ವಿಶೇಷ

ಈ ಊರಲ್ಲಿ ದುಡ್ಡು ಕೊಟ್ರೆ ಸಾಕು ಗಂಟೆ ಲೆಕ್ಕದಲ್ಲಿ ಆ ಕೆಲಸಕ್ಕೆ ಹುಡುಗ/ಹುಡುಗಿಯರು ಬಾಡಿಗೆಗೆ ಸಿಗ್ತಾರಂತೆ ,ಇದ್ರ ವಿಶೇಷ ಏನಂತೀರಾ ಮುಂದೆ ಓದಿ

‘ದುಡ್ಡೇ ದೊಡ್ಡಪ್ಪ’ ಎನ್ನುವುದು ಜಗದ ನಿಯಮ ಆದರೆ ದುಡ್ಡಿಂದ ಪ್ರೀತಿಯನ್ನು ಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ ಆದರೆ ಜಪಾನ್ ದೇಶದಲ್ಲಿ ಪ್ರೀತಿಯನ್ನು ಸಹ ದುಡ್ಡಿಂದ ಕೊಂಡುಕೊಳ್ಳಬಹುದು ಗೊತ್ತಾ .

 

 

ಪ್ರೀತಿ ಕೊಡೊ ಕಂಪನಿ

 

ಹೌದು ನೀವು ಈ ಮಾತನ್ನು ನಂಬಲೇ ಬೇಕು, ಈ ಊರಲ್ಲಿ ಬಾಡಿಗೆಗೆ ಪ್ರೀತಿ ಕೂಡ ಸಿಗುತ್ತೆ, ಎಂಟು ವರ್ಷ ಹಳೆಯದಾದ ‘ಫ್ಯಾಮಿಲಿ ರೊಮಾನ್ಸ್’ ಎಂಬುವ ಕಂಪನಿಯೊಂದು ಈ ರೀತಿಯ ಸರ್ವಿಸ್ ಅನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ, ಈ ಕಂಪನಿಯಲ್ಲಿ ಒಟ್ಟು ಎಂಟು ನೂರು ಜನ ದುಡಿಯುತ್ತಿದ್ದು ಇವರೆಲ್ಲರೂ ಗ್ರಾಹಕರ ಖುಷಿಗಾಗಿ ಕೆಲಸ ಮಾಡುತ್ತಾರೆ , ಅಂದರೆ ಇವರು ನಿಜ ಜೀವನದಲ್ಲಿ ಕೇವಲ ಅಭಿನಯ ಮಾಡುತ್ತಾರೆ ಈ ಕಂಪನಿಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ಹಣ್ಣಣ್ಣು ಮುದುಕರವರೆಗೂ ಎಲ್ಲರೂ ಇರುತ್ತಾರೆ .

ಹಾಗಾದರೆ ಇವರ ಮುಖ್ಯ ಕೆಲಸ ಏನು ಅಂತ ಮುಂದೆ ಓದಿ .

 

 

ಹುಡುಗಿಯೊಬ್ಬಳಿಗೆ ತನ್ನ ಪ್ರೇಮಿಯ ಕೈ ಕೊಟ್ಟು ಓಡಿ ಹೋಗಿರುತ್ತಾನೆ ಆಕೆ ಒಂಟಿತನದಿಂದ ಬಳಲುತ್ತಿರುತ್ತಾರೆ ಆಗ ಈ ಸಂಸ್ಥೆಗೆ ಆಕೆ ಕರೆ ಮಾಡಿದರೆ ಸಾಕು ಒಬ್ಬ ಬಾಡಿಗೆ ಹುಡುಗನನ್ನು ಕಳುಹಿಸುತ್ತಾರೆ ,ಇದರಿಂದ ಆಕೆಯ ಒಂಟಿತನ ತೊಲಗಿ ಹೋಗುತ್ತದೆ ಹಾಗೆಯೇ ತಂದೆಯಿಲ್ಲದ ಮಗಳಿಗೆ ಬಾಡಿಗೆ ತಂದೆ ಕೂಡ ದೊರೆಯುತ್ತಾರೆ ವಯಸ್ಸಾದ ವೃದ್ಧರಿಗೆ ಮಗ ಮಗಳು ಹೀಗೆ ಸಂಬಂಧದ ಯಾರು ಬೇಕಾದರೂ ಸಿಗುತ್ತಾರೆ.

