fbpx
ಸಮಾಚಾರ

ತಲೆ ಮರೆಸಿಕೊಂಡಿರುವ ಮದ್ಯದ ದೊರೆ ಮಲ್ಯ ಭಾರತಕ್ಕೆ ವಾಪಸ್ಸು ಬರ್ತಾರಾ

ಪ್ರಧಾನಿ ನರೇದ್ರ ಮೋದಿ ಅವರು ಇಂಗ್ಲೆಂಡ್‌ ಪ್ರವಾಸಲ್ಲಿದ್ದಾರೆ, ಬ್ರಿಟನ್‌ ಪ್ರಧಾನಿ ತೆರೇಸಾ ಮೇ ಜೊತೆಗೆ ಅನೇಕ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. 9 ಸಾವಿರ ಕೋಟಿ ಸಾಲ ಮಾಡಿ ಭಾರತ ತೊರೆದು ಲಂಡನ್‌ನಲ್ಲಿರುವ ಮದ್ಯದ ದೊರೆ ವಿಜಯ್‌ ಮಲ್ಯ ಹಸ್ತಾಂತರದ ಬಗ್ಗೆಯೂ ಉಭಯ ನಾಯಕರು ಚರ್ಚೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಲಂಡನ್ ನಲ್ಲಿ ಇರುವ ವಿಜಯ ಮಲ್ಯ ಅಲ್ಲಿ ಎರಡು ಬಾರಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಈಗಾಗಲೇ ಮಲ್ಯ ಹಸ್ತಾಂತರಕ್ಕೆ ಭಾರತ 10 ಸಾವಿರ ಪುಟಗಳ ದೋಷಾರೋಪ ಪಟ್ಟಿ ಲಂಡನ್‌ ಕೋರ್ಟ್‌ಗೆ ಸಲ್ಲಿಸಿದೆ . ಇದೀಗ ಅದೇ ವಿಚಾರವಾಗಿ ಪ್ರಧಾನಿ ಮೋದಿ ಮತ್ತು ಥೆರೆಸಾ ಮಾತುಕತೆ ಮಾಡಲಿದ್ದಾರೆ.

 

 

ಇನ್ನು ಕೆಲವೇ ದಿನಗಳಲ್ಲಿ ಮಲ್ಯ ವಾಪಾಸ್ ಬರ್ತಾರಾ ಅಥವಾ ಇಲ್ಲವೋ ಎಂಬ ಅಧಿಕೃತ ಮಾಹಿತಿ ಹೊರಬೀಳಲಿದೆ. ಭಾರತದ ಅನೇಕ ಬ್ಯಾಂಕ್ ಗಳಲ್ಲಿ 9000 ಕೋಟಿ ರೂ. ಗಳಷ್ಟು ಸಾಲವನ್ನು ಮಾಡಿ ಇಂಗ್ಲೆಂಡ್ ಗೆ ಪಲಾಯನಗೈದಿರುವ ವಿಜಯ್ ಮಲ್ಯ ನನ್ನ ಭಾರತಕ್ಕೆ ಹಸ್ತಾಂತರಿಸುವ ಕುರಿತು ಈ ಮೊದಲೂ ಹಲವು ಬಾರಿ ಮಾತುಕತೆ ನಡೆದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top