ಸಮಾಚಾರ

ಈ ಕಾರಣಕ್ಕೆ ಧೋನಿ ಅಭಿಮಾನಿಗಳಿಂದ ಟ್ರೊಲ್’ಗೆ ಒಳಗಾದ ರೋಹಿತ್ ಶರ್ಮಾ ಹಾಗು ಪತ್ನಿ ರಿತಿಕಾ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲ ಒಂದು ಕಾರಣಕ್ಕೆ ಸೆಲೆಬ್ರಿಟಿ ಗಳು ಟ್ರೊಲ್ ಆಗುತ್ತಲೇ ಇರುತ್ತಾರೆ ಈಗ ರೋಹಿತ್ ಶರ್ಮಾ ಹಾಗು ಪತ್ನಿ ರಿತಿಕಾ ಅವರನ್ನು ಟ್ರೋಲಿಗರು ಹಿಗ್ಗಾ ಮುಗ್ಗಾ ಟ್ರೊಲ್ ಮಾಡಲು ಶುರು ಮಾಡಿದ್ದಾರೆ ಏಕೆ ಅಂತೀರಾ ಹಾಗಾದರೆ ಮುಂದೆ ಓದಿ.

 

 

ರೋಹಿತ್ ಟ್ರೊಲ್ ಆಗಿದ್ದು ಮುಂಬೈ ಇಂಡಿಯನ್ಸ್ ಪಂದ್ಯ ಸೋತಿದ್ದಕ್ಕೆ ಅಲ್ಲ. ಬದಲಾಗಿ ಪತ್ನಿ ರಿತಿಕಾ ಮಾಡಿದ ಯಡವಟ್ಟಿನಿಂದಾಗಿ, ಹೌದು ರಿತಿಕಾ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಜಾಹಿರಾತೊಂದನ್ನು ಪೋಸ್ಟ್ ಮಾಡಿದ್ದರು ಅದರಲ್ಲಿ ರೋಹಿತ್ ಶರ್ಮಾಗೆ “ಕ್ಯಾಪ್ಟನ್ ಕೂಲ್” ಎಂಬ ಶೀರ್ಷಿಕೆ ನೀಡಲಾಗಿತ್ತು. ಧೋನಿಗೆ ಈಗಾಗಲೇ ಕ್ಯಾಪ್ಟನ್ ಕೂಲ್ ಎಂದು ಕರೆಯುತ್ತಾರೆ. ಈಗ ರೋಹಿತ್ ಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರಿನಿಂದ ಕರೆದದ್ದು ಧೋನಿ ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಿತು. ಇದರಿಂದ ಧೋನಿ ಅಭಿಮಾನಿಗಳು ಟ್ರೊಲ್ ಮಾಡಲು ಶುರುಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಆದರೆ ಅನೇಕ ಅಭಿಮಾನಿಗಳು ರೋಹಿತ್ ಶರ್ಮಾ ಸಮರ್ಥನೆ ಕೂಡ ಮಾಡಿದ್ದಾರೆ. ಟಿ 20 ಪಂದ್ಯದಲ್ಲಿ ರೋಹಿತ್ ತಂಡವನ್ನು ಉತ್ತಮವಾಗಿ ನಿಭಾಯಿಸುತ್ತಾರೆ. ಅವರನ್ನು ಕ್ಯಾಪ್ಟನ್ ಕೂಲ್ ಎಂದರೆ ತಪ್ಪಿಲ್ಲ ಎನ್ನುತ್ತಿದ್ದಾರೆ. ರೋಹಿತ್ ಮುಂಬೈ ತಂಡವನ್ನು ಯಶಸ್ವಿ ಆಗಿ ಮುನ್ನೆಡುತ್ತಿದ್ದಾರೆ. ಇನ್ನು ವಿರಾಟ ಕೊಹ್ಲಿ ಅನುಪಸ್ಥಿತಿ ಇದ್ದಾಗ ಭಾರತ ತಂಡವನ್ನು ಕೂಡ ಯಶಸ್ವಿ ಆಗಿ ಮುನ್ನೆಡಿಸಿರುವ ಉದಾಹರಣೆ ಇದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top