fbpx
ದೇವರು

ಕಾಡಿಗೆ ಹೋದ ರಾಮನನ್ನು ಹುಡುಕಿ ಹೋರಾಟ ಭರತ ಅಣ್ಣನನ್ನು ಕಂಡು ಮೂರ್ಛೆ ಹೋದ, ತಂದೆಯ ಸಾವಿನ ಬಗ್ಗೆ ತಿಳಿದ್ಮೇಲೆ ರಾಮಲಕ್ಷ್ಮಣರಿಗೆ ಏನಾಯ್ತು

ಭರತನೂ ಕೂಡ ರಾಮನನ್ನು ಹುಡುಕಿ ಹೊರಟ ಕಥೆ ಆಗ ರಾಮನನ್ನು ಕಂಡ ತಕ್ಷಣವೇ ಭರತನು ಮೂರ್ಛೆ ಹೋದನು. ತಂದೆಯ ಸಾವಿನ ಸುದ್ದಿ ಕೇಳಿ ಸೀತಾ ರಾಮ ಲಕ್ಷ್ಮಣನಿಗೆ ಏನಾಯಿತು ಮುಂದೆ ಓದಿ.
ಭರತನೂ ಕೂಡ ಕಾಡಿಗೆ ರಾಮನನ್ನು ಹುಡುಕುತ್ತಾ.

 

 

ಮರಳಿ ರಾಮನನ್ನು ಅಯೋಧ್ಯೆಗೆ ಕರೆತರಲು ಹೊರಟನು.ಭರತನ ದಶರಥನ ಅಂತ್ಯ ಸಂಸ್ಕಾರದ ವಿಧಿಗಳನ್ನು ಹದಿನಾಲ್ಕು ದಿನಗಳವರೆಗೆ ನಡೆಸಿ ಮರುದಿನ ಮಂತ್ರಿಗಳ ಸಭೆಯನ್ನು ಕರೆದು ಮುಂದಿನ ಆಲೋಚನೆಗೆ ತೊಡಗಿದನು. ಆಗ ವಸಿಷ್ಠರು ರಾಜಕುಮಾರ ಭರತ ನಿಮ್ಮ ತಂದೆಯ ಮಾತಿನಂತೆ ಶ್ರೀರಾಮ ಕಾಡಿಗೆ ಹೋಗಿದ್ದಾನೆ. ನೀನು ಸಿಂಹಾಸನವನ್ನು ಅಲಂಕರಿಸಿ ರಾಜ್ಯವನ್ನು ಆಳಿಕೊಂಡು ಇರು ಎಂದು ಸಲಹೆಯನ್ನು ನೀಡಿದರು.

ಭರತನೇ ಎದ್ದು ನಿಂತು ನೀನು ಪರಂಪರೆಯಂತೆ ಅಣ್ಣನಿಗೆ ಸೇರಬೇಕಾದ ರಾಜ್ಯದ ಆಡಳಿತವು ನನಗೆ ಬಂದು ಸೇರಿದೆ. ನಿಮ್ಮ ಸಲಹೆಗೆ ನಾನು ಕೃತಜ್ಞನಾಗಿರುತ್ತೇನೆ. ಆದರೆ ಅಣ್ಣನು ಕಾಡಿನಲ್ಲಿ ಇರಲಿ, ನಾಡಿನಲ್ಲಿ ಇರಲಿ. ಅವನೇ ಈ ರಾಜ್ಯದ ದೊರೆ. ನಾನು ಕಾಡಿಗೆ ಹೋಗಿ ಅವನನ್ನೇ ಮರಳಿ ಕರೆ ತರುತ್ತೇನೆ ಎಂದು ಹೇಳಿ ಅಧಿಕಾರಿಗಳಿಗೆ ಕಾಡಿಗೆ ಹೋಗುವ ಬಗ್ಗೆ ತಯಾರಿಗೆ ತಿಳಿಸಿದನು.

