ತಿಂಡಿ ತೀರ್ಥ

ಮಧ್ಯಾಹ್ನ ಲಂಚ್ ಬಾಕ್ಸ್’ಗೆ ಬಿಸಿ ಬಿಸಿಯಾಗಿ ಇರುವ ಬಿಸಿಬೇಳೆ ಬಾತ್ ಮಾಡುವ ವಿಧಾನ

ಬಿಸಿಬೇಳೆ ಬಾತ್ ಬೇಕಾಗುವ ಸಾಮಗ್ರಿಗಳು:

ಅಕ್ಕಿ 1 ಕಪ್,

ತೊಗರಿಬೇಳೆ 1 ಕಪ್,

ಬೀನ್ಸ್ ½ ಕಪ್,

ಆಲೂಗಡ್ಡೆ 1 ,

ಕ್ಯಾರೆಟ್ ¼ ಕಪ್,

ಈರುಳ್ಳಿ 2,

ಕರಿಬೇವು,

ಗೋಡ೦ಬಿ,

ತುಪ್ಪ.

ಮಸಾಲೆಗೆ : ಕಡಲೇಬೇಳೆ 4 ಚಮಚ,

ಉದ್ದಿನ ಬೇಳೆ 2 ಚಮಚ,

ಜೀರಿಗೆ 1 ಚಮಚ,

ಧನಿಯಾ 1 ಚಮಚ, ಇ೦ಗು,

ಚಕ್ಕೆ 1 ಇ೦ಚು,

ಲವ೦ಗ 3,

ತೆ೦ಗಿನ ತುರಿ ½ ಕಪ್.

ವಿಧಾನ : ತೊಗರಿಬೇಳೆಯನ್ನು ½ ಗ೦ಟೆ ನೀರಿನಲ್ಲಿ ನೆನೆಸಿಡಿ. ಅಕ್ಕಿ & ತೊಗರಿಬೇಳೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅಕ್ಕಿ ಬೇರೆ ಪಾತ್ರೆಯಲ್ಲಿ ಮತ್ತು ಬೇಳೆ, ಬೀನ್ಸ್, ಅಲೂಗಡ್ಡೆ, ಕ್ಯಾರೇಟ್ ಇವನ್ನು ಮತ್ತೊ೦ದು ಪಾತ್ರೆಗೆ ಹಾಕಿ ಕುಕ್ಕರ್ ನಲ್ಲಿ 3 ವಿಷಲ್ ಕೂಗಿಸಿ ಉರಿ ಆರಿಸಿ. ಬಾಣಲೆಗೆ ಎಣ್ಣೆ ಹಾಕಿಕೊ೦ಡು  ಬಿಸಿಯಾದ ಮೇಲೆ ಸಾಸಿವೆ, ಕರಿಬೇವು ಹಾಕಿ ಅದು ಚಿಟಪಟಿಸಿದ ಮೇಲೆ ಹೆಚ್ಚಿದ ಈರುಳ್ಳಿ & ಟೊಮೆಟೊ ಹಾಕಿ ಬಾಡಿಸಿ. ಮೇಲೆ ಹೇಳಿದ ಮಸಾಲೆ ಪದಾರ್ಥಗಳನ್ನು ಹುರಿದುಕೊ೦ಡು ತೆ೦ಗಿನ ತುರಿ ಜೊತೆ ಹಾಕಿ ನೀರು ಸೇರಿಸಿ ರುಬ್ಬಿಕೊಳ್ಳಿ. ಈಗ ಮಸಾಲೆಯನ್ನು ಬಾಣಲೆಗೆ ಹಾಕಿ ನಿಮಿಷ ಕುದಿಸಿ, ಅದಕ್ಕೆ ಬೇಯಿಸಿದ ಬೇಳೆ & ತರಕಾರಿಗಳನ್ನು ಸೇರಿಸಿ ಕೊನೆಯಲ್ಲಿ ಎಷ್ಟು ಬೇಕೋ ಅಷ್ಟು ಅನ್ನ ಸೇರಿಸಿ ಮಿಕ್ಸ್ ಮಾಡಿ. ಅದರ ಮೇಲೆ ತುಪ್ಪ ಹಾಕಿದರೆ ಘಮಘಮಿಸುವ ಬಿಸಿಬೇಳೆಭಾತ್ ತಿನ್ನಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top