ಸಮಾಚಾರ

ಕಾಸ್ಟಿಂಗ್ ಕೌಚ್ ವಿಚಾರವಾಗಿ ಹೊಸ ಬಾಂಬ್ ಸಿಡಿಸಿದ ರಾಮ್ ಗೋಪಾಲ್ ವರ್ಮಾ: ಟಾಲಿವುಡ್ ತಲ್ಲಣ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಅದೇನೇ ಸಾಮಾಜಿಕ ಪಲ್ಲಟಗಳು ಸಂಭವಿಸಿದರೂ ಅದಕ್ಕೆ ಸಡನ್ನಾಗಿ ಫೇಸ್ ಬುಕ್ ಅಥವಾ ಟ್ವಿಟರ್ ಮೂಲಕ ಮಧ್ಯದಲ್ಲಿ ನಂದೂ ಒಂದು ಇರಲಿ ಅನಂತ ಪ್ರತಿಕ್ರಿಯೆ ನೀಡುವುದನ್ನು ಮೈಗೂಡಿಸಿಕೊಂಡು ಬಂದಿರುವವರು ಬಾಲಿವುಡ್ಡಿನ ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಆದರೆ ಇತ್ತೀಚೆಗ್ಯಾಕೋ ವರ್ಮಾ ತಮ್ಮ ಚಿತ್ರಗಳ ಮೂಲಕಾ ಗಮನಸೆಳೆಯೋದರ ಬದಲು ಅವರಿವರ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಾ, ವಿನಾಃ ಕಾರಣ ವಿವಾದದ ಕೇಂದ್ರ ಬಿಂದುವಾಗುತ್ತಾ ಸುದ್ದಿ ಮಾಡಿದ್ದೇ ಹೆಚ್ಚು.

 

 

ಇಂತಹ ವರ್ಮಾ ಇದೀಗ ಟಾಲಿವುಡ್ ಅಂಗಳದಲ್ಲಿ ಸ್ಪೋಟವಾಗಿರುವ ಕಾಸ್ಟಿಂಗ್ ಕೌಚ್ ವಿವಾದದ ಬಗ್ಗೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ. ಇತ್ತೀಚಿಗೆ ಕಾಸ್ಟಿಂಗ್ ಕೌಚ್ ವಿರುದ್ಧ ರೊಚ್ಚಿಗೆದ್ದು ನಡುರಸ್ತೆಯಲ್ಲಿ ಬಟ್ಟೆಗಳನ್ನು ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದೇಟಿಗೆ ತೆಲುಗು ಚಿತ್ರರಂಗದೊಳಗೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಈ ಬಗ್ಗೆ ಮೊನ್ನೆ ಟ್ವೀಟ್ ಮಾಡಿದ ವರ್ಮಾ ಶ್ರೀ ರೆಡ್ಡಿಯವರ ಈ ನಡೆಯನ್ನು ಮೆಚ್ಚಿಕೊಂಡಿದ್ದರು. ಇದೀಗ ಕಾಸ್ಟಿಂಗ್ ಕೌಚ್ ವಿಚಾರವಾಗಿ ಹೊಸ ಬಾಂಬ್ ವೊಂದನ್ನು ವರ್ಮಾ ಸಿಡಿಸಿದ್ದು ಟಾಲಿವುಡ್ ನ ಪ್ರಸಿದ್ಧ ನಟಿ ಮತ್ತು ನಿರ್ಮಾಪಕರ ನಡುವಿನ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ.

 

 

ಕಾಸ್ಟಿಂಗ್ ಕೌಚ್ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದ ವರ್ಮಾ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಪದ್ಧತಿ ಈಗಲೂ ಜೀವಂತವಾಗಿರುವುದನ್ನು ಒಪ್ಪಿಕೊಂಡಿದ್ದು “ನನ್ನ ಮುಂದೆಯೇ ನನಗೆ ಗೊತ್ತಿರುವ ನಿರ್ಮಾಪಕನೊಬ್ಬ ನಟಿಯೊಬ್ಬಳಿಗೆ ಬೆಡ್ಡಿಗೆ ಆಹ್ವಾನಿಸಿದ್ದ” ಎಂಬ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

