ಜೀವನ ಕ್ರಮ

ಈ ಬದುಕಿನ ಮೇಲೆ ವಿರಕ್ತಿ ಉಂಟಾಗಿ ಬದುಕೇ ಬೇಡ ಅನ್ನಿಸುತ್ತಿದ್ರೆ ಈ 9 ವಿಷಯಗಳನ್ನ ತಲೆಗೆ ಹಾಕೊಳ್ಳಿ ಸಾಕು ಸರಿ ಹೋಗುತ್ತೆ

ಜೀವನದಲ್ಲಿ ಪ್ರತಿಯೊಬ್ಬರು ನಿರಾಶರಾಗುತ್ತಾರೆ ,ಆ ಸಮಯದಲ್ಲಿ ಇಡೀ ಬದುಕಿನ ಮೇಲೆ ವಿರಕ್ತಿ ಉಂಟಾಗಿ ಬದುಕೇ ಬೇಡ ಎಂಬ ಮಟ್ಟಿಗೆ ಹೋಗುತ್ತಾರೆ .
ಅಂಥವರು ಅಂತ ಯೋಚನೆ ಯಿಂದ ಹೊರಬರಲು ಕೆಲ ಕಿವಿ ಮಾತನ್ನು ಹೇಳ್ತಿರಿ ಬನ್ನಿ..

1.ಕೆಲ ಕಾಲ ಜಾಗ ಬದಲಾಯಿಸಿ:

 

 

ಹೊಸ ಜಾಗ ನಿಮ್ಮ ಎಲ್ಲ ಹಳೆ ನೆನಪು ಮತ್ತು ಯೋಚನೆ ಗಳಿಂದ ನಿಮ್ಮನ್ನು ದೂರ ಮಾಡಿ ,ನಿಮಗೆ ಹೊಸ ಉತ್ಸಾಹ ಕೊಡುವುದರ ಜೊತೆ ನೀವು ಬದುಕನ್ನು ನೋಡುವ ದೃಷ್ಠಿ ಕೋನ ಬದಲಾಗುತ್ತದೆ.

 

2 ಅದಷ್ಟು ವ್ಯಾಯಾಮ ಮಾಡುವುದನ್ನು ರೂಢಿಮಾಡಿಕೊಳ್ಳಿ:

 

 

ಮನುಷ್ಯನ ದೇಹದ ಆರೋಗ್ಯ ಅವನ ಯೋಚನೆಗಳ ನೇರ ಪರಿಣಾಮ ಬೀರುತ್ತದೆ , ವ್ಯಾಯಾಮ ನಿಮ್ಮನ್ನು ಅದಷ್ಟು ನಕಾರಾತ್ಮಕ ಯೋಚನೆಗಳಿಂದ ಹೊರಇಡಲು ಸಹಾಯಮಾಡುತ್ತದೆ.

 

3 ಹೊಸ ಜನರೊಂದಿಗೆ ಪರಿಚಯ ಮಾಡಿಕೊಳ್ಳಿ:

 

 

ಹೊಸ ಜನರ ಜೊತೆ ಬೆರೆಯುವುದರಿಂದ ನಿಮಗೆ ಒಳ್ಳೆ ಅನುಭವದ ಜೊತೆ ,ನಿಮ್ಮ ಕೆಟ್ಟ ನಿರಾಶೆಭಾವ ಯೋಚನೆಯಿಂದ ಹೊರಬರಲು ಸಹಾಯವಾಗುತ್ತದೆ.

 

4 ಸ್ವಲ್ಪ ನಿಮಗೆ ನೀವು ಸಮಯ ಕೊಟ್ಟುಕೊಳ್ಳಿ:

 

 

ನಾವುಗಳು ಈಗಿನ ಜೀವನ ಶೈಲಿಯಲ್ಲಿ ಕೆಲಸಕ್ಕೆ ಕೊಡುವ ಪ್ರಾಮುಖ್ಯತೆ ನಮಗೆ ನಾವು ಕೊಡುವುದಿಲ್ಲ ,ಅದಷ್ಟು ನಮಗೆ ನಾವು ಸ್ವಲ್ಪ ಸಮಯ ಕೊಟ್ಟುಕೊಳ್ಳುವುದಿಂದ ಮನಸ್ಸಿಗೆ ಸಂತೋಷ ದೊರಕುವ ಜೊತೆ ಕೆಟ್ಟ ಯೋಚನೆಗಳು ನಮ್ಮ ಬಳಿಯೂ ಸುಳಿಯುದಿಲ್ಲ.

