ದೇವರು

ಏಪ್ರಿಲ್ 18ನೇ ತಾರೀಖಿನ ಅಕ್ಷಯ ತೃತೀಯ ಹಬ್ಬ ಹನ್ನೊಂದು ವರ್ಷಗಳ ನಂತರ ಒಂದು ಮಹಾ ಸಂಯೋಗದೊಂದಿಗೆ ಕೂಡಿ ಬಂದಿದೆ ಇದರ ವಿಶೇಷಗಳೇನು ತಿಳಿಯಿರಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಏಪ್ರಿಲ್ ಹದಿನೆಂಟನೇ ತಾರೀಖಿನಂದು ಅಕ್ಷಯ ತೃತೀಯ ಇದೆ .ಹನ್ನೊಂದು ವರ್ಷಗಳ ನಂತರ ಅಕ್ಷಯ ತೃತಿಯ ಒಂದು ಮಹಾ ಸಂಯೋಗದೊಂದಿಗೆ ಕೂಡಿ ಬಂದಿದೆ .

 

ಹಿಂದೂ ಪಂಚಾಂಗದ ಪ್ರಕಾರ ಶುಕ್ಲ ಪಕ್ಷದ ,ತೃತೀಯ ತಿಥಿಯ ದಿನ ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ಬಾರಿ ಏಪ್ರಿಲ್  ಹದಿನೆಂಟನೇ ತಾರೀಖಿನಂದು ಅಕ್ಷಯ ತೃತೀಯ  ಬಂದಿದೆ. ಶಾಸ್ತ್ರಗಳ ಪ್ರಕಾರ ನೀವು ಆ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡಿದರೂ ಅದಕ್ಕೆ ಅಕ್ಷಯವಾಗುವ ಅಂದರೆ ದ್ವಿಗುಣವಾಗಿ ಹೆಚ್ಚಾಗುವ ಯೋಗ ಇರುತ್ತದೆ. ಹೆಚ್ಚು ಫಲ ಈ ದಿನ ಲಭಿಸುತ್ತದೆ.

 

 

ಈ ಬಾರಿ ಅಕ್ಷಯ ತೃತೀಯ  ಹನ್ನೊಂದು ವರ್ಷಗಳ ನಂತರ ಇಪ್ಪತ್ತ್ನಾಲ್ಕು ಗಂಟೆಗಳ ಸರ್ವಾರ್ಥ ಸಿದ್ಧಿ ಯೋಗದಿಂದ ಕೂಡಿ ಬಂದಿದೆ. ಇದನ್ನು ಮಹಾ ಸಂಯೋಗ ಎಂದು ಹೇಳಲಾಗಿದೆ.  ಯಾವುದೇ ಶುಭ ಕಾರ್ಯವನ್ನು ಮಾಡಿದರೂ ಅದನ್ನು ಶುಭ ಎಂದೇ ಪರಿಗಣಿಸಲಾಗುತ್ತದೆ.

ಈ ದಿನ ಅನೇಕ ಕಡೆಗಳಲ್ಲಿ  ಪರಶುರಾಮ ಜಯಂತಿ ಎಂದು ಕೂಡ ಆಚರಿಸುತ್ತಾರೆ. ಅಕ್ಷಯ ತೃತೀಯವನ್ನು ಶಾಸ್ತ್ರದಲ್ಲಿ ಪುಣ್ಯ ಮತ್ತು ಧನ ಲಾಭವನ್ನು ತಂದುಕೊಡುತ್ತದೆ ಎಂದು ಹೇಳಲಾಗುತ್ತದೆ . ಯಾರು ಶುಭ ಕೆಲಸವನ್ನು ಮಾಡುತ್ತಾರೋ, ಅದು ಎಂದಿಗೂ ಕೊನೆಗೊಳ್ಳುವುದಿಲ್ಲ. ಅದು ಅಕ್ಷಯವಾಗಿಯೇ ಉಳಿಯುತ್ತದೆ. ಯಾರು ದಾನವನ್ನು ಮಾಡುತ್ತಾರೋ ಅವರಿಗೆ ಅಕ್ಷಯ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ದಿನ ಮಾತೆ ಲಕ್ಷ್ಮೀ  ದೇವಿಯ ಪೂಜೆಯನ್ನು ಮಾಡುವುದರಿಂದ ವಿಶೇಷ ರೂಪವಾಗಿ ಫಲಗಳು ಲಭಿಸುತ್ತವೆ.

