fbpx
ರಾಜಕೀಯ

ಚುನಾವಣಾ ಕಣದಲ್ಲಿ ಅತೀ ಹಿರಿಯ-ಕಿರಿಯ ಅಭ್ಯರ್ಥಿಗಳು ಇವರೇ

ಇನ್ನೇನು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ ಮೇ ಹನ್ನೆರಡನೇ ತಾರೀಕಿನಿಂದ ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಮೇ 15ಕ್ಕೆ ಫಲಿತಾಂಶ ಹೊರಬೀಳಲಿದೆ.

 

 

ಈ ಬರಿ ಚುನಾವಣಾ ಅಖಾಡದಲ್ಲಿ ಯಾರು ಹಿರಿಯ ಹಾಗು ಕಿರಿಯ ಅಭ್ಯರ್ಥಿ ಎಂಬ ಕುತೂಹಲ ನಿಮ್ಮಲ್ಲಿದೆಯೇ ಹಾಗಾದರೆ ಮುಂದೆ ಓದಿ. ಹಿರಿಯ ಅಭ್ಯರ್ಥಿ ಎಂದರೆ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಶ್ಯಾಮನೂರು ಶಿವಶಂಕರಪ್ಪ, ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿ ಎಂದರೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಂಜುನಾಥ್‍ಗೌಡ. ಶಾಮನೂರು ಶಿವಶಂಕರಪ್ಪ ಅವರು ಅತ್ಯಂತ ಪ್ರಭಾವಿ ರಾಜಕಾರಣಿ 87 ವರ್ಷ ವಯೋಮಾನದವರು.

 

 

ಶಾಮನೂರು ಶಿವಶಂಕರಪ್ಪ ಅವರಿಗೆ 87 ವರ್ಷ ವಯಸ್ಸಾಗಿದೆ. ಇವರು ದಾವಣಗೆರೆಯ ಪ್ರಭಾವಿ ರಾಜಕಾರಿ ಆಗಿದ್ದಾರೆ. ಇನ್ನು ಮಂಜುನಾಥ್‍ ಗೌಡ ಅವರಿಗೆ 27 ವರ್ಷ ವಯಸ್ಸಾಗಿದೆ. ಇವರು ರಾಜ್ಯ NSUI ಘಟಕದ ಅಧ್ಯಕ್ಷರಾಗಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ 75 ವರ್ಷ ವಯಸ್ಸಾಗಿದೆ. ಯಾದಗಿರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಎ.ಬಿ.ಮಾಲಕರೆಡ್ಡಿ ಅವರಿಗೆ 75 ವರ್ಷ ವಯಸ್ಸಾಗಿದೆ. ಇನ್ನುಳಿದ ಕಿರಿಯ ಅಭ್ಯರ್ಥಿಗಳೆಂದರೆ ಗುಲ್ಬರ್ಬ ದಕ್ಷಿಣ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಹಾಗು ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಎಂದು ತಿಳಿದು ಬಂದಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top