ಜ್ಯೋತಿಷ್ಯ

ಜೀವನದಲ್ಲಿ ತುಂಬಾ ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳೆಂದರೆ ಈ 8 ರಾಶಿಗಳಲ್ಲಿ ಹುಟ್ಟಿದವರು.

ಜೀವನದಲ್ಲಿ ತುಂಬಾ ಕಷ್ಟ ಪಟ್ಟು ದುಡಿಯುವ ವ್ಯಕ್ತಿಗಳೆಂದರೆ ಈ 8 ರಾಶಿಗಳಲ್ಲಿ ಹುಟ್ಟಿದವರು.

ಈ  8 ರಾಶಿಗಳಲ್ಲಿ ಜನಿಸಿದವರು ಜೀವನದಲ್ಲಿ ತುಂಬಾ ಕಷ್ಟ ಪಡುತ್ತಾರೆ.ಕಷ್ಟ ಪಟ್ಟು ದುಡಿದರೇನೇ ಫಲ ಸಿಗುವುದು.ಸುಮ್ಮನೆ ಕುಳಿತರೆ ಏನು ಆಗುವುದಿಲ್ಲ ಎಂದು ಹೇಳುವ ವ್ಯಕ್ತಿಗಳು ಇವರಾಗಿರುತ್ತಾರೆ. ಆದರೆ ಎಲ್ಲರೂ ಜೀವನದಲ್ಲಿ ಕಷ್ಟ ಪಡುವುದನ್ನು ಇಷ್ಟ ಪಡುವುದಿಲ್ಲ.ಕೆಲವರು ಎಷ್ಟೇ ಕಷ್ಟವಾದರೂ ಜೀವನದಲ್ಲಿ ಹಿಡಿದ ಕೆಲಸವನ್ನು  ಯಾವುದೇ ಕಾರಣಕ್ಕೂ  ಅರ್ಧಕ್ಕೆ ಬಿಡುವುದಿಲ್ಲ.ಹಾಗೆ ಇಂತಹ ವ್ಯಕ್ತಿಗಳಿಗೆ ಸುಮ್ಮನೇ ಕುಳಿತು ಕಾಲವನ್ನು ವ್ಯರ್ತವಾಗಿ ಕಳೆಯುವುದು ಸಹ ಇಷ್ಟವಾಗುವುದಿಲ್ಲ.ಇದನ್ನು ಅವರು ಶಿಕ್ಷೆ ಎಂದು ಭಾವಿಸುತ್ತಾರೆ.

ಆದರೆ ನೀವು ಯಾವತ್ತಾದರೂ ಯೋಚನೆ ಮಾಡಿದ್ದೀರ ?  ಯಾಕೆ ಕೆಲವರು ಜೀವನದಲ್ಲಿ ಅಷ್ಟೊಂದು ಕಷ್ಟ ಪಡುತ್ತಾರೆಂದು ? ಕಷ್ಟದ ಜೀವನವನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು.ನಿಮಗೆ ಇದನ್ನು ಕೇಳಿ ಆಶ್ಚರ್ಯವಾಗಬಹುದು!  ಆದರೂ ಸಹ ಇದು ಸತ್ಯ.ಹೌದು ನಿಜ 12 ರಾಶಿಗಳಲ್ಲಿ ಈ 8 ರಾಶಿಯವರು ಮಾತ್ರ ತುಂಬಾ  ಕಷ್ಟ ಪಡುತ್ತಾರೆ ಕಷ್ಟ ಆದರೂ ಇಷ್ಟ ಪಟ್ಟು ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಉಳಿದ 4 ರಾಶಿಗಳು ಕಷ್ಟ ಪಡುವುದಿಲ್ಲ ಅಂತ ಅಲ್ಲ ಇವರಷ್ಟು ಕಠಿಣ ಪರಿಶ್ರಮವನ್ನು ಉಳಿದ ನಾಲ್ಕು ರಾಶಿಗಳವರು ಮಾಡುವುದಿಲ್ಲ.

ಬನ್ನಿ ನೋಡೋಣ ನಿಮ್ಮ ರಾಶಿಯು ಕಷ್ಟ ಪಟ್ಟು ದುಡಿಯುವ ರಾಶಿಗಳಲ್ಲಿ ಎಷ್ಟನೇ ರಾಶಿಯಾಗಿದೆ ಎಂದು

ಮೊದಲನೇ ಸ್ಥಾನ ಮಕರ ರಾಶಿಗೆ.

