fbpx
ಕಿರುತೆರೆ

ದರ್ಶನ್ ಜೊತೆ ಸಿನಿಮಾ ಮಾಡೋಕೆ ಓಕೆ ಅಂದ್ರು ಡಾ.ಶಿವರಾಜಕುಮಾರ್!

ಕನ್ನಡದಲ್ಲಿ ಮಲ್ಟಿ ಸ್ಟಾರ್ ಚಿತ್ರಗಳು ತೆರೆ ಕಾಣೋದೇ ತೀರಾ ಅಪರೂಪಕ್ಕೊಮ್ಮೆ. ಆದರೆ ಪ್ರೇಕ್ಷಕರು ಮಾತ್ರ ತಮ್ಮ ನೆಚ್ಚಿನ ಹೀರೋಗಳು ಒಂದೇ ಚಿತ್ರದಲ್ಲಿ ಒಟ್ಟಾಗಿ ನಟಿಸಲಿ ಅಂತ ಕಾಯುತ್ತಲೇ ಇರುತ್ತಾರೆ. ಅಂಥಾದ್ದೊಂದು ನಿರೀಕ್ಷೆ ಇದ್ದರೂ ಆದರೆ ಕೆಲವು ಸ್ಟಾರ್ ನಟರ ಕಾಂಬಿನೇಷನ್ ಚಿತ್ರಗಳನ್ನು ತೆರೆ ಮೇಲೆ ತರುವ ಸಾಹಸಕ್ಕೆ ಯಾರು ಕೈಹಾಕಿಲ್ಲ ಉದಾ: ಸುದೀಪ್-ದರ್ಶನ್, ದರ್ಶನ್-ಶಿವಣ್ಣ, ಇತ್ಯಾದಿ

 

 

ಆದರೆ ಇವೆಲ್ಲವುಗಳ ನಡುವೆಯು ಖುದ್ದು ನಟರುಗಳೇ ತಮಗೆ ಆ ನಟನ ಜೊತೆ ನಟಿಸಬೇಕು ಎನ್ನುವ ಇಂಗಿತವನ್ನು ವ್ಯಕ್ತಡಿಸುತ್ತಿರುತ್ತಾರೆ ಆದಾಗ್ಯೂ ಅಂತಹ ಕಾಂಬಿನೇಷನ್ ಚಿತ್ರಗಳು ಸೆಟ್ಟೇರಲು ಕಾಲವೇ ಇದುವರೆಗೂ ಕೂಡಿ ಬಂದಿಲ್ಲ. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಿನಿಮಾ ಮಾಡುವ ಬಯಕೆಯನ್ನು ಹೊರಹಾಕಿದ್ದಾರೆ.

ನಂ 1 ಯಾರಿ ವಿತ್ ಶಿವಣ್ಣ ಕಾರ್ಯಕ್ರಮದ ಮೊನ್ನೆಯ ಸಂಚಿಕೆಯಲ್ಲಿ ನಟಿಯರಾದ ನಟ ಶ್ರೀಮುರುಳಿ ಮತ್ತು ಮಫ್ತಿ ಚಿತ್ರದ ನಿರ್ದೇಶಕ ನರ್ತನ್ ಅಥಿತಿಗಳಾಗಿ ಬಂದಿದ್ದರು. ಸ್ವಲ್ಪ ಮೋಜು ಮಸ್ತಿ ಹರಟೆಗಳೊಂದಿಗೆ ಮಾತುಕತೆ ನಡೆಸುವ ಈ ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ಥರಥರ ಪ್ರಶ್ನೆಗಳಿಗೆ ಅಥಿತಿಗಳು ಓಪನ್ನಾಗಿ ಉತ್ತರ ಕೊಡಬೇಕು ಎನ್ನುವುದು ಕಾರ್ಯಕ್ರಮದ ರೂಲು. ಅದರಂತೆ ಶ್ರೀಮುರುಳಿ ಮತ್ತು ನರ್ತನ್ ಕೂಡ ತಮ್ಮ ಕುರಿತಾತ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಶಿವಣ್ಣನ ಮುಂದೆ ಬಿಚ್ಚಿಟ್ಟಿದ್ದಾರೆ.

 

 

ಕಾರ್ಯಕ್ರಮದಲ್ಲಿ ಲೋಕಾಭಿರಾಮವಾಗಿ ಚರ್ಚೆ ನಡೆಸುತ್ತಿರುವಾಗ ನಿರೂಪಕರಾಗಿರುವ ಶಿವಣ್ಣ ನರ್ತನ್ ಗೆ “ಶಿವಣ್ಣ ಹಾಗೂ ಶ್ರೀಮುರಳಿ ಕಾಂಬಿನೇಶನ್ ನಲ್ಲಿ ‘ಮಫ್ತಿ ಸಿನಿಮಾ ಮಾಡಿದ್ದಾಯ್ತು. ನೆಕ್ಸ್ಟ್ ಮಫ್ತಿ-೨ ಮಾಡೋ ಪ್ಲಾನ್ ಏನಾದ್ರೂ ಇದ್ಯಾ? ಎಂದು ಕೇಳಿದರು. ಇದಕ್ಕೆ ನಿರ್ದೇಶಕ ನರ್ತನ್ “ಮಫ್ತಿ-2 ಚಿತ್ರಕ್ಕೆ ಅದರ ಬದಲು ಭೈರತಿ ರಣಗಲ್ಲು ಅಂತ ಹೆಸರನ್ನು ಇಡೋಣ ಅಂತಾ ಯೋಚನೆ ಮಾಡ್ತಿದ್ದೀನಿ” ಎಂದು ಯೋಚನೆ ಮಾಡ್ತಿದ್ದೀನಿ ಎಂದು ಹೇಳಿದರು.

 

 

ಶಿವಣ್ಣ ”ನೋಡಿ ‘ಮಫ್ತಿ-2’ ಮಾಡಿದರೂ ನಾನು ರೆಡಿ, ಭೈರತಿ ರಣಗಲ್ ಮಾಡಿದರು ರೆಡಿ. ಮಫ್ತಿ-2 ಚಿತ್ರದಲ್ಲಿ ಶಿವಣ್ಣ-ದರ್ಶನ್ ಒಟ್ಟಿಗೆ ನಟಿಸುತ್ತಾರೆ ಎನ್ನೋ ಗಾಸಿಪ್ ಅರಿದಾಡುತ್ತಿದೆ. ಅದನ್ನ ನಿಜ ಮಾಡಿ ಯಾರು ಬೇಡ ಅಂತಾರೆ? ಎಲ್ಲ ಹೀರೋಗಳ ಜೊತೆಯಲ್ಲೂ ಕೆಲಸ ಮಾಡಬೇಕು ಅಂತ ನನಗೆ ಆಸೆಯಿದೆ” ಎಂದು ಶಿವಣ್ಣ ಹೇಳಿದರು. ಶಿವಣ್ಣನ ಈ ಬಯಕೆಯಂತೆ ದರ್ಶನ್ ಮತ್ತು ಶಿವಣ್ಣನ್ನು ಒಂದೇ ಚಿತ್ರದಲ್ಲಿ ನೋಡುವ ಸೌಭಾಗ್ಯ ಆದಷ್ಟು ಬೇಗ ಬರಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top