 

 

ಅಕ್ಷಯ ತೃತೀಯದ ದಿನ ಹನ್ನೊಂದು ವರ್ಷಗಳ ನಂತರ ಇಪ್ಪತ್ತ್ನಾಲ್ಕು ಗಂಟೆಗಳ ಸರ್ವಾರ್ಥ  ಸಿದ್ಧಿ ಯೋಗ ಕೂಡಿ ಬಂದಿದೆ. ಅಕ್ಷಯ ತೃತೀಯ ಏಪ್ರಿಲ್  ಹದಿನೆಂಟನೇ ತಾರೀಖಿನಂದು , ಬೆಳಗ್ಗೆ ನಾಲ್ಕು ಗಂಟೆ ಹದಿನೇಳು  ನಿಮಿಷಕ್ಕೆ ಪ್ರಾರಂಭವಾಗಿ ಮುಂಜಾನೆ ಮೂರು ಗಂಟೆ ಮೂರು ನಿಮಿಷಗಳವರೆಗೆ ಇರುತ್ತದೆ.

ಸರ್ವಾರ್ಥ ಸಿದ್ಧಿ ಯೋಗವೂ ಬಂದಿರುವುದರಿಂದ ನೀವು ಈ ದಿನ ಏನಾದರೂ ಖರೀದಿಸಿದರೆ ಬಂಗಾರ, ಬೆಳ್ಳಿ, ವಾಹನ ಖರೀದಿ ನಿಮ್ಮ ಆಸೆಯೇ ಅನುಸಾರ ಒಂದು ಚಿಕ್ಕ ಬೆಳ್ಳಿಯ ನಾಣ್ಯವನ್ನಾದರೂ ಖರೀದಿಸಿ, ಒಂದು ದೊಡ್ಡ ಮನೆಯನ್ನಾದರೂ ಖರೀದಿಸಿದರೂ ಸಹ ಅದರಿಂದ ಶುಭ ಪರಿಣಾಮಗಳ ವ್ಯತ್ಯಾಸ ಒಂದೇ ಸಮವಾಗಿರುತ್ತದೆ. ಆದರೆ ಈ ದಿನ ನೀವು ಏನನ್ನು ಖರೀದಿಸಿದರೂ ಶುಭ ಎಂದೇ ಪರಿಗಣಿಸಲಾಗಿದೆ. ಪ್ರತಿಯೊಂದು ಕಾರ್ಯವೂ ಈ ದಿನ ವಿಶೇಷವಾಗಿದೆ . ಬಂಗಾರವನ್ನು ಖರೀದಿಸುವುದಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ.

 

 

ಬುಧವಾರದ ದಿನ ಕೃತಿಕಾ ನಕ್ಷತ್ರದಲ್ಲಿ,ಆಯುಷಮಾನ್ ಯೋಗದಲ್ಲಿ, ತೈತುಲ ಕರಣದ ಜತೆಗೆ ಬಂದಿದೆ. ಇದರ ಅರ್ಥ ಈ ನಕ್ಷತ್ರವನ್ನು ಗಣನೆಗೆ ತೆಗೆದುಕೊಂಡು ನೋಡಿದರೆ ಸಿದ್ದಿಯನ್ನು ತಂದುಕೊಡಲಿದೆ .

ಈ ಸರ್ವಾರ್ಥ ಸಿದ್ಧಿ ಯೋಗದಲ್ಲಿ ವಿವಾಹ , ಗೃಹ ಪ್ರವೇಶವನ್ನು ಮಾಡುವುದು ಅಥವಾ ಯಾವುದೇ ಮಂಗಳ ಕಾರ್ಯವನ್ನು ಮಾಡಲು ಕೂಡ ಇದು ಅತ್ಯಂತ ಶುಭ ಮತ್ತು ಯಶಸ್ಸನ್ನು ಗಳಿಸಿ ಸರ್ವಶ್ರೇಷ್ಠ ಎನಿಸಿಕೊಳ್ಳುತ್ತದೆ.

ಸತ್ಯಯುಗ ಮತ್ತು ತ್ರೇತಾಯುಗ ಇವೆರಡರ ಪ್ರಾರಂಭವಾಗಿದ್ದು ಕೂಡ ಇದೇ ದಿನವೇ ಆಗಿದೆ. ಆದ್ದರಿಂದ ಇದು ತುಂಬಾ ಅದೃಷ್ಟದ ದಿನ ಎಂದೇ ಹೇಳಲಾಗಿದೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top