 

ಒಟ್ಟು 12 ರಾಶಿಗಳಲ್ಲಿ ಮಕರ ರಾಶಿಯವರು ಜಾಸ್ತಿ ಕಷ್ಟ ಪಟ್ಟು ಪಡುವವರಾಗಿದ್ದಾರೆ.ಕೆಲಸವು ತುಂಬಾ ಮಹತ್ವಪೂರ್ಣದ್ದೇ ಆಗಿರಲಿ ಸಾಮಾನ್ಯವಾಗಿರಲಿ ಯಾವುದೇ ಕೆಲಸವಾಗಲಿ ಎಲ್ಲಾ ಕೆಲಸವನ್ನು ಚಾಕಚಕ್ಯತೆಯಿಂದ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕರ ರಾಶಿಯ ಪ್ರತ್ಯೇಕ ಚಿಹ್ನೆ ಮೇಕೆ .ಈ ಪ್ರಾಣಿಯು ತುಂಬಾ ಕಷ್ಟ ಪಡುವ ಪ್ರಾಣಿಯಾಗಿದ್ದು ಆದ್ದರಿಂದ ಇವರು ಕಠಿಣ ಪರಿಶ್ರಮ ಪಡುತ್ತಾರೆ.ಎಂತಹ ಭಂಜರು ಭೂಮಿಯಲ್ಲಿಯೂ ಸಹ ನೀವು ಈ ಪ್ರಾಣಿ ಮೇಕೆಯನ್ನು ಬಿಟ್ಟರು ಅದು ಭೂಮಿಯನ್ನು ಕೆರದು ಕೆರೆದು ಅಲ್ಲಿ ಹಸಿರಾಗಿ ಮಾಡುತ್ತದೆ. ಅದೇ ರೀತಿ ಈ ಮಕರ ರಾಶಿಯವರು ಸಹ ಜೀವನದಲ್ಲಿ ತುಂಬಾ ಕಷ್ಟ ಪಡುವ ವ್ಯಕ್ತಿಗಳಲ್ಲಿ ಮೊದಲನೇ ಸ್ಥಾನವನ್ನು ಈ ರಾಶಿಯವರು ಪಡೆದಿದ್ದಾರೆ.

ಎರಡನೇ ಸ್ಥಾನ ಕುಂಭ ರಾಶಿಗೆ.

ಕಷ್ಟ ಪಡುವ ವ್ಯಕ್ತಿಗಳಲ್ಲಿ ಈ ರಾಶಿಯವರು 2 ನೇ ಸ್ಥಾನ ಪಡೆದಿದ್ದಾರೆ.ಇವರು ತುಂಬಾ ಮಹತ್ವಾಕಾಂಕ್ಷಿಗಳು.ಇವರು ಜೀವನದಲ್ಲಿ  ಅನೇಕ ಕನಸುಗಳನ್ನು  ಇಟ್ಟುಕೊಂಡಿರುತ್ತಾರೆ .ಅವುಗಳನ್ನು ಪೂರ್ಣಗೊಳಿಸಲು ಎಷ್ಟೇ ಕಷ್ಟವಾದರೂ ಪರವಾಗಿಲ್ಲ ಕಷ್ಟ ಪಟ್ಟು  ದುಡಿದು ಎಲ್ಲದರಲ್ಲೂ ಯಶಸ್ಸನ್ನು ಪಡೆಯುತ್ತಾರೆ.

ಮೂರನೇ ಸ್ಥಾನ ಮೀನ ರಾಶಿಗೆ.

