fbpx
ರಾಜಕೀಯ

ನಿಖಿಲ್ ಕುಮಾರ್ ಹಾಕಿದ ಅವಾಜ್ ನೋಡಿ ಉಲ್ಟಾ ಹೊಡೆದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ!

ಇಡೀ ಕರ್ನಾಟಕಾದ್ಯಂತ ಚುನಾವಣೆಯ ಬಿಸಿಗಾಳಿ ರಭಸವಾಗಿ ಬೀಸುತ್ತಿದ್ದು ಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ತಮ್ಮ ಬಾಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ರಾಜಕಾರಣಿಗಳು ತಮ್ಮ ವಿರೋಧಿಗಳ ವರ್ಚಸ್ಸನ್ನು ಕುಂದಿಸಲು ಮಾತಿನ ಬಾಣಗಳನ್ನು ಬಿಡುತ್ತಿದ್ದಾರೆ. ಇದೀಗ ಮಾಗಡಿ ರೆಬೆಲ್ ಶಾಸಕ ಹೆಚ್,ಸಿ. ಬಾಲಕೃಷ್ಣ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಸುಪುತ್ರ ನಿಖಿಲ್ ವಿರುದ್ಧ ಹೊಸ ಬಾಂಬ್ ವೊಂದನ್ನು ಸ್ಪೋಟಿಸಿದ್ದಾರೆ.

 

 

ಸುಮಾರು ವರ್ಷಗಳಿಂದಲೂ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಂತೆ ಗುರುತಿಸಿಕೊಂಡಿದ್ದಾತ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ. ಆದರೆ ಅವರೀಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ. ಒಂದು ಕಾಲದಲ್ಲಿ ಕುಚುಕು ಗೆಳೆಯರಂತೆ, ಒಂದೇ ತಾಯಿಯೊಟ್ಟೆಯಲ್ಲಿ ಹುಟ್ಟಿದ ಅಣ್ಣತಮ್ಮಂದಿರಂತೆ ಇದ್ದ ಕುಮಾರಸ್ವಾಮಿ ಮತ್ತು ಬಾಲಕೃಷ್ಣ ಅದ್ಯಾವ ಕಾರಣಕ್ಕೂ ಏನೋ ಸಂಪೂರ್ಣ ಜಿದ್ದಾಜಿದ್ದಿಗೆ ಇಳಿದಿರುವುದು ಎಲ್ಲರಿಗೂ ಗೊತ್ತಿರೋ ವಿಷಯವೇ. ಹೆಚ್ಡಿಕೆಗೆ ಸೆಡ್ಡು ಹೊಡೆದು ಜೆಡಿಎಸ್ ವಿರುದ್ಧ ಬಂಡಾಯವೆದ್ದು ಪಕ್ಷವನ್ನೇ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವ ಹೆಚ್.ಸಿ.ಬಿ ಈ ಭಾರಿಯ ಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದ್ದು ಏನೇ ಆದರೂ ಸರಿ ಈ ಭಾರಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದಾರೆ.. ಹಾಗೆ ನೋಡಿದರೆ ಮಾಗಡಿ ಕ್ಷೇತ್ರ ಬಾಲಕೃಷ್ಣಗೆ ಹೇಗೆ ಪ್ರತಿಷ್ಠೆಯ ಕಣವಾಗಿದೆಯೋ ಇತ್ತ ಕುಮಾರಸ್ವಾಮಿಗೂ ಕೂಡ ಅಷ್ಟೇ ಪ್ರತಿಷ್ಠೆಯ ಕಣವಾಗಿದೆ. ಹಾಗಾಗಿ ತಮ್ಮ ವಿರುದ್ಧವೇ ಬಂಡಾಯ ಎದ್ದಿರುವ ಬಾಲಕೃಷ್ಣರನ್ನು ಮಾಗಡಿಯಲ್ಲಿ ಈ ಬಾರಿ ಸೋಲಿಸಲೇಬೇಕೆಂದು ಪಣತೊಟ್ಟಂತಿರುವ ಹೆಚ್ಡಿಕೆ ಕೂಡ ನಾನಾ ರೀತಿಯ ರಾಜಕೀಯ ರಣತಂತ್ರಗಳನ್ನ ರೂಪಿಸಿದ್ದು ಒಂದೊಂದೇ ಅಸ್ತ್ರಗಳನ್ನು ಬಾಲಕೃಷ್ಣನವರ ಮೇಲೆ ತೂರಿ ಬಿಡುತ್ತಿದ್ದಾರೆ.