 

 

 

ರಾಜ ಪರಿವಾರವು ಅಡವಿಗೆ ಹೋಗುವುದನ್ನು ತಿಳಿದು ದಾರಿಯಲ್ಲಿ ಚಪ್ಪರಗಳನ್ನು ಹಾಕಿದರು. ಕಲ್ಲು ಮುಳ್ಳಿನ ದಾರಿಯನ್ನು ಸರಿಪಡಿಸಿದರು. ಚದುರಂಗ ಬಲದೊಂದಿಗೆ ಭರತನು ತಾಯಂದಿರು ಮಂತ್ರಿಗಳೊಂದಿಗೆ ರಾಮನನ್ನು ಕಾಣಲು ಹೊರಟರು. ದಾರಿಯಲ್ಲಿ ಗಂಗಾನದಿ ಇರುವುದರಿಂದಾಗಿ ಪಿತೃ ತರ್ಪಣಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡರು.

ರಾಮನು ಮೊದಲ ದಿನವನ್ನು ಗುಹನ ಆತಿಥ್ಯದಲ್ಲಿ ಕಳೆದಿದ್ದನು. ಈಗ ಭರತನು ಬಂದಿರುವುದನ್ನು ತಿಳಿದು ಗುಹನು ಸಂಶಯದಿಂದ ಇರುವಾಗ “ನಾನು ಅಣ್ಣನ ರಾಜ್ಯವನ್ನು ಅಣ್ಣನಿಗೆ ಒಪ್ಪಿಸಲು ಬಂದಿದ್ದೇನೆ. ಅಣ್ಣಾ, ಶ್ರೀರಾಮನು ಎಲ್ಲಿದ್ದಾನೆ ತೋರಿಸು . ಎಂದನು” ಭರತನಿಗೆ ಇಂದು ರಾತ್ರಿ ಇಲ್ಲಿಯೇ ತಂಗಲು ಹೇಳಿ ನಾಳೆ ದಾರಿ ತೋರಿಸುವ ವ್ಯವಸ್ಥೆ ಮಾಡುವೆ ಎಂದಾಗ ಭರತನಿಗೆ ಸಹ ಸಂತಸವಾಯಿತು .

 

ಗುಹನನ್ನು ಭರತನು ಆ ಒಂದು ದಿನದ ರಾತ್ರಿಯ ಬಗ್ಗೆ ಕೇಳಿದಾಗ ಅಂದು ರಾಮ ಸೀತೆಯರು ಇಲ್ಲಿಯೇ ಮಲಗಿದ್ದರೂ, ಆಹಾರವನ್ನು ಸ್ವೀಕರಿಸಲಿಲ್ಲ ,ಕೇವಲ ಗಂಗಾಜಲವನ್ನು ಕುಡಿದರು , ರಾತ್ರಿಯಿಡೀ ಲಕ್ಷ್ಮಣನು ಕಾವಲು ಕಾಯುತ್ತಿದ್ದನು ಎಂದು ಗುಹನ ಹೇಳಿದಾಗ, ರಾಜನಾಗಬೇಕಾದವನು ಹುಲ್ಲಿನ ಮೇಲೆ ಮಲಗಿದ್ದರೇ ? ಮಂಗಳ ಧ್ವನಿಯನ್ನು ಕೇಳಿ ಎಚ್ಚರಗೊಳ್ಳಬೇಕಾದವರು ಕ್ರೂರ ಮೃಗಗಳ ಕೂಗಿನಿಂದ ಹೇಳಬೇಕಾಯಿತೇ ಎಂದು ಮರುಗಿ, ನಾನು ನಾರು ಮುಡಿ ಹುಟ್ಟು ಹಣ್ಣು ಹಂಪಲು ತಿಂದು ಬದುಕುತ್ತೇನೆ. ಲಕ್ಷ್ಮಣನು ಶ್ರೀರಾಮನ ಸೇವೆ ಮಾಡಿ ಧನ್ಯನಾದನು ಎಂದು ಮರುದಿನ ಬೇಗನೇ ಎದ್ದು ಮುಂದಿನ ಪ್ರಯಾಣಕ್ಕೆ ಸಿದ್ಧನಾಗುವನು.

