ಸಿನಿಮಾ

ಬಾಲಿವುಡ್ ಎಂಟ್ರಿ ಕೊಟ್ಟ ಜಗಪತಿಬಾಬು ಯಾವ ಸಿನಿಮಾ ಅಂತೀರಾ ಮುಂದೆ ಓದಿ

ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಕನ್ನಡದ ‘ಬಚ್ಚನ್’ ಚಿತ್ರದಲ್ಲಿ ವಿಶೇಷ ಪಾತ್ರ ಪೋಷಿಸಿರುವ, ತೆಲುಗು ಚಿತ್ರನಟ ಜಗಪತಿ ಬಾಬು ದಕ್ಷಿಣ ಭಾರತದ ಬಹಳಷ್ಟು ಬಿಗ್ ಬಜೆಟ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗು ಮಲಯಾಳಿ ಚಿತ್ರದಲ್ಲಿ ಅಭಿನಯ ಮಾಡಿರುವ ಅನುಭವ ಇರುವ ಇವರು ಈಗ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ.

 

 

ಇದೆ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ಜಗಪತಿ ಬಾಬು ಅಭಿನಯ ಮಾಡಲಿದ್ದಾರೆ. ಸಲ್ಮಾನ್ ಖಾನ್ ನಾಯಕ ನಟನಾಗಿರುವ ದಬಾಂಗ್‌‌-3 ಚಿತ್ರದಲ್ಲಿ ಜಗಪತಿ ಬಾಬು ಅಭಿನಯ ಮಾಡಲಿದ್ದಾರೆ. ಈ ಚಿತ್ರದಲ್ಲಿ ಜಗಪತಿ ವಿಲನ್ ರೋಲ್ ನಲ್ಲಿ ನಟನೆ ಮಾಡುತ್ತಿರಬಹುದು ಎನ್ನಲಾಗಿದೆ.

 

 

ದಬಾಂಗ್‌‌‌-3 ಚಿತ್ರೀಕಣರ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು ಮುಂದಿನ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಈಗ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಇದೊಂದು ಬಿಗ್ ಬಜೆಟ್ ಚಿತ್ರವಾಗಿದ್ದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ಈ ವರ್ಷದ ಕೊನೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top