ತಿಂಡಿ ತೀರ್ಥ

ಗಣೇಶನ ಪ್ರಿಯವಾದ ನೈವೇದ್ಯ ರುಚಿಕರ ಗರಿ ಗರಿ ಮೋದಕ ಮಾಡುವ ವಿಧಾನ

ಗಣೇಶನ ಪ್ರಿಯವಾದ ನೈವೇದ್ಯ ರುಚಿಕರ ಗರಿ ಗರಿ ಮೋದಕ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು – ಮೈದಾ ಹಿಟ್ಟು 1 ಬಟ್ಟಲು, ½ ಬಟ್ಟಲು ಚಿರೋಟಿ ರವೆ , ತೆಂಗಿನ ಕಾಯಿ 1, ಬೆಲ್ಲ -1, ಎಣ್ಣೆ ಕರಿಯಲು, ಚಿಟುಕಿ ಉಪ್ಪು, ಎಳ್ಳು ಒಂದು ಚಮಚ.

ಮಾಡುವ ವಿಧಾನ – ತೆಂಗಿನ ಕಾಯಿಯನ್ನು ತುರಿದುಕೊಳ್ಳಿ. ಬಾಣಲೆ ಮೇಲೆ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಕುದಿಯಲು ಇಡಿ. ಬೆಲ್ಲ ಕುದಿಯುತ್ತಿರುವ ವೇಳೆ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಕೈ ಆಡಿಸುತ್ತಿರಿ. 15 ನಿಮಿಷಗಳ ಕಾಲ ಅದನ್ನು ಚೆನ್ನಾಗಿ ಕುದಿಸಿ. ಬೆಲ್ಲ ಹಾಗೂ ತೆಂಗಿನ ತುರಿ ಚೆನ್ನಾಗಿ ಬೆಂದು, ಬಿಡಿ ಬಿಡಿಯಾಗುತ್ತದೆ. ಆಗ ಹುರಿದ ಎಳ್ಳನ್ನು ಸೇರಿಸಿ, ಕೆಳಗಿಳಿಸಿ.

ಮೈದಾ ಹಿಟ್ಟಿಗೆ ಸ್ವಲ್ಪ ಬಿಸಿ ಎಣ್ಣೆ ಸೇರಿಸಿ, ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪುಟಾಣಿ ರೊಟ್ಟಿ ಸಿದ್ಧಮಾಡಿಕೊಳ್ಳಿ.

ತಟ್ಟಿದ ಮೈದಾ ಮಧ್ಯೆ ಕಾಯಿ ಬೆಲ್ಲದ ಮಿಶ್ರಣವನ್ನಿಟ್ಟು, ಅಂಚುಗಳನ್ನು ಸೇರಿಸಿ, ಸಮೋಸಾದಂತೆ ಜುಟ್ಟ ಮಾಡಿ. ನಂತರ ಬಾಣಲೆಗೆ ಹಾಕಿ, ಮೋದಕವನ್ನು ಸ್ವಲ್ಪ ಕಂದು ಬಣ್ಣಕ್ಕೆ ಬರುವಂತೆ ಕರಿಯಿರಿ.

******************************************************************************

 

ಮೋದಕ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಿರುವ ಒಂದು ಸಿಹಿ ಡಂಪ್ಲಿಂಗ್ (ಕಣಕದ ಹೊದಿಕೆಯಿರುವ ಹೂರಣ). ಮೋದಕದಲ್ಲಿನ ಸಿಹಿಯಾದ ಹೂರಣವನ್ನು ತಾಜಾ ತುರಿದ ತೆಂಗು|ಕೊಬ್ಬರಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ, ಮತ್ತು ಮೃದುವಾದ ಹೊರಹೊದಿಕೆಯನ್ನು ಅಕ್ಕಿ ಹಿಟ್ಟು, ಅಥವಾ ಖೋವಾ ಮಿಶ್ರಿತ ಗೋಧಿ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ. ಮೋದಕವನ್ನು ಕರಿಯಬಹುದು ಅಥವಾ ಆವಿಯಲ್ಲಿ ಬೇಯಿಸಬಹುದು.

ಮೋದಕ

ಮೋದಕ ಎನ್ನುವುದು ಸಿಹಿಯಾದ ತಿನ್ನುವ ಪದಾರ್ಥ . ವಿಶೇಷವಾಗಿ ಗಣೇಶನ ಪ್ರಿಯವಾದ ನೈವೇದ್ಯ ಗಣೇಶ ಚತುರ್ಥಿ ಹಾಗು ಸಂಕಷ್ಟಿ ಹಬ್ಬಕ್ಕೆ ಇದನ್ನು ತಯಾರು ಮಾಡುತ್ತಾರೆ. ‘ಮುದ ‘ ಎಂದರೆ ಆನಂದ ಎಂಬ ಅರ್ಥ . ಮೋದಕವು ಗಣೇಶನಿಗೆ ಆನಂದವನ್ನು ಮತ್ತು ಭಕ್ತರಿಗೆ ಜ್ಞಾನವನ್ನು ನೀಡುವ ಸಿಹಿ ತಿಂಡಿ . ಮೋದಕವನ್ನು ದೇವರಿಗೆ ನೈವೇದ್ಯ ಮಾಡಿ ಆನಂದ ದೊರಕುತ್ತದೆ. ಗಣಪನ ಜನನವಾದಾಗ ಎಲ್ಲ ದೇವತೆಗಳು ಸಂತಸದಿಂದ ಮೋದಕವನ್ನು ಪಾರ್ವತಿಗೆ ನೀಡಿದರು ಎಂಬುದು ಪುರಾಣದಲ್ಲಿ ಉಲ್ಲೇಖವಿದೆ. ಚಿರೋಟಿ ರೇವೆ ಮತ್ತು ಮೈದಾ ಸ್ವಲ್ಪ ಉರಿದು ನೀರು ಹಾಕಿ ಕಲಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಸಣ್ಣ ಉಂಡೆಗಳನ್ನು ಮಾಡಿ , ಪುಟಾಣಿ ರೊಟ್ಟಿ ಸಿದ್ದ ಮಾಡಿಕೊಳ್ಳಬೇಕು ಇದರೊಳಗೆ ಬೆಲ್ಲ, ತೆಂಗಿನಕಾಯಿಯಿಂದ ಮಾಡಿದ ಉರಣವನ್ನು ಇಟ್ಟು ಬೇಯಿಸಬೇಕು ಅಥವಾ ಕರಿಯಬೇಕು. ಗಣೇಶ ಹಬ್ಬದೊಂದು ಇಪತ್ತೊಂದು ಮೋದಕವನ್ನು ಮಾಡುತ್ತೇವೆ. ಗಣೇಶನಿಗೆ ಮೋದಕವು ಅತ್ಯಂತ ಇಷ್ಟವಾದ್ದರಿಂದ ಗಣೇಶನಿಗೆ “ಮೋದಕಪ್ರಿಯ ” ಎಂದೇ ಕರೆಯುತ್ತೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top