 

ಗುಹನು ಐದು ನೂರು ದೋಣಿಗಳನ್ನು ತರಿಸಿ ಅವರೆಲ್ಲರನ್ನೂ ಗಂಗಾ ನದಿಯ ಇನ್ನೊಂದು ಬದಿಗೆ ತಲುಪಿಸಿದನು. ಚದುರಂಗ ಬಲವೇ ನದಿ ಆಚೆ ಬಂದಾಗ ಸೈನಿಕರನ್ನು ವಿಶ್ರಾಂತಿಗೆ ಕಳಿಸಿದ ಭರತನು, ಭಾರಧ್ವಜ ಮುನಿಗಳ ಆಶ್ರಮಕ್ಕೆ ಹೊರಟನು. ಕಿರೀಟವನ್ನು ತೆಗೆದು ವಸಿಷ್ಠರ ಹಿಂದೆ ತಾನೊಬ್ಬನೇ ಪುನೀತನಾಗಿ ಆಶ್ರಮವನ್ನು ಪ್ರವೇಶಿಸಿದನು. ಭಾರದ್ವಾಜರು ಇವರನ್ನು ಸ್ವಾಗತಿಸಿ ಸತ್ಕರಿಸಿದರು. ಭರತನು ಮಹರ್ಷಿಗಳೇ ಅಣ್ಣನು ಎಲ್ಲಿದ್ದಾನೆ. ಅವನ ರಾಜ್ಯವನ್ನು ಅವನಿಗೆ ಕೊಡಲು ಬಂದಿದ್ದೇನೆ. ದಯಮಾಡಿ ಅಣ್ಣ ಇರುವ ಸ್ಥಳವನ್ನು ತಿಳಿಸಿ, ಎಂದಾಗ ಭಾರದ್ವಾಜರು ಭರತ ನೀನು ಉದಾರ ಮನಸ್ಸನ್ನು ಉಳ್ಳವನು, ನಿನ್ನ ಕೈಗೆ ಸಿಕ್ಕಿರುವ ರಾಜ್ಯವನ್ನು ಹಿಂತಿರುಗಿಸಲು ಬಯಸಿರುವೆ. ನಿನ್ನ ಅಣ್ಣ ಶ್ರೀರಾಮ ಚಿತ್ರಕೂಟದಲ್ಲಿ ಇದ್ದಾನೆ, ನೀವು ಇಂದು ರಾತ್ರಿ ಇಲ್ಲಿಯೇ ಕಾಲ ಕಳೆದು ನಾಳೆ ಪ್ರಯಾಣವನ್ನು ಮುಂದುವರಿಸಿರಿ, ಎಂದು ಭರತನ ಪರಿವಾರಕ್ಕೆ ಔತಣವನ್ನು ಏರ್ಪಡಿಸಿದ್ದರು.