ಇವರು ತುಂಬಾ ಬುದ್ಧಿವಂತರಾಗಿದ್ದು.ಇವರದ್ದು ಅತ್ಯಂತ ಬುದ್ದಿವಂತ ರಾಶಿಯಾಗಿದೆ.ಅಸಂಭವ ಎನ್ನುವ ಕೆಲಸವನ್ನು ಸಂಭವಗೊಳಿಸುವ ವ್ಯಕ್ತಿಗಳು ಇವರು.ಕಷ್ಟದಿಂದ ಇವರು ಎಂದಿಗೂ ಹಿಂದೆ ಸರಿಯುವುದಿಲ್ಲ. ದಿವ್ಯಸ್ವಪ್ನಗಳನ್ನು ಕಾಣುತ್ತಾರೆ ಇವರು.ಆದ್ದರಿಂದ ಅವುಗಳನ್ನು ಪೂರ್ಣಗೊಳಿಸಲು ಕಷ್ಟ ಪಟ್ಟು ದುಡಿಯುತ್ತಾರೆ.ಒಂದು ಬಾರಿ ಅವರು ಮನಸ್ಸು ಮಾಡಿದರು ಎಂದರೆ ಮುಗಿಯಿತು ಹಿಂದೆ ಸರಿಯುವ ಮಾತೇ ಇಲ್ಲ.ಇವರು ಗುರಿಯನ್ನು ಸಾಧಿಸಲು ನಿಂತರೆಂದರೆ ನಿರ್ಧಾರ ಮಾಡಿ ಅದನ್ನು ಪಡೆಯಲು ಜೀವನವನ್ನೇ ಮುಡಿಪಾಗಿಡುತ್ತಾರೆ.

ನಾಲ್ಕನೇ ಸ್ಥಾನ ಮೇಷ ರಾಶಿಗೆ.

ಅಗ್ನಿ ತತ್ವ ರಾಶಿಯೂ ಕೂಡ ಆಗಿರುವ ಮೇಷ  ರಾಶಿಯವರು ಮಹತ್ವಾಕಾಂಕ್ಷಿಗಳು ಮತ್ತು  ಜೀವನದಲ್ಲಿ ಕಷ್ಟ ಪಡುವರು ಆಗಿದ್ದಾರೆ. ಆದರೆ ಇವರು ರಾಶಿಗಳಲ್ಲಿ ಮೊದಲನೇ ಸ್ಥಾನ ಅಲಂಕರಿಸಿದ್ದರೂ  ಕಷ್ಟ ಪಡುವವರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.ಇವರು ಐಷಾರಾಮಿ ಜೀವನವನ್ನು ಇಷ್ಟ ಪಡುವರು ಆಗಿದ್ದಾರೆ.ಅದನ್ನು ಗಳಿಸಲು ತುಂಬಾ ಕಷ್ಟ ಪಡುತ್ತಾರೆ.ಕಷ್ಟದಿಂದ  ಕೆಲಸ ಕಷ್ಟ ಅಂದುಕೊಂಡು ಎಂದಿಗೂ  ಹಿಂದೆ ಸರಿಯುವುದಿಲ್ಲ.

ಐದನೇ ಸ್ಥಾನ ವೃಷಭ ರಾಶಿಗೆ.

ಭೂಮಿ ತತ್ವ ಹೊಂದಿರುವ ಈ ರಾಶಿ.ಇವರಲ್ಲಿ ಒಂದು ವಿಬ್ಬಿನ್ನ ಆಕರ್ಷಣೀಯ ಕಾರ್ಯ ಕ್ಷಮತೆ ಇರುತ್ತದೆ. ವಸ್ತುಗಳನ್ನು ಮತ್ತು ವಿಷಯಗಳನ್ನು ನೋಡುವ ದೃಷ್ಟಿಕೋನವೇ ವಿಬ್ಬಿನ್ನವಾಗಿರುವುದರಿಂದ ಇವರು ಕೆಲಸವನ್ನು ಉತ್ತೇಜಿಸುವ  ಗುಣವನ್ನು ಹೊಂದಿದ್ದಾರೆ.ಇವರಿಗೆ ಕೆಲಸವೇ ಮುಖ್ಯವಾಗಿರುವುದರಿಂದ ಯಾವುಗಲು  ಕಷ್ಟ ಪಡುವುದಕ್ಕೆ ತಯಾರಾಗಿಯೇ ನಿಂತಿರುತ್ತಾರೆ.

ಆರನೇ ಸ್ಥಾನ ಮಿಥುನ ರಾಶಿಗೆ.

