ಕಿರುತೆರೆ

ರಮೇಶ್ ಸಾರಥ್ಯದಲ್ಲಿ ಮೂಡಿ ಬರಲಿರುವ ಕನ್ನಡದ ಕೋಟ್ಯಧಿಪತಿ ಸೀಸನ್-3 ಕಾರ್ಯಕ್ರಮಕ್ಕೆ ಆಗಮಿಸಲಿರುವ ಮೊದಲ ಸ್ಪರ್ಧಿ ಯಾರು ಗೊತ್ತಾ?

ಕನ್ನಡ ಕಿರುತೆರೆಯ ದಿಕ್ಕನ್ನೇ ಹೊಸ ದಾರಿಯತ್ತ ಕೊಂಡೋಯ್ದಿದ್ದ ಕೋಟ್ಯಧಿಪತಿ ಕಾರ್ಯಕ್ರಮ ಎಂಬ ಕಾರ್ಯಕ್ರಮ ಯಾವ ಮಟ್ಟಿಗೆ ಜನಮಾನಸದಲ್ಲಿ ಹೆಸರು ಮಾಡಿತ್ತು ಅಂತ ಬಿಡಿಸಿ ಹೇಳಬೇಕಾಗಿಲ್ಲ, ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನಡೆದಿದ್ದ ಈ ಕಾರ್ಯಕ್ರಮ ಅದ್ಯಾಕೋ ಗೊತ್ತಿಲ್ಲ ಮುಂದಿನ ಸೀಸನ್’ಗಳು ಪ್ರಾರಂಭವಾಗಿರಲಿಲ್ಲ. ಆದರೀಗ ಮೂರನೇ ಸೀಸನ್ ಶುರುಮಾಡಲು ತೆರೆ ಮರೆಯಲ್ಲಿ ಸಿದ್ದತೆಗಳು ಜೋರಾಗಿ ನಡೆಯುತ್ತಿದ್ದು ನೂತನ ವಿನೂತನವಾಗಿ ಆದಷ್ಟು ಬೇಗ ನಿಮ್ಮ ಮುಂದೆ ಬರಲು ಸಜ್ಜಾಗಿದೆ. ಸಹಜವಾಗಿ ಈ ವಿಷಯ ವೀಕ್ಷಕರಿಗೆ ಖುಷಿಯನ್ನು ತರಿಸಿದೆ.

 

 

ಈ ಹಿಂದಿನ 2 ಸೀಸನ್’ಗಳನ್ನೂ ಅನ್ನು ಪುನೀತ್ ರಾಜ್ ಕುಮಾರ್ ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು ಆದರೆ ಈ ಭಾರಿ ಕಾರಣಾಂತರಗಳಿಂದ ಈ ಸೀಸನ್ನಿನ ಕಾರ್ಯಕ್ರಮವನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ ಆದ ಕಾರಣ ಕಾರ್ಯಕ್ರಮದ ಸಾರಥ್ಯ ವಹಿಸಿಕೊಳ್ಳಲು ಬೇರೆ ಖ್ಯಾತನಾಮ ನಟರನ್ನು ಚಾನೆಲ್ ಹುಡುಕಾಟ ನಡೆಸುತ್ತಿತ್ತು. ಅದರಂತೆ ಕಾರ್ಯಕ್ರಮವನ್ನು ನಡೆಸಿಕೊಡಲು ಯಶ್ , ಉಪೇಂದ್ರ, ರಮೇಶ್ ಸೇರಿದಂತೆ ಅನೇಕ ಖ್ಯಾತನಾಮರ ಹೆಸರುಗಳು ಕೇಳಿಬರುತ್ತಿತ್ತು. ಆದರೆ ಇದೀಗ ಈ ಎಲ್ಲಾ ಅಂತೇ ಕಂತೆ ಸುದ್ದಿಗಳಿಗೂ ಬ್ರೇಕ್ ಬಿದ್ದಿದ್ದು ಅಂತಿಮವಾಗಿ ಕಾರ್ಯಕ್ರಮದ ನಿರೂಪಕರಾಗಿ ನಟ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ..