ಭಾರಧ್ವಜರಿಂದ ಆಶೀರ್ವಾದವನ್ನು ಪಡೆದ ಭರತನು ಸುಂದರವಾದ ಪರ್ವತ, ವನಗಳನ್ನು ನೋಡುತ್ತಾ ಬರುತ್ತಿರುವಾಗ, ಚಿತ್ರಕೂಟ ಪರ್ವತವನ್ನು ತಲುಪಿದನು .ವಸಿಷ್ಠರನ್ನು ಕುರಿತು ಈ ರೀತಿ ಭರತನು ಹೇಳಿದನು. ಮಹಾತ್ಮರೇ, ಆಗೋ ಮಂದಾಕಿನಿ ನದಿ ಇದೆ . ಚಿತ್ರ ಕೂಟ ಪರ್ವತವು ಇಲ್ಲಿಯೇ ಇದೆ. ಶ್ರೀರಾಮನ ಆಶ್ರಮ ವಿರಬಹುದು. ಅಡವಿಯಲ್ಲಿ ಕ್ರೂರ ಪ್ರಾಣಿಗಳಿವೆ, ಹೂವು ಬಿಟ್ಟ ಮರಗಳಿವೆ, ನವಿಲು , ಜಿಂಕೆ ಎಲ್ಲವೂ ಕಾಣುತ್ತಿವೆ. ಸೈನಿಕರು ಮುಂದೆ ಹೋಗಿ ಆಶ್ರಮವನ್ನು ಹುಡುಕಲಿ ಎಂದರು ದೂರದಲ್ಲಿ ಒಂದು ಕಡೆ ಹೊಗೆಯನ್ನು ಕಂಡು ಅಲ್ಲಿಯೇ ಆಶ್ರಮ ಇರಬಹುದೆಂದು, ಊಹಿಸಿದರು. ಭರತನು ಉದ್ದೇಶದಿಂದಲೇ ಓಡುತ್ತಾ ಬರುತ್ತಿರುವಾಗ ರಾಮನು ಸೀತೆಗೆ ಪರ್ವತವನ್ನು ತೋರಿಸುತ್ತಿದ್ದನು . ಈ ಆಶ್ರಮದ ಸುತ್ತಲೂ ಇರುವ ಕ್ರೂರ ಪ್ರಾಣಿಗಳು ಸಹ ಮೃದು ತನದಿಂದ ವರ್ತಿಸುತ್ತಿವೆ. ಇದಕ್ಕೆ ಮುನಿಗಳ ತಪಸ್ಸು ಕಾರಣ ಎಂದು ವಿವರಿಸುತ್ತಿರುವ ಆಗಲೇ ಲಕ್ಷ್ಮಣನು ಅಲ್ಲಿಗೆ ಬಂದನು.

 

ಎಲ್ಲಾ ಪ್ರಾಣಿಗಳು ಹೆದರಿ ಓಡುತ್ತಿರುವುದನ್ನು ಕಂಡು ರಾಮನು ಏನು ನಡೆಯುವುದು ಎಂದು ಮರ ಹತ್ತಿ ನೋಡಲು ಲಕ್ಷ್ಮಣನಿಗೆ ಹೇಳಿದನು. ಆಗ ಲಕ್ಷ್ಮಣನು ಮರ ನೋಡಿದಾಗ, ಆಲ್ಲಿ ಅಯೋಧ್ಯೆಯ ಸೈನ್ಯದೊಂದಿಗೆ ಭರತನೇ ಬರುತ್ತಿದ್ದಾನೆ. ಎಂದು ತಿಳಿಸಿದನು. ನಿನ್ನನ್ನು ಅಡವಿಗೆ ಕಳಿಸಿದ್ದು ಸಾಲದು ಎಂದು ಈಗ ನಿನ್ನ ಮೇಲೆ ದಂಡೆತ್ತಿ ಬಂದಿದ್ದಾನೆ ಎಂದು ಲಕ್ಷ್ಮಣನು ಸಂದೇಹ ಪಟ್ಟಾಗ, ಲಕ್ಷ್ಮಣನ ಸಂದೇಹವನ್ನು ರಾಮನು ಅವನು ಬಾಲ್ಯದಿಂದಲೂ ಇದ್ದ ವರ್ತನೆಯನ್ನು ವಿವರಿಸಿ ತಿಳಿಸಿ ಹೇಳಿ ದೂರ ಮಾಡಿದನು.

