ವಿಶೇಷ

ಗಲ್ಲು ಶಿಕ್ಷೆಯನ್ನು ನೀಡಿದ ನಂತರ ನ್ಯಾಯಾಧೀಶರು ತಮ್ಮ ಪೆನ್ ನ ಮೂತಿಯನ್ನು ಮುರಿಯುವದೇಕೆ ಗೊತ್ತಾ?

ಮರಣದಂಡನೆ ವಿಧಿಸೋ ನ್ಯಾಯಾಧೀಶರು ಪೆನ್ನಿನ ನಿಬ್ ಒಡೆಯೋದ್ಯಾಕೆ?

 

 

 

ಇಂಡಿಯಾದಲ್ಲಿ ಮರಣದಂಡನೆ ಶಿಕ್ಷೆಯ ವಿರುದ್ಧದ ಚರ್ಚೆ ಸದಾ ಜಾರಿಯಲ್ಲಿರುತ್ತದೆ. ಜಾಗತಿಕ ಮಟ್ಟದಲ್ಲಿಯೂ ಇದು ಚರ್ಚೆಯ ವಸ್ತು. ಇದು ಎಲ್ಲ ಕಾನೂನು, ಆಕ್ರೋಶಗಳನ್ನೂ ಮೀರಿದ ಭಾವುಕ ವಿಚಾರ. ಅದೇನೇ ತಪ್ಪು ಮಾಡಿದ್ದರೂ ಓರ್ವ ಮನುಷ್ಯನ ಉಸಿರನ್ನೇ ನಿಲ್ಲಿಸಿ ಬಿಡೋ ಮರಣದಂಡನೆ ಇದಮಿತಂ ಎಂಬಂಥಾ ತೀರ್ಮಾನಕ್ಕೆ ಬರಲಾಗದ ಸಂಕೀರ್ಣ ವಿಚಾರ. ಆದರೆ ಇಂಥಾ ತೀರ್ಪಿನ ಸಂದರ್ಭದಲ್ಲಿ ನ್ಯಾಯಾಧೀಶರು ಅನುಸರಿಸೋ ಪದ್ಧತಿಯೊಂದರ ಬಗೆಗಿನ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ…

 

ಮರಣ ದಂಡನೆ ಶಿಕ್ಷೆ ಪ್ರಕಟಿಸೋ ತೀರ್ಪು ಬರೆಯೋ ನ್ಯಾಯಾಧೀಶರು ತಕ್ಷಣವೇ ತಮ್ಮ ಪೆನ್ನಿನ ನಿಬ್ ಅನ್ನು ಮುರಿದು ಹಾಕುತ್ತಾರೆ. ಯಾಕೆ ಹೀಗೆ ಮಾಡಲಾಗುತ್ತೆ? ಅದೊಂದು ಕಾನೂನಾ? ಪಾರಂಪರಿಕವಾಗಿ ನಡೆದು ಬಂದಿರೋ ವಿಧಾನವಾ? ಇಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಒಂದಷ್ಟು ಕುತೂಹಲಕಾರಿ ವಿಚಾರಗಳು ಹೊರ ಬೀಳುತ್ತವೆ.
ಈ ಪೆನ್ನಿನ ನಿಬ್ ಮುರಿಯೋದು ಒಂದು ಸಿಂಬಾಲಿಕ್ ಕಲಂ. ಎದುರಿಗೆ ನಿಂತ ವ್ಯಕ್ತಿ ತನ್ನ ಅಮೋಘವಾದ ಬದುಕನ್ನು ಮತ್ತೆ ಬದುಕಲು ಸಾಧ್ಯವೇ ಇಲ್ಲ ಎಂಬ ಸಂದೇಶವನ್ನು ಈ ಪ್ರಕ್ರಿಯೆ ರವಾನಿಸುತ್ತೆ. ಯಾವುದೇ ತಪ್ಪಿಗೆ ಮರಣ ದಂಡನೆ ಶಿಕ್ಷೆ ವಿಧಿಸೋದೆಂದರೆ ಅದು ಎಲ್ಲದರ ಅಂತಿಮ ಘಟ್ಟ ಮರಣದಂಡನೆಯ ತೀರ್ಪು ಬರೆದಾದಾಕ್ಷಣ ನ್ಯಾಯಾಧೀಶರು ಪೆನ್ನಿನ ನಿಬ್ ಮುರಿಯೋ ಮೂಲಕ ಈ ವಿಚಾರದಲ್ಲಿ ಮತ್ತೆ ಆಲೋಚಿಸೋ ಅವಕಾಶವೇ ಇಲ್ಲ ಎಂಬುದನ್ನೂ ಧ್ವನಿಸುತ್ತಾರೆ.

