fbpx
ಭವಿಷ್ಯ

ಹೆಂಡತಿ ಮತ್ತು ಮಗನೊಂದಿಗೆ ಆಟೋರಿಕ್ಷಾದಲ್ಲಿಯೇ ಬೆಂಗಳೂರು ಸುತ್ತಾಡಿದ ಎಬಿಡಿ ಅಭಿಮಾನಿಗಳಿಗೆ ಹೇಳಿದ್ದೇನು ಗೊತ್ತಾ?

ಪ್ರಪಂಚದಾದ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕೆಲವೇ ಕೆಲವು ಕ್ರಿಕೆಟ್ ಪಟುಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಕೂಡ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.. ಇವರನ್ನು ಇಷ್ಟಪಡದ ಕ್ರಿಕೆಟ್ ಪ್ರೇಮಿಯೇ ಇಲ್ಲ ಎಂಬ ಮಾತಿದೆ, ಭಾರತದಲ್ಲೂ ಕೂಡ ಇವರಿಗೆ ಇರುವ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ.. ಅಖಾಡಕ್ಕೆ ಇಳಿದರೆ ಮೈದಾನದ ಎಲ್ಲಾ ಮೂಲೆಗಳಿಗೂ ಚೆಂಡನ್ನು ಬಾರಿಸುವ ಅಪರೂಪದ ಟ್ಯಾಲೆಂಟ್ ಹೊಂದಿರುವ ಈ ಅಸಮಾನ್ಯ ಪ್ರತಿಭೆ ತಮ್ಮ ಸಭ್ಯ ವ್ಯಕ್ತಿತ್ವದ ಗುಣ-ನಡತೆಯ ಮೂಲಕವೂ ಆಗಾಗ ಎಲ್ಲರನ್ನು ಮೆಚ್ಚಿಸುತ್ತಿರುತ್ತಾರೆ

 

 

ಈ ಹಿಂದೆ ಸಂದರ್ಶನವೊಂದರಲ್ಲಿ “ಇಡೀ ಪ್ರಪಂಚದಲ್ಲಿಯೇ ಬೆಂಗಳೂರು ಜನ ನನಗೆ ತುಂಬಾ ಸಪೋರ್ಟ್ ಮಾಡ್ತಾರೆ” ಎಂದು ಹೇಳಿ ಬೆಂಗಳೂರಿಗರನ್ನ ಮೆಚ್ಚಿಕೊಂಡಿದ್ದ ಎಬಿಡಿ ಡಾ. ರಾಜಕುಮಾರ್ ಅವರ ಬಾನಿಗೊಂದು ಎಲ್ಲೇ ಎಲ್ಲಿದೆ ಹಾಡನ್ನು ಹಾಡಿ ಕನ್ನಡಿಗರ ಮನಗೆದ್ದಿದ್ದರು..ಇದೀಗ ಮತ್ತೊಮ್ಮೆ ಬೆಂಗಳೂರಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಈಗಿನ ಕ್ಯಾಬ್ ಕಾಲದಲ್ಲಿ ಆಟೋ ಎಂದರೆ ಮೂಗು ಮುರಿಯೋ ಜನರೇ ಹೆಚ್ಚು ಅಂತಹುದರಲ್ಲಿ ತಾವೊಬ್ಬ ಟಾಪ್ ಒನ್ ಕ್ರಿಕೆಟರ್ ಎಂಬ ಹಮ್ಮು ಇಲ್ಲದೇ ತಮ್ಮ ಕುಟುಂಬದ ಸಮೇತ ಆಟೋ ರಿಕ್ಷಾವೊಂದರಲ್ಲೇ ಇಡೀ ಬೆಂಗಳೂರನ್ನು ಸುತ್ತುವ ಮೂಲಕ ಎಬಿಡಿ ತಾವು ಇಂತಹ ವಿನೀತ ವ್ಯಕ್ತಿ ಎಂದು ತೋರಿಸಿದ್ದಾರೆ..

 

 

ತಾವು ಆಟೋದಲ್ಲಿ ಪ್ರಯಾಣಿಸುತ್ತಿರುವಾಗ ಕೆಲವು ಆರ್ಸಿಬಿ ಅಭಿಮಾನಿಗಳು ಅವರನ್ನು ಬೈಕ್ ಮೂಲಕ ಅವರನ್ನು ಹಿಂಬಾಲಿಸಿದ್ದಾರೆ.. ಅವರು ಹಿಂಬಾಲಿಸುತ್ತಿರುವುದನ್ನು ನೋಡಿ ಚೂರು ಬೇಸರ ಪಟ್ಟುಕೊಳ್ಳದ ಎಬಿಡಿ ತಮ್ಮ ಮೊಬೈಲ್ ನಲ್ಲಿಯೇ ಅಭಿಮಾನಿಗಳು ಹಿಂಬಾಲಿಸುತ್ತಿರುವುದನ್ನು ವಿಡಿಯೋ ಮಾಡಿದ್ದು ಅವರೊಟ್ಟಿಗೆ ಸೇರಿ ತಾವೂ ಕೂಡ ಆರ್ಸಿಬಿ ಅಭಿಮಾನಿಗಳ ಸ್ಲೋಗನ್ ಆಗಿರುವ “ಈ ಸಲ ಕಪ್ ನಮ್ದೇ” ಎಂದು ಹೇಳಿ ಅವರನ್ನು ಖುಷಿ ಪಡಿಸಿದ್ದಾರೆ.. ಅಷ್ಟೇ ಅಲ್ಲದೆ ಅವರ ಪತ್ನಿ ಮತ್ತು ಮಗ ಕೂಡ ‘ಈ ಸಲ ಕಪ್ ನಮ್ದೇ’ ಎಂದು ಹೇಳಿ ಖುಷಿ ಪಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಬಿಡಿಯ ಈ ಸಭ್ಯತೆಗೆ ಮುಚ್ಚುಗೆ ವ್ಯಕ್ತವಾಗುತ್ತಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top