ಆರೋಗ್ಯ

ಈರುಳ್ಳಿ ಬರೀ ಕಣ್ಣೀರು ಕೊಡಲ್ಲ ಅದು ಈ ಸಮಸ್ಯೆಗಳಿಂದ ನಿಮ್ಮನ್ನ ಹೊರಬರುವಂತೆ ಮಾಡಿ ನಿಮ್ಮ ಮುಖದ ಮೇಲಿನ ನಗುವಿಗೂ ಕಾರಣವಾಗುತ್ತೆ ಗೊತ್ತಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಈರುಳ್ಳಿಯನ್ನು ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಆಹಾರ ತಯಾರಿಸಲು ಮಾತ್ರ ಬಳಸುತ್ತೇವೆ.ಆದರೆ ನಿಮಗೆ ಗೊತ್ತೇ ಈರುಳ್ಳಿಯಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಷ್ಟು ಗುಣಗಳಿವೆ ಅಂತ…? ಈರುಳ್ಳಿ ಕಣ್ಣಿಗೆ ತುಂಬಾ ಒಳ್ಳೆಯ ಔಷಧಿ. ಇದು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರಿಬೊಫ್ಲೇವಿನ್ (Riboflavin) ಅಂಶವನ್ನು ಹೊಂದಿದೆ.

ಇಲ್ಲಿದೆ ನೋಡಿ ಈರುಳ್ಳಿಯ ಆರೋಗ್ಯ ಲಾಭಗಳು :

ಈರುಳ್ಳಿ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.ಇದಲ್ಲದೆ, ಈರುಳ್ಳಿಯನ್ನು ಹಾಗೆಯೇ ತಿನ್ನುವುರಿಂದ ಗಂಟಲು ನೋವು ಕಡಿಮೆಯಾಗುತ್ತದೆ.

 

 

ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ, ಮತ್ತು ಇದು ಮಧುಮೇಹ ಬರುವುದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನೂ ಈರುಳ್ಳಿ ಮಾಡುತ್ತದೆ.

 

 

ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಯ ಒಳಗಡೆ ಹಾಕಿದರೆ ಕಿವಿನೋವು ಅಥವಾ ಕಿವಿ ಸೋರುವಿಕೆ ಕಡಿಮೆಯಾಗುತ್ತದೆ.

 

 

ಈರುಳ್ಳಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ , ನಂಜುನಿರೋಧಕ ಗುಣಗಳಿವೆ. ಇದು ದೇಹಕ್ಕೆ ಬರುವ ಸೂಕ್ಷ್ಮಾಣುಜೀವಿಗಳನ್ನು ತಡೆದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

 

 

 

ನಿಮಗೆ ಅಸ್ತಮಾ ಇದ್ದರೆ, ಒಂದು ಲೋಟ ನೀರಿಗೆ ಸ್ವಲ್ಪ ಈರುಳ್ಳಿ ರಸ, ಇಂಗು ಮತ್ತು ಕಪ್ಪು ಉಪ್ಪು ಸೇರಿಸಿ ಕುಡಿದರೆ ತುಂಬಾ ಆರಾಮ ಸಿಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top