕೆ ಇಷ್ಟ ಇಲ್ವಾ” ಅಂತ ಕೇಳಿದರು. ಅದಕ್ಕೆ ರಕ್ಷಿತಾ ತಮ್ಮ ಶೈಲಿಯಲ್ಲಿ ನೇರವಾಗಿ ನೀವು ನನಗೆ ಫಾದರ್ ಫಿಗರ್ ಇದಾಗೆ ಅಂದುಬಿಟ್ಟರು. ಇದನ್ನು ಕೇಳಿದ ಶಿವಣ್ಣ “ಅಯ್ಯಯ್ಯೋ ಏನಪ್ಪಾ ಇದು ಅನ್ಯಾಯ, ಇದು ಅವಮಾನ ನನಗೆ, ಶೂಟಿಂಗ್ ಕ್ಯಾನ್ಸಲ್ ಮಾಡಿ” ಎಂದು ಹೇಳಿ ಹಾಸ್ಯ ಚಟಾಕಿ ಹಾರಿಸುವ ಮೂಲಕ ರಕ್ಷಿತಾರ ಕಾಲೆಳೆದರು. ನಂತರ ರಕ್ಷಿತಾ “ನಿಮ್ಮ ಜೊತೆ ಆನ್ ಸ್ಕ್ರೀನ್ ರೋಮ್ಯಾನ್ಸ್ ಮಾಡೋಕೆ ಆ ಭಾವನೆ ಬರೋದಿಲ್ಲ” ಎಂದು ಶಿವಣ್ಣನಿಗೆ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top