ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರ ಕಳೆಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖಸ್ಥೆ ರಮ್ಯಾ ಈಗ ಟ್ವಿಟ್ಟರ್ ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಸ್ಯಹಾರಿ ಅಲ್ವಾ ಎಂಬ ಪ್ರಶ್ನೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
ಕೊಪ್ಪಳದ ಗವಿಸಿದ್ದೇಶ್ವರ ಮಠದೊಳಗೆ ಪ್ರವೇಶಿಸಲು ಬಾಗಿಲು ಚಿಕ್ಕದಿರುವುದರಿಂದ ಅಮಿತ್ ಶಾ ಅವರಿಗೆ ಗರ್ಭಗುಡಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಅಂತಾ ಹೇಳಿಲಾಗಿತ್ತು. ಈ ಹಿಂದೆ ಇದೇ ಮಠಕ್ಕೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗರ್ಭಗುಡಿ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದರು.
ಈ ಮೊದಲು ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದಾಗ ಅದೇ ದೇವಸ್ಥಾನಕ್ಕೆ ಭೇಟಿ ಮಾಡಿದ್ದರು, ದೇವಾಲಯದೊಳಗೆ ಪ್ರವೇಶ ಮಾಡಿ ದೇವರ ದರ್ಶನ ಪಡೆದಿದ್ದರು, ಆ ಸಮಯದಲ್ಲಿ ದೇವಾಲಯಕ್ಕೆ ಹೋಗಿದ್ದ ದೃಶ್ಯವನ್ನು ಕೂಡ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ ರಮ್ಯಾ . ಆದರೆ ಶಾ ಮಾತ್ರ ಯಾಕೆ ಹೋಗಲಿಲ್ಲ. ಹಾಗಿದ್ರೆ ಅಮಿತ್ ಷಾ ಸಸ್ಯಹಾರಿ ಅಲ್ವಾ ಎಂದು ಪೋಸ್ಟ್ ಮಾಡಿದ್ದಾರೆ. ಪದೇ ಪದೇ ಬಿಜೆಪಿ ವಿರುದ್ಧ ಟ್ವಿಟ್ಟರ್ ವಾರ್ ಮಾಡುವ ರಮ್ಯಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
Is he not vegetarian? pic.twitter.com/SVTHS3334d
— Divya Spandana/Ramya (@divyaspandana) April 28, 2018
ಕಳೆದ ತಿಂಗಳು ಮಾಂಸ ಸೇವಿಸಿ ದೇವಾಲಯಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರಮ್ಯಾ ಈ ಟಾಂಗ ನೀಡಿದ್ದಾರೆ.
Here’s @RahulGandhi at the main temple at the Gavi Siddeshwara Mutt, 10th February 2018 pic.twitter.com/1ijFz81VzP
— Divya Spandana/Ramya (@divyaspandana) April 28, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