ಅಷ್ಟೆ ಅಲ್ಲದೆ ಕೊನೆಗೆ ಸತ್ತಾಗ ಅಳುವವರು ಯಾರಾದರೂ ಬೇಕಾದರು ಕೂಡ ಇಲ್ಲಿ ಬಾಡಿಗೆಗೆ ಸಿಗುತ್ತಾರೆ, ಮಹಿಳೆಯೊಬ್ಬಳು ತನ್ನ ಗಂಡನನ್ನು ಕಳೆದುಕೊಂಡು ತನ್ನ ಒಬ್ಬಳೇ ಮಗಳನ್ನು ಶಾಲೆಗೆ ಸೇರಿಸದೇ ಕಷ್ಟಪಡುತ್ತಿರುತ್ತಾರೆ ,ಆಗ ಗಂಡನಿಗಾಗಿ ಇಲ್ಲಿಗೆ ಕರೆ ಮಾಡಿದರೆ ಸಾಕು ಬಾಡಿಗೆ ಗಂಡ ದೊರೆತು ಮಗಳನ್ನು ಶಾಲೆಗೆ ಸೇರಿಸುತ್ತಾಳೆ ಆ ತಾಯಿ .

 

 

ಇಲ್ಲಿದೆ ವಿಚಿತ್ರ ರೂಲ್ಸ್

ಇಲ್ಲಿನ ಕಂಪನಿಯ ಉದ್ಯೋಗಿಗಳಿಗೆ ರೂಲ್ಸ್ ಗಳನ್ನು ಇಟ್ಟಿರುತ್ತಾರಂತೆ , ಒಂದೇ ಸಮಯದಲ್ಲಿ ಕೇವಲ ಐದು ಕುಟುಂಬಗಳಿಗೆ ಮಾತ್ರ ಒಬ್ಬ ವ್ಯಕ್ತಿ ಬಾಡಿಗೆಗೆ ಕೊಡುತ್ತಾರಂತೆ , ಏಕೆಂದರೆ ಈ ಕೆಲಸದಲ್ಲಿ ಸಮಯ ಹಾಗೂ ಪ್ರೀತಿ ಬಹಳ ಮುಖ್ಯ,ಇದೇ ಕಾರಣದಿಂದ ಇಲ್ಲಿನ ಉದ್ಯೋಗಿಗಳಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಬಾರದು ಎಂಬ ಷರತ್ತನ್ನು ಸಹ ಕಂಪನಿ ವಿಧಿಸಿರುತ್ತದೆ ಹಾಗೆಯೇ ಸಂಬಂಧದಲ್ಲಿ ಯಾವುದೇ ಜಗಳ ಕೋಪ ಮನಸ್ತಾಪಗಳು ಇರುವುದಿಲ್ಲ .

ಹಾಗೆಯೇ ವ್ಯಕ್ತಿಯೊಬ್ಬ ಫೇಸ್ ಬುಕ್ ನಲ್ಲಿ ಫೋಟೋ ಹಾಕುವುದಕ್ಕೆ ಐದು ಹುಡುಗಿಯರನ್ನು ಬಾಡಿಗೆ ತೆಗೆದುಕೊಂಡು ಲಾಸ್ ವೇಗಸ್ ಗೆ ಹೋಗಿ ಫೋಟೊಗಳನ್ನು ತೆಗೆದುಕೊಂಡು ಫೇಸ್ಬುಕ್ಗೆ ಪೋಸ್ಟ್ ಮಾಡಿದನಂತೆ ಅದಕ್ಕಾಗಿ ಆತ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದ್ನಂತೆ.

ಹೀಗೆ ಮನುಷ್ಯನ ವಿಚಿತ್ರವಾದ ಹುಚ್ಚಾಟಗಳಿಗೆ ಜನರು ಇಲ್ಲಿ ಬಾಡಿಗೆಗೆ ದೊರೆಯುತ್ತಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top