ಮನೋರಂಜನೆ

ತಾತನ ಈ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ವಿನಯ್ ರಾಜಕುಮಾರ್!

ಹಿಂದಿನ ತಲೆಮಾರಿನಲ್ಲಿ ಮೂಡಿಬಂದಿದ್ದ ಜನಪ್ರಿಯ ಹಾಡುಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ತಮ್ಮ ಚಿತ್ರಗಳಲ್ಲಿ ಅಳವಡಿಸಿಕೊಳ್ಳುವುದು ಎಲ್ಲಾ ಚಿತ್ರರಂಗಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಈ ಇಂತಹ ಸಾಲಿಗೆ ರಾಜ್ ಮೊಮ್ಮಗ ವಿನಯ್ ರಾಜಕುಮಾರ್ ನಟಿಸಿರುವ ಸುಧೀರ್ ನಿರ್ದೇಶನ ಮಾಡುತ್ತಿರುವ ಅನಂತು vs ನುಶ್ರುತ್ ಚಿತ್ರವೂ ಕೂಡ ಸೇರಿಕೊಳ್ಳುತ್ತಿದೆ.

 

 

ಎಂಬತ್ತರ ದಶಕದಲ್ಲಿ ತೆರೆಗೆ ಬಂದಿದ್ದ ಡಾ.ರಾಜಕುಮಾರ್ ಅವರ ಚಲಿಸುವ ಮೋಡಗಳು ಚಿತ್ರದ ‘ಮೈ ಲಾರ್ಡ್ ನನ್ನ ವಾದ ಕೇಳಿ ಕೇಳಿ’ ಹಾಡನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿ, ವಿಭಿನ್ನವಾದ ಸಂಗೀತವನ್ನು ನೀಡಿ ಆ ಹಾಡನ್ನು ಮರು ಸೃಷ್ಟಿಸಿ ಅವರ ಮೊಮ್ಮಗ ವಿನಯ್ ರಾಜ್ ಕುಮಾರ್ ಅಭಿನಯದ ಅನಂತುvsನುಸ್ರತ್ ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆಯಂತೆ.

 

 

ಚಲಿಸುವ ಮೋಡಗಳು ಚಿತ್ರದ ಈ ಹಾಡಿನಲ್ಲಿ ರಾಜ್ ಕುಮಾರ್ ಮತ್ತು ಅಂಬಿಕಾ ನಟಿಸಿದ್ದರು, ಅನಂತು vs ನುಸ್ರತ್ ಚಿತ್ರದಲ್ಲಿ ವಿನಯ್ ರಾಜಕುಮಾರ್ ಕೂಡ ಲಾಯರ್ ಪಾತ್ರ ಮಾಡುತ್ತಿರುವುದರಿಂದ ಈ ಹಾಡು ಚಿತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಅಳವಡಿಸಿಕೊಳ್ಳಗಿದೆ. ಈ ಹಾಡಿನಲ್ಲಿ ವಿನಯ್ ಮತ್ತು ಲತಾ ಹೆಗ್ಡೆ ಅಭಿನಯಿಸಲಿದ್ದು ತಿಂಗಳಾಂತ್ಯದಲ್ಲಿ ಹಾಡಿನ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ವಿಶೇಷವೆಂದರೇ ಈ ಹಾಡಿನಲ್ಲಿ ವಿನಯ್ ಮತ್ತು ಲತಾ ಹೆಗ್ಡೆ ಅಂದು ರಾಜ್ ಮತ್ತು ಅಂಬಿಕಾ ಧರಿಸಿದ್ದ ಪೋಷಾಕಿನ ರೀತಿಯಲ್ಲೇ ದರಿಸಲಿದ್ದಾರೆ. ಈ ಹಾಡನ್ನು ವಿನಯ್ ರಾಜಕುಮಾರ್ ಹುಟ್ಟುಹಬ್ಬದ(ಮೇ 7) ದಿನ ಬಿಡುಗಡೆ ಮಾಡಲಾಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top