fbpx
ಕಿರುತೆರೆ

ಫೇಸ್ಬುಕ್ ನಲ್ಲಿ ಎಡವಟ್ಟು ಮಾಡಿಕೊಂಡ ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ!

ಫೇಸ್ ಬುಕ್ಕೆಂಬುದು ಈವತ್ತಿಗೆ ಪರಿಧಿ ಮೀರಿ ಬೆಳೆದುಕೊಂಡಿದೆ. ಅದರಿಂದ ಅದೇನೇನು ಒಳ್ಳೆಯದ್ದಾಗುತ್ತಿದೆಯೋ… ಆದರೆ ಕೆಟ್ಟದ್ದರ ಪ್ರಮಾಣವೇ ಹೆಚ್ಚು. ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರವನ್ನು ಮಾಡಿರುವ ನಟಿ ಪ್ರಿಯ ಅವರು ಮಾತಿನಲ್ಲಿ ಭರದಲ್ಲಿ ಹೇಳಿರುವ ಸಣ್ಣ ವಿಚಾರವೊಂದು ಚರ್ಚೆ ಗ್ರಾಸವಾಗಿದ್ದು ಸಕತ್ ವೈರಲ್ ಆಗಿದೆ.

 

 

ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಸಿಯೇರಿಸಿಕೊಂಡಿದ್ದು ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದೆ.. ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಬಾರಿ ರಾಜಕೀಯದ ರಂಗು ಚಿತ್ರರಂಗದಲ್ಲಿಯೂ ತುಸು ಹೆಚ್ಚೇ ಪ್ರತಿಫಲಿಸುತ್ತಿದೆ. ನಾನಾ ರಾಜಕೀಯ ಪಕ್ಷಗಳ ತಮ್ಮ ಪರವಾಗಿ ನಟ ನಟಿಯರನ್ನು ಪ್ರಚಾರಕ್ಕೆ ಸೆಳೆದುಕೊಳ್ಳುವ ಕಸರತ್ತನ್ನೂ ತೀವ್ರಗೊಳಿಸಿವೆ… ಇದರಂತೆ ನಟಿ ಪ್ರಿಯಾಂಕಾ ಕೂಡ ಪ್ರಮುಖ ರಾಜಕೀಯ ಪಕ್ಷವೊಂದರ ಅಭ್ಯರ್ಥಿಯ ಪರವಾಗಿ ಮತಪ್ರಚಾರ ಮಾಡುವ ಭರದಲ್ಲಿ ಸಣ್ಣ ಯಡವಟ್ಟು ಮಾಡಿಕೊಂಡಿದ್ದಾರೆ.

 

 

“ಪ್ರತಿ ವರ್ಷದ ರೀತಿ ಈ ವರ್ಷವೂ ಎಲೆಕ್ಷನ್ ಬಂದಿದೆ. ಎಲ್ಲರೂ ಪ್ರತಿ ವರ್ಷದ ಹಾಗೆ ಈ ಸಲವೂ ವೋಟ್ ಮಾಡಬೇಕು” ಅಂತ ನಿರಾಸದಾಯಕವಾಗಿಯೇ ಹೇಳಿದ್ದಾರೆ. ಪ್ರಿಯಾಂಕಾ ಅವರು ಬಾಯಿತಪ್ಪಿ ಈ ಹೇಳಿಕೆ ನೀಡಿದ್ದರು ಅದು ಸಾಮಾನ್ಯ ಪ್ರಜ್ಞಾಶೂನ್ಯ ಹೇಳಿಯಿಂದ ಕೂಡಿರುವ ಕಾರಣ ಟೀಕೆಗೆ ಒಳಗಾಗುತ್ತಿದೆ. ಈ ನಟಿ ಎಲೆಕ್ಷನ್ ಬರುವುದು 5 ವರ್ಷಕ್ಕೊಮ್ಮೆ ಎಂಬ ಕಾಮನ್ ಸೆನ್ಸ್ ಇಲ್ಲವಾ ಎಂಬಂತ ಕಾಮೆಂಟ್ ಗಳು ಫೇಸ್ಬುಕ್ ನಲ್ಲಿ ತೂರಿಬರುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top