fbpx
ರಾಜಕೀಯ

“ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ” ಹೇಳಿಕೆಗೆ ವಿಡಿಯೋ ಮೂಲಕ ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡ ಯುವತಿ!

ಧರ್ಮವನ್ನು ರಾಜಕೀಯಗೊಳಿಸಿ ಮಾಡುತ್ತಿರುವ ಧರ್ಮಾಧಾರಿತ ರಾಜಕೀಯಕ್ಕೆ ವರ್ಷಗಳೇ ಕಳೆದಿವೆ. ತಮ್ಮ ರಾಜಕೀಯ ತೆವಲುಗಳನ್ನು ತೀರಿಸಿಕೊಳ್ಳಲು ಧರ್ಮಾಧಾರಿತ ರಾಜಕೀಯದ ಹುಚ್ಚಿಗೆ ಬಿದ್ದ ಕೊಳಕು ರಾಜಕಾರಣಿಗಳು ಧರ್ಮದ ಹೆಸರಿನಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಎರಡು ಕೋಮುಗಳ ಮದ್ಯೆ ಬೆಂಕಿ ಹೊತ್ತಿಸಿ ಆ ಬೆಂಕಿಯಲ್ಲೇ ತಮ್ಮ ಬೇಳೆಯನ್ನು ನೀಟಾಗಿ ಬೇಯಿಸಿಕೊಳ್ಳುತ್ತಿದ್ದಾರೆ. ಇದೀಗ ಅಂತದ್ದೇ ಹೊಸದೊಂದು ನಿದರ್ಶನ ಬಹಿರಂಗಗೊಂಡಿದ್ದು ಬಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

 

 

ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ನಟ ಕಮ್ ರಾಜಕಾರಣಿ ಜಗ್ಗೇಶ್ ಕೂಡ ಅದ್ಯಾಕೋ ಧರ್ಮಾಧಾರಿತ ರಾಜಕೀಯದ ದಾರಿ ಹಿಡಿದಂತೆ ಕಾಣುತ್ತಿದೆ. ಏಕೆಂದರೆ ಇತ್ತೀಚಿನ ಅವರ ಚಟುಚಟಿಕೆಗಳು ಈ ಅನುಮಾನಕ್ಕೆ ಎಡೆಮಾಡುತ್ತಿವೆ. ನೆನ್ನೆ ಕೂಡ ಜಗ್ಗೇಶ್ ವಿವಾದಾತ್ಮಕ ಟ್ವೀಟ್’ವೊಂದನ್ನು ಮಾಡಿದ್ದು ಅದರಲ್ಲಿ “ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ”ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್’ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ತಮಗನಿಸಿದ ರೀತಿಯಲ್ಲಿ ಜಗ್ಗೇಶ್ ಅವರಿಗೆ ಸಂದೇಶವನ್ನು ರವಾನಿಸುತ್ತಿದ್ದಾರೆ.

 

 

ಇದೀಗ ಜಗ್ಗೇಶ್ ಅವರ ಈ ಟ್ವೀಟ್ ನೋಡಿ ಕೆರಳಿರುವ ಯುವತಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜಗ್ಗೇಶ್’ರ ಧರ್ಮಾಧಾರಿತ ರಾಜಕೀಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಯುವತಿಯ ಅಭಿಪ್ರಾಯವನ್ನು ಆಕೆಯ ಮಾತುಗಳಲ್ಲೇ ಕೇಳಲು ಈ ವಿಡಿಯೋ ನೋಡಿ.

 

ಯುವತಿ ಹೇಳಿದ್ದು ಏನು?

