fbpx
ಉದ್ಯೋಗ

ರಿಲಯನ್ಸ್ ಜಿಯೊದಲ್ಲಿ ಉದ್ಯೋಗಗಳ ಸುರಿಮಳೆ: 80 ಸಾವಿರ ಉದ್ಯೋಗ

ಭಾರತೀಯ ಟೆಲಿಕಾಂ ವಲಯದಲ್ಲಿ ಧೈತ್ಯ ಸಂಸ್ಥೆ ಆಗುವತ್ತ ಹೆಜ್ಜೆ ಹಾಕುತ್ತಿರುವ ರಿಲಯನ್ಸ್ ಜಿಯೋ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ವಲಯವನ್ನು ಇನ್ನಷ್ಟು ವಿಸ್ತಾರ ಮಾಡಲು ಯೋಜನೆ ರೂಪಿಸುತ್ತಿದೆ. ಈ ಹಿನ್ನಲೆಯಲ್ಲಿ ರಿಲಯನ್ಸ್ ಜಿಯೊ 75 ರಿಂದ 80 ಸಾವಿರದವರೆಗೆ ಜನರನ್ನು ನೇಮಕಾತಿ ಮಾಡಲು ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

 

 

ಈಗ ರಿಲಯನ್ಸ್ ಜಿಯೋ ನಲ್ಲಿ 1,57,000 ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ 10 ಲಕ್ಷ ರಿಟೈಲರ್ ಗಳಿದ್ದು ಪ್ರತಿಯೊಬ್ಬರೂ ಇಬ್ಬರು ಅಥವಾ ಮೂವರು ಉದ್ಯೋಗಿ ಮೇಲೆ ಪರಿಣಾಮ ಬೀರುತ್ತಾರೆ.

 

 

ರಿಲಯನ್ಸ್ ಜಿಯೋ ಪೇಮೆಂಟ್ ಬ್ಯಾಂಕ್ ಕೂಡ ಭೌಗೋಳಿಕವಾಗಿ ವಿಸ್ತಾರವಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಯೊ ಜೊತೆ ಇನ್ನಷ್ಟು ಮಂದಿ ನೌಕರರನ್ನು ನೇಮಕಾತಿ ಮಾಡುತ್ತೇವೆ ಎಂದು ರಿಲಯನ್ಸ್ ಜಿಯೊದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸಂಜಯ್ ಜೊಗ್ ಹೇಳಿದ್ದಾರೆ.

 

 

ರಿಲಯನ್ಸ್ ಜಿಯೊ ಕಂಪೆನಿ ದೇಶಾದ್ಯಂತ 6,000 ಕಾಲೇಜು , ತಾಂತ್ರಿಕ ಸಂಸ್ಥೆಗಳ ಜೊತೆ ಸಹಯೋಗವನ್ನು ಹೊಂದಿದೆ. ಈ ಸಂಸ್ಥೆಗಳಲ್ಲಿ ಕೆಲವು ಕೋರ್ಸ್ ಗಳನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದರಲ್ಲಿ ಪಾಸ್ ಆದವರನ್ನು ಕಂಪೆನಿ ನೇಮಕ ಮಾಡುತ್ತದೆ. ಕಂಪೆನಿಗೆ ಅಭ್ಯರ್ಥಿಗಳನ್ನು ಉಲ್ಲೇಖದ ಮೂಲಕ ಹಾಗು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಲಾಗುವುದು ಎಂದು ಸಂಜಯ್ ಜೊಗ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top