ತಿಂಡಿ ತೀರ್ಥ

ಪೌಷ್ಟಿಕ ಆಹಾರ ರುಚಿಯಾದ ರಾಗಿ ರೊಟ್ಟಿ  ಮಾಡುವ ವಿಧಾನ

ರಾಗಿ ರೊಟ್ಟಿ(Finger millet Rotti )  ಮಾಡಲು ಬೇಕಾಗುವ ಪದಾರ್ಥಗಳು:    

*ಸಾಮಗ್ರಿಗಳು

*ರಾಗಿಹಿಟ್ಟು – 2 ಕಪ್‌

*ಹೆಚ್ಚಿಕೊಂಡ ಈರುಳ್ಳಿ – 1 ಕಪ್‌

*ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ

*ಜೀರ್ಗೆ

*ಕರಿಬೇವು ಎಸಳು

*ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು

*ಕಾಯಿತುರಿ

*ಉಪ್ಪು – ರುಚಿಗೆ ತಕ್ಕಷ್ಟು

 

 

ರಾಗಿ ರೊಟ್ಟಿ  ಮಾಡುವ ವಿಧಾನ: *ಪ್ಯಾನಿನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಜೀರ್ಗೆ, ಹಸಿಮೆಣಸಿನ ಕಾಯಿ, ಕರಿಬೇವು, ಈರುಳ್ಳಿ ಸೇರಿಸಿ 2 ನಿಮಿಷ ಫ್ರೈ ಮಾಡಿಕೊಳ್ಳಿ.

*ಇದರೊಂದಿಗೆ ನೀರು ಸೇರಿಸಿ ಕುದಿಯಲು ಬಿಡಿ.

*ನೀರು ಕುದಿಯಲು ಆರಂಭಿಸಿದಾಗ ಸ್ವಲ್ಪ ಸ್ವಲ್ಪವೇ ರಾಗಿಹಿಟ್ಟು ಸೇರಿಸಿಕೊಂಡು ರೊಟ್ಟಿ ತಟ್ಟಿಕೊಳ್ಳುವ ಹದಕ್ಕೆ ಹಿಟ್ಟು ತಯಾರಿಸಿಕೊಳ್ಳಿ.

 

 

 

*ಹಿಟ್ಟು ತಣ್ಣಗಾದಾಗ ಉಪ್ಪು, ಕೊಬ್ಬರಿ , ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ.5.ಬಾಳೆ ಎಲೆ ಅಥವಾ, ಎಣ್ಣೆ ಕವರ್‌‌ ಮೇಲೆ ಸ್ವಲ್ಪ ಎಣ್ಣೆ ಸವರಿಕೊಂಡು ರಾಗಿಹಿಟ್ಟಿನ ಮಿಶ್ರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿ ರೊಟ್ಟಿ ತಟ್ಟಿಕೊಂಡು ತವಾದಲ್ಲಿ ಎರಡೂ ಕಡೆ ಬೇಯಿಸಿಕೊಳ್ಳಿ.

ಬಿಸಿ ಬಿಸಿ ರುಚಿಯಾದ ರಾಗಿರೊಟ್ಟಿಯನ್ನು ಚಟ್ನಿ ಅಥವಾ ನಿಮಗಿಷ್ಟವಾದ ಕರ್ರಿಯೊಂದಿಗೆ ತಿನ್ನಿ.

 

ಬೇಸಿಗೆಯ ತಾಪಕ್ಕೆ ತಂಪಾದ ಗುಣವನ್ನು ಹೊಂದಿರುವ ರಾಗಿಯನ್ನು ಉಪಯೋಗಿಸಿದ ಖಾದ್ಯಗಳೇ ಹೆಚ್ಚು ಹಿತಕರ. ಬೆಳಗಿನ ಉಪಾಹಾರಕ್ಕೆ ರಾಗಿರೊಟ್ಟಿಯನ್ನು ಮಾಡಿ, ಜೊತೆಗೆ ಯಾವುದಾದರೂ ಚಟ್ನಿಯನ್ನು ಮಾಡಿದರೆ ಚೆನ್ನಾಗಿ ಹೊಟ್ಟೆಯೂ ತುಂಬುವುದಲ್ಲದೆ, ದೇಹವೂ ತಂಪಾಗಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top