ವಿಶೇಷ

ರಾತ್ರಿಯ ಸಮಯದಲ್ಲಿ ನಾಯಿಗಳು ವಿಚಿತ್ರವಾಗಿ ಕೂಗುವುದು ಸಾವಿನ ಸೂಚನೆಯೇ , ಇದರ ಬಗ್ಗೆ ವಿಜ್ಞಾನ ಏನ್ ಹೇಳುತ್ತೆ ಕೇಳಿ

ರಾತ್ರಿಯ ಸಮಯದಲ್ಲಿ ನಾಯಿಗಳು ಕೂಗುವುದು ಸಾವಿನ ಸೂಚನೆಯೇ ? ರಾತ್ರಿಯ ಸಮಯದಲ್ಲಿ ನಾಯಿಗಳು ವಿಚಿತ್ರವಾಗಿ ಕೂಗಿದರೆ ಅವು ಏನನ್ನು ಸೂಚಿಸುತ್ತವೆ ? ಎಂದು ನಿಮಗೆ ಗೊತ್ತಾ ?

 

ನಾಯಿಗಳು ತಮ್ಮ ವೇದನೆಯನ್ನು ಈ ಕೂಗಿನ ಮೂಲಕ ತಿಳಿಸುತ್ತವೆ . ನಾಯಿಯ ಕೂಗು  ಸಾವಿನ ಸೂಚಕವೆಂದು ಜನರು ಅಂದುಕೊಳ್ಳುವುದು ಯಾಕೆ ?ಬನ್ನಿ ತಿಳಿಯೋಣ.

 

 

ನಾಯಿಯನ್ನು ನಿಯತ್ತಿನ ಪ್ರಾಣಿ ಎಂದು ಮತ್ತು ಮನುಷ್ಯನಿಗೆ ತುಂಬಾ ಹತ್ತಿರವಿರುವ ಪ್ರಾಣಿ ಎಂದು ಎಲ್ಲರೂ ಪ್ರೀತಿಯಿಂದ ನಾಯಿಯನ್ನು ಮನೆಯಲ್ಲಿ ಸಾಕಿರುತ್ತಾರೆ. ನಾಯಿಗಳು ಸಾಮಾನ್ಯವಾಗಿ ಹಗಲಿನ ಹೊತ್ತಲ್ಲಿ ಬೊಗಳುತ್ತವೆ. ಆದರೆ ರಾತ್ರಿಯ ವೇಳೆ ನಾಯಿಗಳು ವಿಚಿತ್ರವಾಗಿ ಕೆಲವು ಸಮಯದಲ್ಲಿ ಕೂಗುತ್ತವೆ. ಹೆಚ್ಚಿನವರು ಇದಕ್ಕೆ ನಾನಾ ರೀತಿಯ ವ್ಯಾಖ್ಯಾನಗಳನ್ನು ನೀಡುತ್ತಾರೆ. ಆದರೆ ಇದರ ಹಿಂದಿರುವ ಸತ್ಯ ಏನು ? ಎಂಬುದನ್ನು ನಾವು ಈಗ ತಿಳಿಯೋಣ

ನಾಯಿಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತಲ್ಲಿ ಕೂಗುತ್ತಿದ್ದರೆ, ಅದು ಅಳುತ್ತಿದೆ ಎಂದರ್ಥ. ಇದನ್ನು ನಾಯಿಯ ಪಾಲಿಗೆ ದುಃಖಕರವೆಂದು ಪರಿಗಣಿಸಲಾಗುತ್ತದೆ .

 

 

ನಾಯಿಗಳು ಅಳುವುದು ಯಾರದೋ ಒಬ್ಬರ ಸಾವು ಸಂಭವಿಸುತ್ತದೆ, ಎಂಬುದಕ್ಕೆ ಅಲ್ಲ , ಇದು ಅನೇಕರ ತಪ್ಪು ಗ್ರಹಿಕೆಯಾಗಿದೆ . ಹೆಚ್ಚಿನವರು ರಾತ್ರಿಯ ವೇಳೆ ನಾಯಿಗಳು ಕೂಗಿದಾಗ ಅದನ್ನು ಓಡಿಸುವುದಕ್ಕೆ ಮುಂದಾಗುತ್ತಾರೆ. ವಾಸ್ತವವಾಗಿ ನಾಯಿಗಳ ಕೂಗಾಟದ  ಹಿಂದೆ ಅಶುಭ ಸೂಚಕ ಅಥವಾ ಅಂತಹ ಕೆಟ್ಟ ಸೂಚನೆಗಳೇ ಇರುವುದಿಲ್ಲ ಅದರ ಬದಲು ಬೇರೆಯೇ ಕಾರಣಗಳಿರುತ್ತವೆ .

ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ. ನಾಯಿಗಳು ತಮ್ಮ ಒಂಟಿತನವನ್ನು ಮತ್ತು  ಒಂಟಿತನದ ನೋವನ್ನು ಈ ರೀತಿ  ಕೂಗುವುದರ ಮೂಲಕ ವ್ಯಕ್ತಪಡಿಸುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top