ಜ್ಯೋತಿಷ್ಯ

ಮಂಗಳವಾರದ ದಿನ ಈ ಕೆಲಸಗಳನ್ನು ಮಾಡಿದ್ರೆ ಅದೃಷ್ಟ ಮತ್ತೆ ಆರೋಗ್ಯ ಹುಡಿಕಿಕೊಂಡು ಬರುತ್ತೆ ಅಂತ ಶಾಸ್ತ್ರದಲ್ಲಿ ಹೇಳ್ತಾರೆ .

ಪ್ರತಿಯೊಬ್ಬ ಹಿಂದೂ ಧರ್ಮದ ವ್ಯಕ್ತಿಯೂ  ಸಹ ಈ ಐದು ಕೆಲಸಗಳನ್ನು ಮಂಗಳವಾರದಂದು ತಪ್ಪದೇ  ಮಾಡಲೇಬೇಕು.

 

 

ವಾರದ ಪ್ರತಿದಿನವೂ ಸಹ  ಹಿಂದೂ ಧರ್ಮದಲ್ಲಿ ಒಂದೊಂದು ಪ್ರಾಮುಖ್ಯತೆಯನ್ನು ಪಡೆದಿದೆ.ಆದರೂ ಸಹ ಮಂಗಳವಾರವನ್ನು ಆನೇಕ ಕಾರಣಗಳಿಗೆ  ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.ಈ ದಿನವನ್ನು ಹಿಂದೂ ದೇವತೆಗಳಾದ ಗಣೇಶ,ದುರ್ಗಾ ದೇವಿ,ಕಾಳಿ  ದೇವಿ ಮತ್ತು  ಅಂಜನೇಯ ಸ್ವಾಮಿ ದೇವರಿಗೆಂದೇ  ಮೀಸಲಿಡಲಾಗಿದೆ.

ಭಕ್ತಾದಿಗಳು ಈ ದಿನ ದೇವಿ ಮತ್ತು ಹನುಮಂತನ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.ಈ ದಿನ ಉಪವಾಸ ವ್ರತ ಕೈಗೊಳ್ಳುವವರು ಆ ದಿನ ರಾತ್ರಿ ಉಪ್ಪು ಹಾಕಿ ತಯಾರಿಸಿರುವ ಆಹಾರ ಪದಾರ್ಥಗಳನ್ನು ಮಂಗಳವಾರದ ರಾತ್ರಿಯ ಸಮಯದಲ್ಲಿ  ತಿನ್ನಬಾರದು.ಮಂಗಳವಾರ ಎನ್ನುವ ಹೆಸರು ಬಂದಿದ್ದು  ಆ ದಿನ ಮಂಗಳ ಗ್ರಹದ ಕಾರಣದಿಂದ.ಕುಜ ಗ್ರಹವು ಆ ದಿನದ  ಅಧಿಪತಿಯಾಗಿದ್ದಾನೆ.ಮಂಗಳ ಗ್ರಹವು ತೊಂದರೆಗಳನ್ನು  ಕೊಡುವವನು ಎಂದು ಸಹ ಪರಿಗಣಿಸಲಾಗಿದೆ.ಆದ್ದರಿಂದ ಆ ದಿನ ಉಪವಾಸವನ್ನು ಮಾಡುವುದರಿಂದ ಮಂಗಳ ಗ್ರಹದ ಪ್ರಭಾವ ತಗ್ಗುತ್ತವೆ.

 

1.ಮಂಗಳವಾರದ ದಿನಕ್ಕೆ ಕುಜ ಗ್ರಹ ಅಧಿಪತಿ.ಕುಜನ ಬಣ್ಣ ಕೆಂಪು ಆದ್ದರಿಂದ ಆ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿದರೆ ಆ ದಿನ ಒಳ್ಳೆಯದು ಅದು ಉತ್ತಮ ಅದೃಷ್ಟವನ್ನು ಸಹ ತಂದು ಕೊಡುವುದು.

2.ಸಾಮಾನ್ಯವಾಗಿ ಜನರು ಮಂಗಳವಾರದ ದಿನ ಉಪವಾಸ ವ್ರತವನ್ನು ಕೈಗೊಳ್ಳುವುದು ಭಗವಂತನಾದ ಹನುಮಾನ್,ಕಾರ್ತಿಕೇಯ,ದುರ್ಗಾ ದೇವಿ, ಕಾಳಿ ಮಾತೆ ದೇವರನ್ನು ಪ್ರಸನ್ನಗೊಳಿಸಲು ಮತ್ತು ಇನ್ನೂ  ಅನೇಕ ಕಾರಣಗಳು ಇರಬಹುದು. ಆದರೂ ಸಹ ದಂಪತಿಗಳು ಗಂಡು ಮಗು ಬೇಕು ಎಂದು ಭಯಸುವವವರು ಮಂಗಳವಾರದ ದಿನ ತಪ್ಪದೇ ಉಪವಾಸ ವ್ರತವನ್ನು ಆಚರಿಸುತ್ತಾರೆ.ಮಂಗಳವಾರದ ದಿನ ಉಪವಾಸ ಇರುವುದರಿಂದ ಕುಜನ ಕೆಟ್ಟ ಪ್ರಭಾವಗಳಿಂದ ಹೊರ ಬರಬಹುದು ಎಂದು ನಂಬಲಾಗಿದೆ.