ಇವರು ಯೋಚನೆಯನ್ನು ಅವರದೇ ಆದ ಒಂದು ದೃಷ್ಟಿಕೋನವನ್ನು ಇಟ್ಟುಕೊಂಡು  ಮಾಡುತ್ತಾರೆ.ಇವರು ತುಂಬಾ ಮಹತ್ವಾಕಾಂಕ್ಷಿ ಗಳಾಗಿದ್ದು ಇವರಿಗೆ ಕಷ್ಟ ಪಟ್ಟು ಕೆಲಸ ಮಾಡುವ ಕಾಯಕದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ.ಐಷಾರಾಮಿ ಜೀವನ ಇವರಿಗೆ ಬಹಳ ಇಷ್ಟ.ಇದಕ್ಕಾಗಿಯೇ ಹಗಲು ರಾತ್ರಿ ಎನ್ನದೇ ಸತತವಾಗಿ ಪರಿಶ್ರಮ ಪಡುತ್ತಾರೆ.ಎಲ್ಲಿಯವರೆಗೆ ಆ ಗುರಿಯನ್ನು ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಸಮಾಧಾನ ಆಗುವುದಿಲ್ಲ.ಇಷ್ಟವಾದ ಪ್ರತಿಯೊಂದು ವಸ್ತುವನ್ನು ಪಡೆಯಲು ಹಂಬಲಿಸುತ್ತಾರೆ.

ಏಳನೇ ಸ್ಥಾನ ಕಟಕ ರಾಶಿಗೆ.

ಕಟಕ ರಾಶಿಯವರು ನೋಡುವುದಕ್ಕೆ ಜೀವನದಲ್ಲಿ ಇವರು ಕಷ್ಟ ಪಟ್ಟು ದುಡಿಯುತ್ತಾರೆ ಎಂದು ಅನಿಸುವುದಿಲ್ಲ.ಆದರೆ ಇವರಿಗೆ ಅವರು  ಮಾಡುವ ಕೆಲಸದಲ್ಲಿ ಪರಿಪೂರ್ಣತೆಯಿಂದ ಇರುವುದು ಬಹಳ ಮುಖ್ಯ. ಯಾವುದಾದರೂ ಕೆಲಸವನ್ನು ತಮ್ಮ ಕೈಗೆ ತೆಗೆದುಕೊಂಡರೆ ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ.ಎಲ್ಲಿಯವರೆಗೂ ಹಿಡಿದ ಕೆಲಸ ಮುಗಿಯುವುದಿಲ್ಲವೋ ಅಲ್ಲಿಯವರೆಗೂ ಕೆಲಸವನ್ನು ಮಾಡುತ್ತಲೇ ಇರುತ್ತಾರೆ.

ಎಂಟನೇ ಸ್ಥಾನ ಸಿಂಹ ರಾಶಿಗೆ.

ಅಗ್ನಿ ತತ್ವದ  ಜೊತೆ ಹೊಂದಿಕೊಂಡಿರುವ ಈ ರಾಶಿ ಇಲ್ಲಿ ಅವರು ಮಹತ್ವಾಕಾಂಕ್ಷಿ ಮಾತ್ರವಲ್ಲ ಅಧಿಕಾರವನ್ನು ಪಡೆಯಲು ಸಹ ಕಷ್ಟ ಪಟ್ಟು ದುಡಿಯುತ್ತಾರೆ.ಅಧಿಕಾರವನ್ನು ಪಡೆಯಲು ಇಷ್ಟ ಪಟ್ಟು ಕಷ್ಟ ಪಡುತ್ತಾರೆ.

ಹೀಗೆ ಈ ಎಂಟು ರಾಶಿಗಳು ಎಂಟು ಸ್ಥಾನವನ್ನು ಗಳಿಸಿದ್ದಾರೆ ಹಾಗೆ ಉಳಿದ ನಾಲ್ಕು  ರಾಶಿಗಳು ಹೇಗೆ ಎಂದು ತಿಳಿಯೋಣ ಬನ್ನಿ.

ಕನ್ಯಾ ರಾಶಿ.

ಇವರ ಬಗ್ಗೆಯೂ ಯಾವುದೇ ಅನುಮಾನವಿಲ್ಲ.ಈ ರಾಶಿಯವರು ಕಷ್ಟ ಪಡುವುದನ್ನು ಎಂದಿಗೂ ಇಷ್ಟ ಪಡುವುದಿಲ್ಲ.ಅಂತಹ ಪರಿಸ್ಥಿತಿ ಅಥವಾ ಆ ಸ್ಥಳದಿಂದ ಬೇಗನೆ ಹಿಂದೆ ಸರಿಯುತ್ತಾರೆ. ಆದ್ದರಿಂದ ಇವರು ಯಾವುದಾದರೂ ಕಠಿಣ ಕೆಲಸ ಮಾಡಬೇಕೆಂದರೆ ಆ ಕೆಲಸವನ್ನು ಅರ್ಧಕ್ಕೆ ಮುಗಿಸಿ ಬಂದು ಬಿಡುತ್ತಾರೆ ಯಾವುದೇ ರೀತಿಯಲ್ಲದರೂ ಕಾರಣ ಹೇಳಿ ಹಿಂದೆ ಸರಿಯುತ್ತಾರೆ.