 

 


ಇದರ ಹಿಂದಿರೋ ಮತ್ತೊಂದು ವಿಚಾರ ಕಾನೂನು ಕಟ್ಟಳೆಗಳನ್ನು ಮೀರಿದ ಭಾವುಕತೆಯದ್ದು. ಸಾಮಾನ್ಯವಾಗಿ ಈ ಮರಣ ದಂಡನೆ ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಾಧೀಶರು ವರ್ಣಿಸಲಾಗದ ಒತ್ತಡ ಹೊಂದಿರುತ್ತಾರೆ. ಒಬ್ಬ ಮನುಷ್ಯನ ಜೀವವನ್ನು ಉಳಿಸುವ, ಇಲ್ಲವಾಗಿಸುವ ತೀರ್ಮಾನವನ್ನು ಅವರು ತೆಗೆದುಕೊಳ್ಳ ಬೇಕಾಗಿರುತ್ತೆ. ಅದೆಂಥಾ ರಾಕ್ಷಸೀ ಕೃತ್ಯ ಮಾಡಿದ ಮನುಷ್ಯನಾದರೂ ಸಾಕಷ್ಟು ಶಿಕ್ಷೆ ಅನುಭವಿಸಿದ ಮೇಲಷ್ಟೇ ಮರಣ ದಂಡನೆ ಶಿಕ್ಷೆಯ ಹಂತ ತಲುಪುತ್ತಾನೆ. ತೀರಾ ಸಾವಿನ ಸಮೀಪ ಬಂದು ನಿಂತ ಮನುಷ್ಯನೊಳಗೆ ಬದುಕಬೇಕೆಂಬ ತೀವ್ರ ವಾಂಛೆ ಅರಳಿಕೊಳ್ಳೋದು ಸಹಜ.

 

 

 

ಅಂಥಾ ಸ್ಥಿತಿಯಲ್ಲಿ ಕಣ್ಣ ತುಂಬಾ ದೈನ್ಯ ತುಂಬಿಕೊಂಡು ನಿಂತ ಒಂದು ಜೀವವನ್ನು ಇಲ್ಲವಾಗಿಸೋ ತೀರ್ಪು ಕೊಡಬೇಕೆಂದರೆ ಆ ನ್ಯಾಯಾಧೀಶರೊಳಗೆ ಎಂಥಾ ಒತ್ತಡ ಕೆಲಸ ಮಾಡಬಹುದೆಂಬುದನ್ನು ಯಾರಾದರೂ ಊಹಿಸಬಹುದು.
ಇಂಥಾ ಒತ್ತಡವನ್ನು ತೀರ್ಪು ಬರೆದ ತಕ್ಷಣ ಪೆನ್ನಿನ ನಿಬ್ ಮುರಿಯೋ ಮೂಲಕ ಪರಿಹರಿಸಿಕೊಂಡು ಕೊಂಚ ಸಮಚಿತ್ತಕ್ಕೆ ಬರೋ ಉದ್ದೇಶದಿಂದಲೂ ನ್ಯಾಯಾಧೀಶರು ಪೆನ್ನಿನ ನಿಬ್ ಮುರಿಯೋ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರಂತೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top