 

 

ಅದರಂತೆ ಇದೀಗ ಮಾಗಡಿ ಅಖಾಡಕ್ಕೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಧುಮುಕಿದ್ದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರವಾಗಿ ಕ್ಷೇತ್ರದ ಉದ್ದಗಲಕ್ಕೂ ಪ್ರಚಾರ ನಡೆಸುತ್ತಿದ್ದಾರೆ..ಇತ್ತೀಚಿಗೆ ಕೆಲವು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ನಿಖಿಲ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ.ಬಾಲಕೃಷ್ಣ ವಿರುದ್ಧ ಕೆಂಡಕಾರಿದ್ದು ಸ್ವಲ್ಪ ಜಾಸ್ತಿಯೇ ಎನ್ನುವಂತ ಆವೇಶದ ಮಾತುಗಳನ್ನು ಆಡಿದ್ದರಂತೆ. ನಿಖಿಲ್ ಅವರ ಆವೇಶದ ಮಾತುಗಳು ಕಿವಿಗೆ ಬೀಳುತ್ತಿದ್ದಂತೆ ಕೆರಳಿರುವ ಬಾಲಕೃಷ್ಣ ಇಂತಹ ಮಾತುಗಳಿಂದ ತಮಗೆ ಹಿನ್ನಡೆಯಾಗಬಹುದು ಎಂದು ಯೋಚಿಸಿ ನಿಖಿಲ್ ಕುಮಾರ್ ಮೇಲೆ ನೇರವಾಗಿ ತಾವೂ ಕೂಡ ನ್ಯೂಕ್ಲಿಯರ್ ಬಾಂಬೊಂದನ್ನು ಸ್ಪೋಟಿಸಿದ್ದಾರೆ.

 

 

ನಿಖಿಲ್ ಕುಮಾರ್ ವಿಚಾರವಾಗಿ ಪ್ರಚಾರದ ವೇಳೆ ಅಷ್ಟೇ ಉದ್ರೇಕದಿಂದ ಪ್ರತಿಕ್ರಿಯೆ ನೀಡಿರುವ ಹೆಚ್.ಸಿ ಬಾಲಕೃಷ್ಣ”ನಿಖಿಲ್ ಕುಮಾರ್ ಅವರಪ್ಪನ ಪಕ್ಷದ ಪರವಾಗಿ ಪ್ರಚಾರ ಮಾಡಿಕೊಂಡು ಹೋಗಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ ಅದನ್ನು ಬಿಟ್ಟು ಸುಖಾಸುಮ್ಮನೆ ನಮ್ಮ ಮೇಲೆ ಇಲ್ಲ ಸಲ್ಲದ ತುಚ್ಛ ಮಾತುಗಳನ್ನು ಆಡಿದರೆ ನಮ್ಮ ಬಳಿಯೂ ನಿಮ್ಮ ಘನಕಾರ್ಯಗಳ ಕ್ಯಾಸೆಟ್ ಇವೆ ಅದನ್ನು ಬಹಿರಂಗಗೊಳಿಸಬೇಕಾಗುತ್ತದೆ” ಎಂದು ತುಂಬಾ ಸೀರಿಯಸ್ ಆಗಿಯೇ ನಿಖಿಲ್ ಕುಮಾರಸ್ವಾಮಿಗೆ ವಾರ್ನಿಗ್ ರವಾನಿಸಿ ಮಾತು ಮುಂದುವರೆಸಿದ ಬಾಲು “ರಾಜಕೀಯದಲ್ಲಿ ಅವರಪ್ಪ ಮತ್ತು ನಾವು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತೇವೆ..ಅದು ಮಾಮೂಲಿ ಆದರೆ ನೆನ್ನೆ ಮೊನ್ನೆ ಹುಟ್ಟಿದ ಕೂಸುಗಳೆಲ್ಲಾ ನಮ್ಮ ವಿರುದ್ಧ ಮಾತನಾಡಿದರೆ ಬಿಸಿಮುಟ್ಟಿಸಲೇಬೇಕಾಗುತ್ತದೆ. ನಮ್ಮ ಬಳಿ ನಿಮ್ಮ ಸಿಡಿಗಳು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ” ಎಂದು ನಿಖಿಲ್ ವಿರುದ್ಧ ತಮ್ಮ ಪ್ರಕೋಪವನ್ನು ಹೊರಹಾಕಿದರು.