 

 

ನಿಜವಾಗಿಯೂ ಭರತನು ನಿನ್ನನ್ನು ನೋಡಲು ಬಂದಿದ್ದಾನೆಯೇ ? ರಾಜ್ಯವನ್ನು ನನಗೆ ಕೊಡಲು ಬಂದಿದ್ದಾನೆ ಯುದ್ಧಕ್ಕಾಗಿ ಬಂದಿಲ್ಲವೆಂದು ತಿಳಿಸಿ, ನಿನಗೆ ರಾಜ್ಯದ ಆಸೆ ಇದ್ದರೆ ಹೇಳು , ರಾಜ್ಯವನ್ನು ಭರತನಿಗೆ ಹೇಳಿ ಕೊಡಿಸುತ್ತೇನೆ ಎಂದು ಹೇಳಿದನು. ನಿಮ್ಮೆಲ್ಲರಿಗಾಗಿ ನಾನು ರಾಜ್ಯವನ್ನು ಸ್ವೀಕರಿಸಲು ಸಿದ್ಧನಾದೆ, ದುಃಖದಿಂದ ಬಂದವರು ತನ್ನನ್ನು ಸ್ವಾಗತಿಸೋಣವೆಂದು ಹೇಳುತ್ತಿರುವಾಗಲೇ, ಭರತನು ಇನ್ನೇನು ರಾಮನ ಪಾದಗಳನ್ನು ಮುಟ್ಟುವಷ್ಟರಲ್ಲಿ ಮೂರ್ಛೆ ಹೊಂದಿ ಬಿದ್ದುಬಿಟ್ಟನು. ರಾಮನು ಭರತನನ್ನು ಅಪ್ಪಿಕೊಂಡು ಸಂತೈಸಿದನು.

 

 

ರಾಮನು ಭರತನನ್ನು ಕುರಿತು ಏಕೆ ಕಾಡಿಗೆ ಬಂದೇ ತಂದೆಯವರ ಆರೋಗ್ಯ ಹೇಗಿದೆ. ಎಲ್ಲರೂ ಸೇರಿ ತಂದೆಯವರನ್ನು ಉತ್ತಮವಾಗಿ ನೋಡಿ ಕೊಳ್ಳುತ್ತಿದ್ದೀರಾ ಅಲ್ಲವೇ ? ಎಂದು ಕೇಳಿದಾಗ ಭರತನು ಅಣ್ಣಾ , ಇನ್ನೆಲ್ಲಿ ನಮ್ಮ ತಂದೆಯವರು ನೀನು ಅರಮನೆ ಬಿಟ್ಟು ಹೊರಟ ಮೇಲೆ ಪುತ್ರ ವಿಯೋಗ ದುಃಖದಿಂದ ಮರಣ ಹೊಂದಿದನು. ಮಹಾರಾಜ ದಶರಥ ಯಾವ ಮಕ್ಕಳು ಸನಿಹದಲ್ಲಿ ಇಲ್ಲದೇ ಇದ್ದಾಗಲೇ ಸತ್ತರು. ಈ ಎಲ್ಲಾ ಅನಾಹುತಗಳು ಸಹ ನನ್ನಿಂದಾಗಿ ಎನ್ನುತ್ತಿದ್ದಾಗಲೇ , ಸೀತಾರಾಮ, ಲಕ್ಷ್ಮಣರು ಪ್ರಜ್ಞೆ ಕಳೆದುಕೊಂಡು ಬಿದ್ದರು. ಸಮಾಧಾನ ಹೊಂದಿದ ನಂತರ ರಾಮನು ವಿಧಿ ಬರಹವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ತಂದೆಯವರನ್ನು ಕಳೆದುಕೊಂಡದ್ದು ನಮ್ಮ ದುರ್ದೈವವೇ ಆಗಿದೆ. ನೀನು ಈಗ ರಾಜನಾಗಿ ವಂಶಕ್ಕೆ ಕೀರ್ತಿ ತರಬೇಕು. ಪ್ರಜಾ ವರ್ಗವನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಹೇಳಿದರು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top