ದೇವರು

ನಮ್ ದೇಶದಲ್ಲಿ ಗಂಡ ಹೆಂಡತಿ ಇಬ್ಬರೂ ಅಪ್ಪಿ ತಪ್ಪಿನೂ ಹೋಗ್ದೆ ಇರಬೇಕಾದ ಈ ವಿಚಿತ್ರ ಪದ್ಧತಿ ಇರೋ ಏಕೈಕ ದೇವಾಲಯ ಯಾವ್ದು ಗೊತ್ತಾ

ಭಾರತ ದೇಶದಲ್ಲಿ ಗಂಡ ಹೆಂಡತಿ ಇಬ್ಬರೂ ಹೋಗದೆ ಇರಬೇಕಾದ ದೇವಾಲಯ ಯಾವುದು ಗೊತ್ತಾ ? 

ಹೀಗೊಂದು ದೇವಾಲಯ ಇದೆಯಾ ಎಂದು ನೀವು ಅಂದುಕೊಳ್ಳುತ್ತಾ ಇರಬಹುದು , ಹೌದು ಹೀಗೊಂದು ದೇವಾಲಯ ಇದೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯಾವುದಾದರೂ ಪೂಜೆ ವ್ರತ ಮಾಡುವಾಗ ದಂಪತಿಗಳಿಬ್ಬರೂ ಸೇರಿ ಮಾಡಿದರೆ ಒಳ್ಳೆಯ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ, ಹೆಂಡತಿ ಗಂಡನ ಎಡಭಾಗದಲ್ಲಿ ಕುಳಿತು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆ ಆದರೆ ಈ ದೇವಾಲಯದಲ್ಲಿ ಈ ಪದ್ಧತಿಯನ್ನು  ಪಾಲಿಸಿಕೊಂಡು ಬರಲಾಗುತ್ತದೆ.

 

ಒಂದು ವೇಳೆ ಗಂಡ ಹೆಂಡತಿ ಏನಾದರೂ ಈ ದೇವಾಲಯಕ್ಕೆ ಹೋಗಿದ್ದೇ ಆದರೆ ಮೊದಲ ಹೆಂಡತಿ ದೇವಿಯ ದರ್ಶನವನ್ನು ಮಾಡಿಕೊಂಡು ಹೊರಗೆ ಬಂದ ನಂತರ ಕಂಡ ದೇವಸ್ಥಾನದ ಒಳಗೆ ಹೋಗುತ್ತಾನೆ ಈ ರೀತಿಯ ಪದ್ಧತಿ ಯಾಕೆ ಬಂದಿದೆ ಎಂದು ಅನಿಸಿ ಅನ್ನಿಸುತ್ತದೆ ಬನ್ನಿ ಈ ಪದ್ಧತಿಯ ಹಿಂದಿರುವ ರಹಸ್ಯವನ್ನು ನಾವೀಗ ತಿಳಿದುಕೊಳ್ಳೋಣ .

ಹಿಮಾಚಲ ಪ್ರದೇಶ ಹಾಗೂ ಶಿಮ್ಲಾದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದ ಅಧಿದೇವತೆ ದುರ್ಗಾ ಮಾತೆ ಅವಳನ್ನು ಶ್ರಾಯ ಕೋಟ ಮಾತಾ ಎಂದು ಕರೆಯುತ್ತಾರೆ ಇಲ್ಲಿ ಗರ್ಭಗುಡಿಯಲ್ಲಿ ದುರ್ಗೆ ಮಾತೆ ಇದ್ದು ಗಂಡ ಹೆಂಡತಿ ಇಬ್ಬರೂ ಒಟ್ಟೊಟ್ಟಿಗೆ ದೇವಿಯ ದರ್ಶನ ಮಾಡಬಾರದು ಒಂದು ವೇಳೆ ದೇವಿಯ ದರ್ಶನ ಮಾಡಿದ್ದೆ ಆದರೆ ಆ ದಂಪತಿಗಳ ಮಧ್ಯೆ ಜಗಳ ಬಂದು ಬೇರೆಯಾಗುತ್ತಾರೆ ಎಂದು ಇಲ್ಲಿನ ಜನರು ನಂಬುತ್ತಾರೆ.

ಯಾಕೆ ಹೀಗೆ ಇದರ ಹಿಂದಿರುವ ಪೌರಾಣಿಕ ಹಿನ್ನೆಲೆಯನ್ನು ತಿಳಿಯೋಣ 

 

ಗಣಗಳಿಗೆ ಅಧಿಪತಿಯನ್ನು ನೇಮಿಸಬೇಕೆಂದು ಶಿವ ಪಾರ್ವತಿ ನಿರ್ಧರಿಸುತ್ತಾರೆ ಆದರೆ ಅವರಿಬ್ಬರಿಗೆ ಇಬ್ಬರು ಪುತ್ರರಾದ ಕುಮಾರಸ್ವಾಮಿ ಹಾಗೂ ಗಣೇಶ ಇರುತ್ತಾರೆ ಇವರಿಬ್ಬರಲ್ಲಿ ಯಾರು ಹೆಚ್ಚು ಸಾಮರ್ಥ್ಯ ರು ಎಂದು ತಿಳಿಯಬೇಕೆಂದು ಬಯಸುತ್ತಾರೆ ಆಗ ಇಬ್ಬರನ್ನು ಪರೀಕ್ಷಿಸುವ ಸಲುವಾಗಿ ಇಬ್ಬರಿಗೂ ಒಂದು ಪಂದ್ಯವನ್ನು ಇಡುತ್ತಾರೆ .