 

 

ಬಾಲಕೃನ ಅವರ ಸಿಡಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್ ಕುಮಾರ್ “ಅವರಿಗೆ ತಾಕತ್‌ ಇದ್ರೆ ಕ್ಯಾಸೆಟ್‌ ರಿಲೀಸ್ ಮಾಡಕ್ಕೆ ಹೇಳಿ. ಅವರ ಯೋಗ್ಯತೆ ಏನು ಅಂತ ಕರ್ನಾಟಕದ ಆರುವರೆ ಕೋಟಿ ಜನತೆಗೆ ಗೊತ್ತು, ಅವರು ಹೇಗೆ ನಮ್ಮ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಅಂತ ಗೊತ್ತಿಲ್ವ? ಬರೆದು ಇಟ್ಟುಕೊಳ್ಳಿ ..ಮಾಗಡಿ ಬಾಲಕೃಷ್ಣ ಈ ಚುನಾವಣೆ ನಂತರ ರಾಜಕೀಯ ನಿವೃತ್ತಿ ಹೊಂದಬೇಕು. ನೋಡೋಣ ಅದು ಹೆಂಗ್ ರಾಜಕೀಯ ಮಾಡುತ್ತಾರೆ” ಎಂದು ತಿರುಗೇಟು ನೀಡುವ ಮೂಲಕ ಭರ್ಜರಿ ಸವಾಲು ಹಾಕಿದ್ದಾರೆ.

 

 

ನಿಖಿಲ್ ಕುಮಾರ್ ಅವರು ಈ ರೀತಿ ಪ್ರತಿಕ್ರಿಯಿಸುತ್ತಿದ್ದಂತೆ ಯೂ ಟರ್ನ್ ಹೊಡೆದಿರುವ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ “ಕುಮಾರಸ್ವಾಮಿಯವರ ಮಗನ ಬಗ್ಗೆ ನಾನು ಆ ರೀತಿ ಮಾತನಾಡಿಲ್ಲ., ನನ್ನ ಮಾತನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡಿವೆ ರಾಜಕೀಯದಲ್ಲಿ ನಿಖಿಲ್ ಕುಮಾರಸ್ವಾಮಿ ಇನ್ನೂ ಚಿಕ್ಕವರು. ಅವರು ಬೆನ್ನಿಗೆ ಚೂರಿ ಹಾಕಿ ಹೋದವರು ಎಂದೆಲ್ಲಾ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಅವರು ನನ್ನ ವಿರುದ್ಧ ಇಲ್ಲಸಲ್ಲದ ಮಾತುಗಳನ್ನು ಆಡಿದರೆ ಅದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ” ಎಂದು ಎಂದಿದ್ದಾರೆ ಸಂಪೂರ್ಣವಾಗಿ ಯೂಟರ್ನ್ ಹೊಡೆದಿದ್ದಾರೆ.

 

 

ಇನ್ನೂ ಈ ಸಿಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೇಡಿ ಕುಮಾರಸ್ವಾಮಿ “ಬಾಲಕೃಷ್ಣ ಅದೆಂತಾ ಬಾಂಬ್ ಸಿಡಿಸುತ್ತಾರೋ ಸಿಡಿಸಲಿ, ನಾನು ನೋಡ್ತೀನಿ. ಅವರು ಹೇಳಿದಂತೆ ನಿಖಿಲ್ ಕುರಿತಾದ ಯಾವುದಾದರೂ ಸಿ.ಡಿ.ಗಳು ಇದ್ದರೇ ಬಿಡುಗಡೆ ಮಾಡಲಿ” ಎಂದು ಬಾಲಕೃಷ್ಣರಿಗೆ ಬಹಿರಂಗ ಸವಾಲು ಹಾಕಿದ್ದಾರೆ.”

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top