 

5 ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ:

 

 

ನಾವು ಹೇಗೆ ಕಾಣುತ್ತೀರೋ ಅದು ನಮ್ಮ ಯೋಚನೆ ಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ , ನಿಮ್ಮನ್ನು ನೀವು ಬದಲಾಸಿಕೊಳ್ಳಿ ನೋಡುವುದಕ್ಕಾಗಲಿ ಅಥವಾ ನೀವು ಕಾಣುವ ರೀತಿ .
ನಿಮ್ಮ ಬದಲಾವಣೆ ನಿಮ್ಮಲಿ ಕಾನ್ಫಿಡೆನ್ಸ್ ಕೊಡುವುದರ ಜೊತೆ ಸಂತೋಷದಿಂದ ನಿಮ್ಮ ಜೀವನ ನಡೆಸಲು ಸಹಾಯ ಮಾಡುತ್ತದೆ.

 

6 ಹೊಸ ಹೊಸ ವಿಷಯ ಗಳನ್ನು ಕಲಿಯಿರಿ:

 

 

ಹೊಸ ಹೊಸ ವಿಷಯಗಳನ್ನು ಕಲಿಯುವುದರಿಂದ ,ಹೊಸ ಕಲೆ ನಿಮಲ್ಲಿ ಕರಗತವಾಗುವುದರ ಜೊತೆ ಹಳೆಯ ನಕಾರಾತ್ಮಕ ಯೋಚನೆ ದೂರಯಾಗಿ ,ಬದುಕನ್ನು ನೋಡುವ ರೀತಿ ಬದಲಾಗುತ್ತದೆ.

 

7 ಆರೋಗ್ಯಕರ ಆಹಾರ ತಿನ್ನಿ:

 

ಆರೋಗ್ಯಕರ ಆಹಾರ ನಿಮಗೆ ಒಳ್ಳೆ ಆರೋಗ್ಯ ಕೊಡುತ್ತದೆ ,ಅದು ನಿಮ್ಮ ಯೋಚನೆ ನೇರ ಪರಿಣಾಮ ಬೀರುತ್ತದೆ .

 

8 ನಿಮ್ಮನ್ನು ಭಯಪಡಿಸುವ ವಿಷಯಗಳನ್ನು ಧೈರ್ಯದಿಂದ ಹೆದರಿಸಿ:

 

 

ತುಂಬಾ ಜನರಲ್ಲಿ ಈ ಭಯವನ್ನು ನಾವು ಗಮನಿಸಿರುತ್ತಿರಿ ,ಅಂತ ಭಯ ಪಡಿಸುವ ವಿಷಯಗಳನ್ನು ಆದಷ್ಟು ಹೆದರಿಸಿ,ಅದು ನಿಮ್ಮನ್ನು ಆ ಭಯದಿಂದ ಹೊರತರುವುದರ ಜೊತೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ .

 

9 ಅದಷ್ಟು ಜನರನ್ನು ಕ್ಷಮಿಸುವುದನ್ನು ಕಲಿಯಿರಿ :

 

 

ತುಂಬಾ ಜನರು ನಿಮಗೆ ನೋವನ್ನು ಉಂಟುಮಾಡುತ್ತಾರೆ ಅದಕ್ಕೆ ಅವರ ಮೇಲೆ ಕೋಪ ಮಾಡಿಕೊಂಡು ದ್ವೇಷ ಮಾಡುವುದರಿಂದ ಸಂಬಂಧ ಹಾಳಾಗುವುದರ ಜೊತೆ ನಿಮ್ಮ ಮನಸಿನ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ,ಅದರಿಂದ ಜನರನ್ನು ಅದಷ್ಟು ಕ್ಷಮಿಸುವುದನ್ನು ಕಲಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top