ಇಬ್ಬರು ಮೂರು ಲೋಕವನ್ನು ಮೂರು ಬಾರಿ ಸುತ್ತಿ ಬರಬೇಕು ಎಂದು ಹೇಳಲಾಗುತ್ತದೆ ಯಾರು ಮೊದಲಿಗೆ ಮೂರು ಲೋಕವನ್ನು ಸುತ್ತಿ ಬರುತ್ತಾರೋ ಅವರೇ ಗಣಗಳಿಗೆ ಅಧಿಪತಿಯಾಗುತ್ತಾನೆ ಎಂದು ಶಿವ ಪಾರ್ವತಿ ಹೇಳುತ್ತಾರೆ ಆಗ ಕುಮಾರ ಸ್ವಾಮಿಯು ತನ್ನ ಮಯೂರ ರಥವನ್ನೇರಿ ಮೂರು ಲೋಕವನ್ನು ಸುತ್ತಲೂ ಹೋಗುತ್ತಾನೆ ಆದರೆ ತೀಕ್ಷ್ಣ ಬುದ್ಧಿ ಅವನಾಗಿದ್ದ ಗಣೇಶನು ತನ್ನ ತಂದೆ ತಾಯಿ ನಿಂತಿರುವ ಜಾಗದಲ್ಲಿ ಮೂರು ಪ್ರದಕ್ಷಿಣೆಗಳನ್ನು ಹಾಕಿ ನಾನು ಮೂರು ಲೋಕವನ್ನು ಸುತ್ತಿ ಬಂದೆ ಎಂದು ಹೇಳುತ್ತಾರೆ.

 

ಅವನ ಮಾತಿಗೆ ತಂದೆ ತಾಯಿಯರಿಗೆ ಬಹಳ ಸಂತೋಷವಾಗುತ್ತದೆ ಆಗ ಶಿವ ಪಾರ್ವತಿ ಗಣಗಳಿಗೆ ಅಧಿಪತಿಯಾಗಿ ಗಣೇಶನನ್ನು ನೇಮಕ ಮಾಡುತ್ತಾರೆ ಇದರಿಂದ ತೀವ್ರವಾಗಿ ಕುಪಿತನಾದ ಕುಮಾರಸ್ವಾಮಿಯು ಗಣೇಶನಿಗೆ ಯಾವಾಗಲೂ ತಂದೆ ತಾಯಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ ಇದರಿಂದಲೇ ತನಗೆ ಯಾವಾಗಲೂ ಸೋಲುಂಟಾಗುತ್ತದೆ ಎಂದು ಭಾವಿಸುತ್ತಾನೆ .

ಆ ನಂತರ ಗಣೇಶನಿಗೆ ಮದುವೆಯಾಗುತ್ತದೆ ಆದರೆ ಆದರೆ ಕುಮಾರಸ್ವಾಮಿ ಕೋಪಗೊಂಡ ದ್ದರಿಂದ ಮದುವೆಯಾಗುವುದಿಲ್ಲ ಎಂದು ತನ್ನ ನಿರ್ಧಾರವನ್ನು ತಂದೆ ತಾಯಿಗೆ ಹೇಳುತ್ತಾನೆ , ಆಗ ಪಾರ್ವತಿ ದೇವಿಯು ಕುಮಾರಸ್ವಾಮಿ ಯಾಕೆ ಹೀಗೆ ಆಡುತ್ತಿದ್ದಾನೆ ಎಂದು ಪರೀಕ್ಷಿಸಲಾಗಿ ತಾನು ನಿಂತಿರುವ ಜಾಗ ಸರಿಯಿಲ್ಲ ಅದರ ಪ್ರಭಾವಕ್ಕೆ ಒಳಗಾಗಿ ಈ ರೀತಿಯಾಗಿ ವರ್ತನೆ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುತ್ತಾಳೆ ಆ ಜಾಗವೇ ಈಗಿನ ಶ್ರಾಯ ಕೋಟ ಮಂದಿರ.

 

ಆದ್ದರಿಂದಲೇ ಆ ಜಾಗಕ್ಕೆ ಶಾಪ ಕೊಟ್ಟ ಪಾರ್ವತಿ ಇಲ್ಲಿ ದಂಪತಿಗಳು ಒಟ್ಟಿಗೆ ಬಂದರೆ ಅವರಿಬ್ಬರೂ ಬೇರೆಯಾಗುತ್ತಾರೆ ಎಂದು ಶಾಪ ನೀಡುತ್ತಾಳೆ .

ಆದ್ದರಿಂದಲೇ ದಂಪತಿಗಳು ಈ ದೇವಾಲಯಕ್ಕೆ ಒಟ್ಟಿಗೆ ಹೋಗಬಾರದು ಎಂದು ಹಿಂದಿನಿಂದಲೂ ಪದ್ಧತಿ ನಡೆದುಕೊಂಡು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top