 

 

ಯಾರು ಮಂಗಳವಾರದ ದಿನ ಉಪವಾಸ ವ್ರತವನ್ನು ಕೈಗೊಳ್ಳುತ್ತಾರೋ,ಅವರು ಒಂದು ಹೊತ್ತಿನ ಊಟವನ್ನು ಮಾತ್ರ ಮಾಡಬೇಕು.ಉಪವಾಸವನ್ನು  ಸೂರ್ಯನು  ಮಂಗಳವಾರ  ಬೆಳ್ಳಗ್ಗೆ ಉದಾಯಿಸಿದಾಗ ಪ್ರಾರಂಭಿಸಿ ಸೂರ್ಯ ಮತ್ತೆ ಬುಧುವಾರ ಬೆಳಗ್ಗೆ ಉದಿಯಿಸುವವರೆಗೂ ಉಪವಾಸ ವ್ರತವನ್ನು ಕೈಗೊಳ್ಳಬೇಕು.ಆದರೆ ಹೀಗೆ ಉಪವಾಸ ಇರಲು ಸಾಧ್ಯವಾಗವುದಿಲ್ಲ ಎನ್ನುವರು  ಗೋದಿ ಮತ್ತು ಬೆಲ್ಲವನ್ನು ಉಪಯೋಗಿಸಿ  ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಹುದು.ಕೆಲವು ಜನರು 21 ಮಂಗಳವಾರ ಉಪವಾಸ ವ್ರತವನ್ನು ಬಿಡದೇ ಕೈಗೊಳ್ಳುತ್ತಾರೆ.

3.ಜನರು ಮಂಗಳವಾರದ ದಿನ ಹನುಮಂತನಿಗೆ ಕೆಂಪು ಬಣ್ಣದ ಹೂವುಗಳನ್ನು ಸಮರ್ಪಿಸಬೇಕು. ಇದು ತಮ್ಮ ಜೀವನದಲ್ಲಿ ಮಂಗಳ ಗ್ರಹದಿಂದ ಉಂಟಾಗಿರುವ ಸಮಸ್ಯೆಗಳನ್ನು ಎದುರಿಸುವ ಸಮಸ್ಯೆಗಳಿಂದ ಹೊರ ಬರುವ ಶಕ್ತಿಯನ್ನು ಆಂಜನೇಯ ಸ್ವಾಮಿಯು  ನೀಡುವನು.

 

 

4. ಕೆಲವರು ಉಪವಾಸವಿದ್ದು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆಯುತ್ತಾರೆ.

5.ವಿವಾಹಕ್ಕೆ ಸೂರ್ಯನ ತಿಂಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ವಿವಾಹ ಸಮಾರಂಭಗಳನ್ನು ಅಧಿಕ ಮಾಸದಲ್ಲಿ,ಕ್ಷಯ ಮಾಸದಲ್ಲಿ, ಮತ್ತು ಚಾತುರ್ಮಾಸದಲ್ಲಿ  ಮತ್ತು ಮಹಾಲಯ ಅಮಾವಾಸ್ಯೆಯ ತಿಂಗಳು ಶ್ರದ್ದಾ ಸಮಯದಲ್ಲಿ ತಡೆ ಹಿಡಿದಿರುತ್ತಾರೆ.ಈ ಸಮಯದಲ್ಲಿ ಯಾವುದೇ ಮಂಗಳಕರ ಕಾರ್ಯಗಳನ್ನು ಮಾಡುವುದಕ್ಕೂ ಒಳ್ಳೆಯ ಸಮಯವಲ್ಲ.

 

ಹಾಗೆ ವಿವಾಹಕ್ಕೆ ಸೋಮವಾರ,ಬುಧುವಾರ,ಗುರುವಾರ,ಶುಕ್ರವಾರ ಮಂಗಳಕರವೆಂದು ಪರಿಗಣಿಸಲಾಗಿದೆ. ಉಳಿದ ದಿನಗಳಾದ ಮಂಗಳವಾರ  ಮತ್ತು ಶನಿವಾರ ಅಷ್ಟು ಒಳ್ಳೆಯದಲ್ಲವೆಂದು ಪರಿಗಣಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top