fbpx
ರಾಜಕೀಯ

ಚುನಾವಣೆಯಲ್ಲಿ ಸ್ಪರ್ಧಿಸಿರುವ ಹುಚ್ಚಾ ವೆಂಕಟ್’ಗೆ ವಿಚಿತ್ರವಾದ ಗುರುತು ನೀಡಿದ ಚುನಾವಣಾ ಆಯೋಗ! ವೆಂಕಟ್ ಗುರುತು ಏನು ಗೊತ್ತಾ?

ತನ್ನ ತಿಕ್ಕಲುತನಗಳಿಂದಲೇ ಹೆಸರವಾಸಿಯಾಗಿ ಕಂಡ ಕಂಡವರಿಗೆಲ್ಲಾ ಅವಾಜು ಹಾಕಿ, ಒಂದಿಬ್ಬರಿಗೆ ಗೂಸಾ ಕೂಡ ಕೊಟ್ಟು ಯದ್ವಾ ತದ್ವಾ ಫೇಮಸ್ ಆದವನು ಹುಚ್ಚಾ ವೆಂಕಟ್. ಇಷ್ಟುದಿನ ತನ್ನ ವೈವಿಧ್ಯಮಯ ತಿಕ್ಕಲಾಟಗಳಿಂದಲೇ ವಿವಾದಗಳನ್ನು ಹುಟ್ಟುಹಾಕಿ ರಂಕಲು ಎಬ್ಬಿಸಿಕೊಂಡು ಸುದ್ದಿಯಾಗುತ್ತಿದ್ದ ಕಾಂಟ್ರಾವರ್ಷಿಯಲ್ ಯಕ್ಕಡ ಸ್ಟಾರ್ ಹುಚ್ಚಾ ವೆಂಕಟ್ ಇದೀಗ ರಾಜಕೀಯಕ್ಕೆ ಗ್ರಾಂಡ್ ಎಂಟ್ರಿ ಕೊಡುವ ಮೂಲಕ ಅಲ್ಲೋ ತನ್ನ ಹುಚ್ಚಾಟಗಳನ್ನು ಮುಂದುವರಿಸುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದ್ದಾರೆ..

 

 

ಕಳೆದ ಕೆಲವು ದಿನಗಳ ಹಿಂದೆ ಶಾಸಕ ಮುನಿರತ್ನ ವಿರುದ್ಧ ಸಿಡಿದೆದ್ದು ಅವರು ವಿತರಿಸುತ್ತಿದ್ದಾರೆ ಎಂದು ಹೇಳಲಾಗಿದ್ದ ಕುಕ್ಕರ್ ಹಿಡಿದುಕೊಂಡು ಟಿವಿ ಚಾನೆಲ್ ಗಳಲ್ಲಿ ಕೂತು ರಂಪಾಟ ಮಾಡಿದ್ದ ಹುಚ್ಚಾ ವೆಂಕಟ್ ಮುನಿರತ್ನ ಅವರ ವಿರುದ್ಧವೇ ಚುನಾವಣೆಗೆ ನಿಂತಿರುವುದು ವಿಶೇಷ. ರಾಜರಾಜೇಶ್ವರಿ ನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಹಸಕ್ಕೆ ಕೈ ಹಾಕಿರುವ ಫೈರಿಂಗ್ ಸ್ಟಾರ್ ಈಗಾಗಲೇ ನಾಮಪತ್ರವನ್ನು ಕೂಡ ಯಶಸ್ವಿಯಾಗಿ ಸಲ್ಲಿಕೆ ಮಾಡಿದ್ದಾರೆ… ಕ್ಷೇತ್ರದ ಹಾಲಿ ಶಾಸಕ ಮುನಿರತ್ನ, ಬಿಜೆಪಿಯ ಮುನಿರಾಜು ಹಾಗೂ ಜೆಡಿಎಸ್‌ನ ಜಿ.ಎಚ್ ರಾಮಚಂದ್ರ ಅವರ ಎದುರು ಪ್ರತಿಸ್ಪರ್ಧಿಯಾಗಿ ವೆಂಕಟ್‌ ಕಣಕ್ಕಿಳಿದಿದ್ದು, ಎಲ್‌.ವೆಂಕಟರಾಮ್ ಎಂಬ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿ ತನಗೆ ವೋಟ್ ಮಾಡುವಂತೆ ಜನರಲ್ಲಿ ಆಜ್ಞೆ ಮಾಡಿದ್ದಾರೆ.

 

 

ಮಾತೆತ್ತಿದರೆ ಎಕ್ಕಡ ಎಕ್ಕಡ ಅಂತ ಎಗರಿ ಬೀಳುವ ಹುಚ್ಚ ವೆಂಕಟ್ ಅವರು ತಮಗೆ ಎಕ್ಕಡದ ಚಿಹ್ನೆಯನ್ನೇ ನೀಡಬೇಕು ಎಂದು ಕೇಳಿಕೊಂಡಿದ್ದರಂತೆ ಅದರಂತೆ ಹುಚ್ಚ ವೆಂಕಟನ ಈ ಮಹದಾಸೆಯನ್ನು ಚುನಾವಣಾ ಆಯೋಗ ಪುರಸ್ಕರಿಸಿದ್ದು ಆತನಿಗೆ ಯಕ್ಕಡದ ಚಿಹ್ನೆಯನ್ನೇ ನೀಡಿದೆ.. ಈ ಮೂಲಕ ಹೆಚ್ಚ ವೆಂಕಟ್ ಅವರಿಗೆ ತಮ್ಮ ಅಚ್ಚುಮೆಚ್ಚಿನ ಯಕ್ಕಡ ಚುನಾವಣೆಯಲ್ಲೂ ಸಿಕ್ಕಂತಾಗಿದೆ.

ಅದೇನೇ ಇರಲಿ ಇಷ್ಟು ದಿನ ತನ್ನ ಹುಚ್ಚಾಟಗಳಿಂದಲೇ ವಿವಾದವನ್ನು ಮೈಮೇಲೆ ಎಳೆದುಕೊಂಡು ಹೆಸರನ್ನು ಕೆಡಸಿಕೊಂಡಿದ್ದ ಹುಚ್ಚ ವೆಂಕಟ್ ಇನ್ನಾದರೂ ಒಳ್ಳೆ ಬುದ್ದಿ ಕಲಿತು ರಾಜಕೀಯದಲ್ಲಿ ಯಶಸ್ಸು ಗಳಿಸುತ್ತಾರೋ ಅಥವಾ ತಾವು ಮಾಡಿದ್ದ ಅತ್ಯದ್ಭುತ ಸಿನಿಮಾಗಳನ್ನ ನೋಡಲು ಜನರು ಬರದೇ ಇದ್ದಾಗ ಜನರಿಗೆ ಬಾಯಿಗೆ ಬಂದಹಾಗೆ ಅವಾಜ್ ಹಾಕಿದ್ದ ಹಾಗೆ ಚುನಾವಣೆಯಲ್ಲಿ ಸೋತಾಗಲು ಕೂಡ ಮತದಾರನ್ನು ಬೈಯ್ಯುತ್ತಾರೆಯೇ? ಎಂಬ ಕುತೂಹಲ ಮನೆಮಾಡಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top