ಸಮಾಚಾರ

ರಾಕಿಂಗ್ ಸ್ಟಾರ್ ಯಶ್ ಪ್ರಕಾರ ವೋಟ್ ಮಾಡದವರು ಏನಂತೆ ಗೊತ್ತಾ?

ಇಡೀ ಕರ್ನಾಟಕದಲ್ಲಿ ಸದ್ಯ ಚುನಾವಣೆಯ ಬಿಸಿಗಾಳಿ ಬೀಸತೊಡಗಿದೆ. ವಿವಿಧ ಪಕ್ಷಗಳ ರಾಜಕಾರಣಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರಗಳು ನಡೆಸುತ್ತಿವೆ.. ಸಾರ್ವತ್ರಿಕ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನಲೆಯಲ್ಲಿ ಮತದಾನದ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲು ನಟ ಯಶ್ ಮುಂದಾಗಿದ್ದು ಯುವಜನತೆಯಲ್ಲಿ ಮತದಾನವನ್ನು ಪ್ರೇರೇಪಿಸಿದ್ದಾರೆ.

 

 

ರಾಕಿಂಗ್ ಸ್ಟಾರ್ ಯಶ್ ಈ ವರೆಗೆ ಹಲವಾರು ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುತ್ತಾ ಸೈ ಅನ್ನಿಸಿಕೊಂಡಿದ್ದರೂ ಯಾವುದೇ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ. ಆದರೆ ಅವರು ಆಗ ರಾಜಕೀಯಕ್ಕೆ ಬರುತ್ತಾರಂತೆ, ಈಗ ಬರುತ್ತಾರಂತೆ. ಆ ಪಕ್ಷ ಸೇರ್ತಾರಂತೆ, ಈ ಪಕ್ಷ ಸೇರತಾರಂತೆ ಎಂಬಂತ ನಾನಾ ವಿಚಾರಗಳು ಸದಾ ಚರ್ಚೆಯಲ್ಲಿರುತ್ತವೆ. ಏನನ್ನೇ ಮಾಡಿದರೂ ಭಿನ್ನವಾಗಿ ಆಲೋಚಿಸುವ ಯಶ್ ರಾಜಕೀಯದ ವಿಚಾರದಲ್ಲೂ ಅಷ್ಟೇ ಭಿನ್ನತೆಯನ್ನು ಹೊಂದಿದ್ದಾರೆ ಎಂಬುದು ಅವರ ಮಾತುಗಳಲ್ಲೇ ಅವಾಗವಾಗ ಕೇಳಿಬರುತ್ತಿರುತ್ತದೆ. ಅದು ಈಗ ಮತ್ತೊಮ್ಮೆ ಸಾಬೀತಾಗಿದೆ.

 

 

ಇತ್ತೀಚಿಗೆ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಗುಳ್ಟು ಚಿತ್ರವನ್ನು ವೀಕ್ಷಿಸಲೆಂದು ಒರಿಯನ್ ಮಾಲಿಗೆ ಆಗಮಿಸಿದ ನಟ ಯಶ್ಅವರಿಗೆ ಅಲ್ಲಿ ಬಂದಿದ್ದ ಸುದ್ದಿಗಾರರು ಮತ್ತದೇ ರಾಜಕೀಯಕ್ಕೆ ಸಂಭಂದಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದರು. ನೀವು ರಾಜಕೀಯಕ್ಕೆ ಬರ್ತೀರಾ? ಚುನಾವಣಾ ಪ್ರಚಾರ ಮಾಡ್ತೀರಾ? ರಾಮರಾಜ್ಯ ಅಂದರೆ ಏನು? ಎಂಬಿತ್ಯಾದಿ ಪ್ರಶ್ನೆಗಳನ್ನು ಯಶ್ ಅವರನ್ನು ಕೇಳಿ ಅವರ ಬಳಿ ಉತ್ತರ ಪಡೆದುಕೊಂಡರು..

ಈ ವೇಳೆ ಕೆಲವರು ಮತಚಲಾವಣೆ ಮಾಡಲು ಹಿಂದೇಟು ಹಾಕುತ್ತಾರಲ್ಲ ಅವರ ಬಗ್ಗೆ ಏನ್ ಹೇಳ್ತೀರಾ ಎಂದು ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್ “ಮತದಾನ ಮಾಡಲು ಹಿಂದೇಟು ಹಾಕಬಾರದು.ಚುನಾವಣೆಯಲ್ಲಿ ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು ಜೊತೆಗೆ ಕರ್ತವ್ಯ ಕೂಡ ಹೌದು. . ನಮ್ಮ ಸಮಾಜ, ರಾಜ್ಯ, ದೇಶಗಳನ್ನು ಆಳುವುದಕ್ಕೆ ಕೆಲವರಿಗೆ ಜವಾಬ್ದಾರಿ ಕೊಡುವ ಪ್ರಕ್ರಿಯೆ ಆಗಿದೆ. ಯಾವುದೊ ಒಂದು ಸಣ್ಣ ಸಣ್ಣ ಕೆಲಸಗಳಿಗೆ ತುಂಬಾ ತಲೆಕೆಡಿಸಿಕೊಂಡು, ಯೋಚನೆ ಮಾಡುತ್ತೇವೆ. ಆದರೆ ಇಷ್ಟು ದೊಡ್ಡದಾದ ಪ್ರಕ್ರಿಯೆಯಲ್ಲಿ ನಿರ್ಲಿಪ್ತರಾಗಿದ್ದರೆ ಹೇಗೆ? ನಮ್ಮನ್ನು ಆಳುವವರನ್ನು ನಾವೇ ಆಯ್ಕೆ ಮಾಡಬೇಕು ಒಂದುವೇಳೆ ವೋಟ್ ಮಾಡದೇ ಹೋದರೆ ಅದು ಬದುಕಿದ್ದು ಸತ್ತಂತೆ. ಅಂತವರು ಬದುಕಿದ್ದು ಸತ್ತಹಾಗೆ” ಎಂದು ಯಶ್ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top