ತುಲಾ ರಾಶಿ.

ಈ ರಾಶಿ ಶುಕ್ರ ಗ್ರಹಕ್ಕೆ ಸಂಬಂಧಪಟ್ಟ ಗ್ರಹವಾಗಿದ್ದು.ಈ ರಾಶಿಯ ವ್ಯಕ್ತಿಗಳು ಆರಾಮದಾಯಕ ಜೀವನವನ್ನು ಇಷ್ಟ ಪಡುತ್ತಾರೆ.ಆದರೆ ಇವರಿಗೆ ಐಷಾರಾಮಿ ಜೀವನವೆಂದರೆ ಬಹಳ ಇಷ್ಟ.ಆದ್ದರಿಂದ ಕೆಲಸಗಳಿಗೆ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಾರೆ.ಆದರೆ ಕೆಲಸವನ್ನೂ ಬೇಗ ಬೇಗನೆ ಮುಗಿಸುವ ಸ್ವಭಾವ ಇವರದ್ದು.

ವೃಶ್ಚಿಕ ರಾಶಿ.

 

ಕಷ್ಟ ಪಟ್ಟು ಕೆಲಸ ಮಾಡುವ  ಇನ್ನುಳಿದ ಜಲ ತತ್ವ ರಾಶಿಗಳಾದ  ಕಟಕ ಮತ್ತು ಮೀನ ರಾಶಿಗಳಿಗಿಂತ ಈ ರಾಶಿಯವರು ತುಂಬಾ ವಿಬ್ಬಿನ್ನವಾಗಿದ್ದಾರೆ.ಇವರು ಅಧಿಕ ಸಮಯವನ್ನು ಶತ್ರುಗಳಿಂದ ಹೇಗೆ ಸೇಡು ತೀರಿಸಿಕೊಳ್ಳುವುದು ಎಂದು ಯೋಚಿಸುತ್ತಿರುತ್ತಾರೆ.ಆದರೆ ಮಾಡುವ ಕೆಲಸದಲ್ಲಿ ಮನಸ್ಸಿಟ್ಟು,ಶ್ರದ್ಧೆಯಿಂದ ಕೆಲಸ  ಮಾಡುವುದಿಲ್ಲ ಕೆಲಸದಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ನೋಡುತ್ತಾರೆ.

ಧನಸ್ಸು ರಾಶಿ.

ಎಲ್ಲಾ 12 ರಾಶಿಯಲ್ಲಿಯೂ ಕೂಡ ಎಲ್ಲರಿಗಿಂತ ಕೆಳಗಿನ ಸ್ಥಾನ ಪಡೆದಿರುವುದು ಈ ಧನಸ್ಸು ರಾಶಿ ಅಂದರೆ ಇವರು ಅತೀ ಕಡಿಮೆ ಕಷ್ಟ ಪಡುವವವರು.ಇವರಿಗೆ ಕಷ್ಟ ಪಟ್ಟು ದುಡಿಯುವುದು ಇಷ್ಟ ಆದರೆ ಕೆಲಸ ಮಾಡಲು ಇವರ ಕೈಲಿ ಆಗುವುದಿಲ್ಲ.ಇವರು ತಿರುಗಾಡಿಕೊಂಡು ಓಡಾಡಿಕೊಂಡು ಇರುವ ಆರಾಮದಾಯಕ ಜೀವನವನ್ನು ಇಷ್ಟ ಪಡುತ್ತಾರೆ.ಸದಾ ಕಾಲವು ಇವರ ಬಗ್ಗೆ ಮಾತ್ರವೇ ಇವರು ಯೋಚನೆ ಮಾಡುತ್ತಾರೆ.ಆದ್ದರಿಂದ ಯಾವುದೇ ಕೆಲಸ ಕೊಟ್ಟರೂ ಅಲ್ಲಿಂದ  ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಬೇಗನೆ ಆಚೆ ಬಂದು ಬಿಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top