“ಚಿತ್ರರಂಗದಲ್ಲಿ ಹೆಸರು ಮಾಡಿರುವ ದೊಡ್ಡ ನಿರ್ಮಾಪಕನೊಬ್ಬ ನನ್ನನ್ನು ಮಂಚಕ್ಕೆ ಕರೆದಿದ್ದಾನೆ ಎಂದು ಹೇಳಿಕೊಂಡು ಒಬ್ಬ ನಟಿ ನನ್ನ ಬಳಿ ಬಂದು ಹೇಳಿದಳು. ಆ ನಿರ್ಮಾಪಕ ನನಗೆ ಚನ್ನಾಗಿ ಗೊತ್ತಿತ್ತು ಹಾಗಾಗಿ ಆಕೆಯ ಮಾತನ್ನು ನಾನು ನಂಬಲಿಲ್ಲ. ನಾನು ನಂಬದಿದ್ದಾಗ ಆಕೆ ನನ್ನ ಎದುರಲ್ಲೇ ಆ ನಿರ್ಮಾಪಕನಿಗೆ ಕರೆ ಮಾಡಿ ಲೌಡ್ ಸ್ವೀಕರ್ ಆನ್ ಮಾಡಿ ಆತನೊಂದಿಗೆ ಮಾತನಾಡಿದಳು.”

 

 

“ಸರ್, ನಾನು ನಿಮ್ಮ ಆಫೀಸಿಗೆ ಬಂದಿದ್ದಾಗ ನೀವು ನನಗೆ ಕಾಂಪ್ರಮೈಸ್ ಆಗಬೇಕು ಎಂತ ಹೇಳಿದ್ರಿ ಅದು ಏನು ಅಂತ ನನಗೆ ಅರ್ಥವಾಗಿಲ್ಲ. ಏನದು? ಅಂತ ಕೇಳಿದಳು. ಅದಕ್ಕೆ ಆತ ಕಾಂಪ್ರುಮೈಸ್ ಅಂದ್ರೆ ಎಲ್ಲರಿಗೆ ಗೊತ್ತಿರೋ ವಿಷ್ಯನೇ, ನಿಂಗ್ ಗೊತ್ತಿಲ್ಲ್ವಾ? ಅಂದನು ಆಗ ಆ ನಟಿ ನಿಮ್ಮ ಜೊತೆ ಬೆಡ್ ಶೇರ್ ಮಾಡ್ಬೇಕಾ? ಎಂದು ಕೇಳಿದಳು. ಆಗ ನಿರ್ಮಾಪಕ, ಎಲ್ಲವೂ ನಿನಗೆ ಗೊತ್ತಿದೆ ಸುಮ್ಮನೆ ಯಾಕ್ ನಾಟಕ ಆಡ್ತೀಯ?? ಅಂದ. ಸಾರ್ ಮಂಚದಲ್ಲಿ ನಿಮಗೆ ಸಹಕರಿಸಿದರೆ ಚಿತ್ರದ ಹೀರೋ ಮತ್ತು ಡೈರೆಕ್ಟರ್ ಅಷ್ಟು ಸಿನಿಮಾದಲ್ಲಿ ನನ್ನನ್ನು ಹೀರೋಯಿನ್ ಆಗೋಕೆ ಒಪ್ಪಿಕೊಳ್ತಾರ? ಎಂದು ಕೇಳಿದಳು. ಅದಕ್ಕೆ ಆತ ನಿನಗೆ ನನ್ನ ಬಗ್ಗೆ ಗೊತ್ತಿಲ್ಲ ಅವರು ಒಪ್ಪಿಕೊಳ್ಳದಿದ್ದರೆ ಅವರನ್ನೇ ಚಿತ್ರದಿಂದ ತೆಗೆದುಹಾಕುತ್ತೇನೆ ಎಂದು ಹೇಳಿದನು.”

ಆ ನಿರ್ಮಾಪಕನ ಧ್ವನಿ ನನಗೆ ಚನ್ನಾಗಿ ಗೊತ್ತಾಯಿತು, ಆತನ ಜೊತೆ ಮಾತನಾಡಿದ ಆ ಸಂಭಾಷಣೆಯನ್ನು ಆ ನಟಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.. ಅವರ ಸಂಭಾಷಣೆಯನ್ನು ಕೇಳಿ ಒಂದು ಕ್ಷಣ ನನಗೆ ಶಾಕ್ ಆಯಿತು, ಆ ಚಿತ್ರ ಯಾವುದು, ಆ ಹೀರೋ ಯಾರು, ಆ ನಿರ್ಮಾಪಕ ಯಾರು ಎಂಬ ಎಲ್ಲಾ ವಿಷಯವೂ ನನಗೆ ಗೊತ್ತಿದೆ. ಒಂದು ವೇಳೆ ಆಕೆಯೇನಾದರೂ ಆ ಸಂಭಾಷಣೆಯ ಆಡಿಯೋವನ್ನ ರಿಲೀಸ್ ಮಾಡಿದ್ರೆ, ಅವರ ಕಥೆ ಅಷ್ಟೇ. ” ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದ್ದು ಇಡೀ ಟಾಲಿವುಡ್ಡೇ ತಲ್ಲಣಗೊಂಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top