ತಿಂಡಿ ತೀರ್ಥ

ರುಚಿ ರುಚಿಕರವಾದ ಫಿಶ್ ಫ್ರೈ  ಮಾಡುವ ವಿಧಾನ…

 

ಬೇಕಾಗುವ ಪದಾರ್ಥಗಳು…

 

 

ಮೀನು – ಅರ್ಧ ಕೆಜಿ

ಅರಿಶಿನ – 2 ಚಿಟಿಕೆ

ಕಾಶ್ಮೀರಿ ಚಿಲ್ಲಿ ಪೌಡರ್ – 2 ಚಮಚ

ಜೀರಿಗೆ ಪುಡಿ – 2 ಚಮಚ

ಸೋಂಪು ಪುಡಿ – ಅರ್ಧ ಚಮಚ

ಗರಂ ಮಸಾಲಾ ಪುಡಿ – 1 1/2 ಚಮಚಂ

ಕಾಳು ಮೆಣಸಿನ ಪುಡಿ – 1 ಚಮಚ

ನಿಂಬೆಹಣ್ಣಿನ ರಸ – ಅರ್ಧ ಚಮಚ

ಎಣ್ಣೆ – 1 ಚಮಚ

ಕರಿಬೇವು – ಸಣ್ಣಗೆ ಕತ್ತರಿಸಿದ್ದು ಸ್ವಲ್ಪ

ಉಪ್ಪು – ರುಚಿಗೆ ತಕ್ಕಷ್ಟು

 

 

ಫಿಶ್ ಫ್ರೈ  ಮಾಡುವ ವಿಧಾನ…

ಮೊದಲು ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಳ್ಳಬೇಕು.

ನಂತರ ಪಾತ್ರೆಯೊಂದಕ್ಕೆ ಅರಿಶಿನ, ಕಾಶ್ಮೀರಿ ಚಿಲ್ಲಿ ಪೌಡರ್, ಜೀರಿಗೆ ಪುಡಿ, ಸೋಂಪು ಪುಡಿ, ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ನಿಂಬೆಹಣ್ಣಿನ ರಸ, ಎಣ್ಣೆ, ಕರಿಬೇವು, ಉಪ್ಪು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.

ನಂತರ ಈಗಾಗಲೇ ಶುಚಿ ಮಾಡಿಕೊಂಡ ಮೀನಿಗೆ ಈ ಮಸಾಲಾವನ್ನು ಚೆನ್ನಾಗಿ ಕೋಟ್ ಮಾಡಿ 1 ಗಂಟೆಗಳ ಕಾಲ ನೆನೆಯಲು ಬಿಡಬೇಕು.

ನಂತರ ಬಾಣಲೆಗೆ 6-7 ಚಮಚ ಎಣ್ಣೆಯನ್ನು ಹಾಕಿ ಮಸಾಲಾದಲ್ಲಿ ನೆನೆದ ಫಿಶ್ ನ್ನು ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಫ್ರೈ ಮಾಡಿಕೊಂಡರೆ ರುಚಿಕರವಾಗಿ ಫಿಶ್ ಫ್ರೈ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top