fbpx
ಸಮಾಚಾರ

ಎಟಿಎಂ ಸೇವೆ ಅಲಭ್ಯ ಸಮಸ್ಯೆ ಇನ್ನೆಷ್ಟು ದಿನ ಕಾಡಲಿದೆ

ದೇಶದ ಅನೇಕ ರಾಜ್ಯಗಳಲ್ಲಿ ಎಟಿಎಂ ಸೇವೆ ಅಲಭ್ಯವಾಗಿದ್ದು, ಜನರು ತೀವ್ರವಾಗಿ ನಗದು ಮುಗ್ಗಟ್ಟು ಎದುರಿಸುತ್ತಿದ್ದಾರೆ. ಈ ಕೊರತೆ ನಿಭಾವಣೆ ಮಾಡಲು ಕಡಿಮೆ ಮುಖಬೆಲೆಯ ನೋಟುಗಳ ಮುದ್ರಣವನ್ನು ಹೆಚ್ಚಳ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮುಂದಾಗಿದೆ. ಆದರೆ ಹೊಸದಾಗಿ ಮುದ್ರಣವಾದ ನೋಟು ಗಳು ಎಟಿಎಂ ತಲುಪಲು ಅಂದಾಜು ಒಂದು ತಿಂಗಳ ಕಳವಡಿ ಬೇಕು ಎಂದು ತಿಳಿದು ಬಂದಿದೆ.

 

 

ರಾಜ್ಯ ಚುನಾವಣೆಯ ಹೊಸ್ತಿ ಲಲ್ಲೇ ಕರ್ನಾಟಕದಲ್ಲಿ ಸುಮಾರು ಶೇ 40ರಷ್ಟು ಎಟಿಎಂಗಳಲ್ಲಿ ಬುಧ ವಾರವೂ ನೋಟ್ ಗಳು ಇರಲಿಲ್ಲ. ರಾಜ್ಯದಲ್ಲಿ 17,683 ಎಟಿಎಂಗಳಿವೆ. ಆರ್‌ಬಿಐನಿಂದ ಇನ್ನಷ್ಟೇ ನೋಟ್ ಬರಬೇಕಾಗಿದೆ ಎಂದು ರಾಜ್ಯದ ಹಲವು ಬ್ಯಾಂಕುಗಳ ಮೂಲಗಳು ಮಾಹಿತಿ ತಿಳಿಸಿವೆ.

 

 

ಎಟಿಎಂ ಸೇವೆ ಅಲಭ್ಯ ಆಗಿರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, 2016 ರ ನವೆಂಬರ್ ತಿಂಗಳಲ್ಲಿ ಎಟಿಎಂ ಗಳು ಅಲಭ್ಯ ಆಗಿದ್ದವು, ಈಗಲೂ ಎಟಿಎಂ ಗಳು ಅಲಭ್ಯ ಆಗಿವೆ. ಬಿಜೆಪಿ ಮಾತ್ರ ತನಗೆಷ್ಟು ಬೇಕೋ ಅಷ್ಟು ನಗದು ಹೊಂದಿದ್ದು, ಉಳಿದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

 

ಇನ್ನು ಈ ಬಗ್ಗೆ ಮಾತನಾಡಿರುವ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ನೋಟು ರದ್ದತಿಯ ಭೂತ ಸರ್ಕಾರವನ್ನು ಮತ್ತೆ ಕಾಡ ತೊಡಗಿದೆ. ದಾಸ್ತಾನು ಇರಿಸುವ ವರಿಗಾಗಿಯೇ ₹2000 ನೋಟು ಮುದ್ರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top