ಉದ್ಯೋಗ

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗೂಗಲ್ ನಿಂದ ಗುಡ್ ನ್ಯೂಸ್

ಉದ್ಯೋಗ ನಿರೀಕ್ಷೆ ಯಲ್ಲಿ ಇರುವವರಿಗೆ ಗೂಗಲ್ ಒಂದು ಸಿಹಿ ಸುದ್ದಿ ನೀಡಿದೆ. ಖಾಲಿ ಕೆಲಸಗಳನ್ನು ಹುಡುಕಾಟವನ್ನು ಇನ್ನಷ್ಟು ಸುಲಭ ಮಾಡಲು ಗೂಗಲ್ ಒಂದು ಹೊಸ ಆಪ್ ಪ್ರಸ್ತುತಪಡಿಸುತ್ತಿದೆ.

 

ಇಂಟರ್ನೆಟ್ ಧೈತ್ಯ ಸಂಸ್ಥೆ ಗೂಗಲ್ ಜಾಬ್ ಸರ್ಚ್ ಎಂಬ ಹೊಸ ಆಪ್ ಪ್ರಸ್ತುತಪಡಿಸುತ್ತಿದೆ. ಇದರ ಮೂಲಕ ಸುಲಭವಾಗಿ ಜಾಬ್ ಹುಡುಕಾಟ ಮಾಡಬಹುದಾಗಿದೆ. ಗೂಗಲ್ ಸಂಸ್ಥೆ ಐಬಿಎಂ ಮ್ಯಾನೇಜ್ ಮೆಂಟ್ ಸಲ್ಯೂಷನ್ಸ್, ಟೈಮ್ಸ್ ಜಾಬ್ಸ್, ವಿಸ್ಡಮ್ ಜಾಬ್ಸ್, ಫ್ರೆಷರ್ಸ್ ವರ್ಲ್ಡ್ ಮುಂತಾದ ಪ್ರಮುಖ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

 

 

ಗೂಗಲ್ ಸಂಸ್ಥೆಯ ವೆಬ್ ಪುಟದಲ್ಲಿ ಸೂಕ್ತ ಕೆಲಸಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಗೂಗಲ್ ನಲ್ಲಿ ಜಾಬ್ಸ್ ನಿಯರ್ ಮಿ, ಜಾಬ್ಸ್ ಫಾರ್ ಫ್ರೆಷರ್ಸ್ ಎಂದು ಸರ್ಚ್ ಮಾಡಿದಾಗ, ಕೆಲಸಗಳ ಬಗ್ಗೆ ಮಾಹಿತಿ ಸಿಗುತ್ತದೆ. ಯಾವುದಾದರೊಂದು ಉದ್ಯೋಗದ ಮೇಲೆ ಕ್ಲಿಕ್ ಮಾಡಿದಲ್ಲಿ ಆ ಹುದ್ದೆಯ ಕುರಿತಾದ ಸಂಪೂರ್ಣ ಮಾಹಿತಿ ಸಿಗುತ್ತದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top