ತಿಂಡಿ ತೀರ್ಥ

ರಾತ್ರಿ ಊಟಕ್ಕೆ ತರಕಾರಿ ಮಜ್ಜಿಗೆ ಹುಳಿ ಮಾಡುವ ವಿಧಾನ.

ಮಜ್ಜಿಗೆ ಹುಳಿ ಮಾಡಲು ಬೇಕಾಗುವ ಸಾಮಗ್ರಿಗಳು:

ಮಜ್ಜಿಗೆ ಹುಳಿಗೆ ಒಳ್ಳೆದಾಗುವ ತರಕಾರಿ ಬದನೆಕಾಯಿ, ಬೆಂಡೆಕಾಯಿ, ತೊಂಡಿಕಾಯಿ, ಅಲಸಂಡೆ, ಎಳೆಸೌತೆ, ಮುಳ್ಳುಸೌತೆ,ಕುಂಬೆಳಕಾಯಿ, ಬಾಳೆಕಾಯಿ, ಬಾಳೆದಿಂಡು, ಬೀನ್ಸ್, ಕೋಲಿಫ್ಲವರ್, ಹಸಿ ಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ, ಎಳೆ ಹಲಸು, ದೀವಿ ಹಲಸು, ಹಲಸಿನಕಾಯಿ ತೊಳೆ, ಮಾವಿನಕಾಯಿ, ಸುವರ್ಣ ಗಡ್ಡೆ, ಕೆಸುವಿನ ಗೆಡ್ಡೆ ಇನ್ನೊಂದಿಷ್ಟು. 2 ಲೀಟರ್ ಹಿಡಿಯುವ ಪಾತ್ರೆಯಲ್ಲಿ ಮಾಡುವುದಿದ್ದರೆ 1 ಹಿಡಿ ಉಪ್ಪು, 1/2 ಚಮಚ ಮೆಣಸಿನಕಾಯಿ ಪುಡಿ, ಸಣ್ಣ ತೆಂಗಿನಕಾಯಿ, ಒಂದು ಅರ್ಧ ಲೀಟರ್ ಮಜ್ಜಿಗೆ.

 

 

ಮಜ್ಜಿಗೆ ಹುಳಿ ಮಾಡುವ ವಿಧಾನ:

ತರಕಾರಿಯನ್ನು ಚೆನ್ನಗಿ ತೊಳೆದು ಹೆಚ್ಚಿ ಉಪ್ಪು,ಮೆಣಸಿನಕಾಯಿ ಪುಡಿ,ಬಾಕಿ ಹೆಚ್ಚಿದ ಹೋಳುಗಳು ಮುಳುಗುವಷ್ಟು ನೀರು ಹಾಕಿ ಬೇಯಿಸಿ ಸ್ವಲ್ಪ ಹುಳಿ ಮಜ್ಜಿಗೆ ಸ್ವಲ್ಪ ಸಿಹಿ ಮಜ್ಜಿಗೆ ಹಾಕಿ ನುಣ್ಣಗೆ ರುಬ್ಬಿದ ತೆಂಗಿನಕಾಯಿ ತುರಿ ಹಾಕಿ ಸೌಟಿನಿಂದ ತಿರುವಿ ಹಸಿ ಮೆಣಸಿನಕಾಯಿ ಹೆಚ್ಚಿ ಹಾಕಿ ಕುದಿಸಿ ಸಾಸಿವೆ ಒಗ್ಗರಣೆ ಕೊಡಬೇಕು.

 

 

ಸುವರ್ಣ ಗಡ್ಡೆಯನ್ನು ಮೊದಲೇ ಬೇಯಿಸಿದ ನಂತರ ಉಪ್ಪು,ಮೆಣಸಿನಕಾಯಿ ಪುಡಿ,ಸ್ವಲ್ಪ ಹುಣಸೇ ಹಣ್ಣು ಹಾಕಿ ಸ್ವಲ್ಪ ಹೊತ್ತು ಬೇಯಿಸಬೇಕು. ಸುವರ್ಣಗಡ್ಡೆಗೆ ಸಿಹಿ ಆಗುವಷ್ಟು ಬೆಲ್ಲ ಹಾಕಿದರೂ ರುಚಿ ಆಗುತ್ತದೆ.ಬದನೆಕಾಯಿಗೆ,ಬೆಂಡೆಕಾಯಿಗೆ,ಬಿಳಿ ಕೆಸುವಿನ ದಂಟಿಗೆ ಬೇಯಲಿಕ್ಕೆ ಇಡುವಾಗ ಸ್ವಲ್ಪ ಹುಣಸೆಹಣ್ಣು,ಅಥವಾ ಸ್ವಲ್ಪ ಹುಳಿ ಮಜ್ಜಿಗೆ ಹಾಕಿದರೂ ಆಗಬಹುದು.ಹಾಗಲಕಾಯಿಗೂ ಹುಣಸೇ ಹಣ್ಣು ಅಥವಾ ಹುಳಿ ಮಜ್ಜಿಗೆ ಹಾಕಿ ನೀರು ಇಂಗಿಸಿ ಬೇಯಿಸಬೇಕು.ಇದಕ್ಕೆ ತೆಂಗಿನಕಾಯಿ ರುಬ್ಬುವಾಗ ಹಸಿಮೆಣಸಿನಕಾಯಿ ಹಾಕಿದರೆ ತುಂಬಾ ಪರಿಮಳ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top