 

 

ಆಗಾಗಲೇ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಫೋಟೋಶೂಟ್ ಮುಗಿದಿದ್ದು ಪ್ರೊಮೊ ಕೂಡ ಸ್ಟಾರ್ ಸುವರ್ಣ ಚಾನೆಲ್ಲಿನ ಅಫೀಶಿಯಲ್ ಫೇಸ್ಬುಕ್ ಪೇಜ್ ನಲ್ಲಿ ಪ್ಪೋಸ್ಟ್ ಮಾಡಲಾಗಿದೆ.. ಈ ಹಿಂದೆ ವೀಕೆಂಡ್ ವಿತ್ ರಮೇಶ್, ಪ್ರೀತಿಯಿಂದ ರಮೇಶ್ ಗಳಂತಹ ಶೋಗಳನ್ನು ನಡೆಸಿಕೊಟ್ಟಿದ್ದ ರಮೇಶ್ ಅವರು ಮತ್ತೊಮ್ಮೆ ಕಿರುತೆರೆಗೆ ಮರಳಿದ್ದು ಯಶಸ್ವಿಯಾಗಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ನಡೆಸಿಕೊಡುವ ಭರವಸೆಯಲ್ಲಿದ್ದಾರೆ… ಕಾರ್ಯಕ್ರಮ ಅತಿ ಶೀಘ್ರದಲ್ಲೇ ಆರಂಭವಾಗುತ್ತಿದ್ದು ಆರಂಭವಾಗುವ ದಿನಾಂಕ ಮತ್ತು ಕಾರ್ಯಕ್ರಮದ ಟೈಮಿಂಗ್ಸ್ ಬಗ್ಗೆ, ಮತ್ತು ಕಾರ್ಯಕ್ರಮವ ವಾರದಲ್ಲಿ ಎಷ್ಟು ದಿನ ಪ್ರಸಾರವಾಗುತ್ತದೆ ಎಂಬಂತ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ..

 

 

ಈ ಎಲ್ಲವುಗಳ ಮದ್ಯೆ ಮತ್ತೊಂದು ಸುದ್ದಿಯನ್ನು ಸ್ವತಃ ರಮೇಶ್ ಅವರೇ ಬಹಿರಂಗ ಪಡಿಸಿದ್ದು ಕನ್ನಡದ ಕೋಟ್ಯಧಿಪತಿ ಸೀಸನ್-3 ಕಾರ್ಯಕ್ರಮದ ಮೊದಲ ಎಪಿಸೋಡಿಗೆ ಪುನೀತ್ ರಾಜಕುಮಾರ್ ಅವರನ್ನು ಕರೆಸುವ ಇಚ್ಛೆಯಿದೆ ಎಂದು ಹೇಳಿದ್ದಾರೆ. ನೆನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕಾರ್ಯಕ್ರಮದ ಮೊದಲ ಸಂಚಿಕೆ ಹಾಟ್ ಸೀಟ್ ಮೇಲೆ ಯಾರನ್ನು ನೋಡಲು ಇಷ್ಟಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್ “ನಾನು ನಡೆಸಿಕೊಟ್ಟಿದ್ದ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊದಲ ಸಂಚಿಕೆಗೆ ಆಗಮಿಸಿದ್ದ ವ್ಯಕ್ತಿಯನ್ನೇ ಕನ್ನಡದ ಕೋಟ್ಯಾಧಿಪತಿ ಈ ಸೀಸನ್ನಿನ ಮೊದಲ ಎಪಿಸೋಡಿನಲ್ಲಿಯೂ ಹಾಟ್ ಸೀಟ್ ನಲ್ಲಿ ನೋಡಲು ಇಷ್ಟಪಡುತ್ತೇನೆ. ಅದು ಬೇರೆ ಯಾರೂ ಅಲ್ಲ ಪುನೀತ್ ರಾಜ್‍ಕುಮಾರ್” ಎಂದು ಹೇಳಿದರು. ರಮೇಶ್ ಅವರು ಈ ರೀತಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರೂ ಕಾರ್ಯಕ್ರಮದ ಮೊದಲ ಅತಿಥಿಯಾಗಿ ಪುನೀತ್ ರನ್ನುಕರೆತರಲು ಇನ್ನೂ ಮಾತುಕತೆ ನಡೆಸಿಲ್ಲವಂತೆ ಹಾಗಾಗಿ ರಮೇಶ್ ಎದುರು ಪ್ರಥಮಬಾರಿಗೆ ಹಾಟ್ ಸೀಟ್ ಕೂರಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top