” ಜಗ್ಗೇಶ್ ಅವರೇ ಈಗ ತಾನೇ ನಿಮ್ಮ ಟ್ವೀಟ್ ನೋಡಿದೆ., ಅದರಲ್ಲಿ ಜಗ್ಗೇಶ್ ಗೆದ್ದರೆ ಮೋದಿ ಗೆದ್ದಂತೆ. ಜಗ್ಗೇಶ್ ಗೆದ್ದರೆ ಮೋದಿ ಅವರ ಪರಿಕಲ್ಪನೆ ಗೆದ್ದಂತೆ ಅಂತ ಬರೆದುಕೊಂಡಿದ್ದೀರಾ. ಸರಿ ಒಳ್ಳೇದು! ನಿಮ್ಮ ನಾಯಕರು ನಿಮ್ಮ ಇಷ್ಟ. ನೀವು ಗೆದ್ದರೆ ಅವರು ಗೆದ್ದಂತೆ, ಅವರು ಗೆದ್ದರೆ ನೀವು ಗೆದ್ದಂತೆ. ಆದರೆ ಜಗ್ಗೇಶ್ ಗೆದ್ದರೆ ಹಿಂದೂ ಗೆದ್ದಂತೆ ಅಂತ ಯಾಕೆ ನೀವು ಹೇಳಿರೋದು? ಕರ್ನಾಟಕದಲ್ಲಿ ಹಿಂದೂಗಳು ಮಾತ್ರನಾ ಇರೋದು? ನೀವು ಒಬ್ಬ ಕಲಾವಿದರಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಕೇವಲ ಹಿಂದುಗಳು ಮಾತ್ರ ಕಾರಣನಾ? ನಿಮ್ಮ ಚಿತ್ರಗಳನ್ನು ಹಿಂದುಗಳನ್ನು ಬಿಟ್ಟು ಕ್ರೈಸ್ತರು, ಮುಸ್ಲಿಮರು, ಜೈನರು ನೋಡಿಲ್ಲವೇ? ಹಿಂದೂಗಳು ಮಾತ್ರವೇ ನಿಮ್ಮ ಚಿತ್ರಗಳನ್ನು ನೋಡಿದ್ದರೇ ಇವತ್ತೇ ಮಾಧ್ಯಮದ ಮುಂದೆ ಬಂದು ಹೇಳಿ ನನ್ನ ಸಿನೆಮಾಗಳು, ರಿಯಾಲಿಟಿ ಶೋ…ಗಳು ಬರಿ ಹಿಂದೂ ಗಳೇ ನೋಡಿದ್ದು ಅಂತ. ಜಾತಿ, ಧರ್ಮ ಎಲ್ಲವನ್ನ ಬಿಟ್ಟು ನಿಮ್ಮ ಚಿತ್ರಗಳನ್ನು ನೋಡಿ ನಿಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ ಅನ್ನೋದನ್ನ ದಯವಿಟ್ಟು ಮರಿಬೇಡಿ. ಬೇರೆ ರಾಜಕಾರಣಿಗಳಂತೆ ನೀವು ನಾಟಕ ಆಡಬೇಡಿ.

ನೀವು ಈಗ ರಾಜಕಾರಣಿ ಆಗಿರಬಹುದು ಆದರೆ ಅದಕ್ಕೂ ಮುನ್ನ ಒಬ್ಬ ಕಲಾವಿದ ಎನ್ನುವುದನ್ನು ಮರೆಯಬೇಡಿ. ಯಾವುದೇ ಕಲಾವಿದರಿಗೂ ಜಾತಿ, ಧರ್ಮ ಅಡ್ಡ ಬರಬಾರದು. ನಿಮ್ಮಂತವರ ನಿಮ್ಮ ಬಾಯಿಂದ ಧರ್ಮದ ವಿಚಾರವಾಗಿ ಈ ರೀತಿಯ ಮಾತುಗಳು ಬರಬಾರದು. ಎಲ್ಲರನ್ನೂ ಒಂದೇ ರೀತಿ, ಮಾನವೀಯತೆ ದೃಷ್ಟಿಯಿಂದ ನೋಡುವುದನ್ನು ಕಲಿಯಿರಿ.

 

 

ನೀವು ಗೆದ್ದರೇ ಹಿಂದು ಗೆದ್ದಂತೆ ಹೇಗಾಗುತ್ತದೆ? ನಿಮ್ ಕ್ಷೇತ್ರದಲ್ಲಿ ಹಿಂದೂಗಳು ಮಾತ್ರ ಮತದಾರರು ಇದ್ದಾರಾ? ನಿಮ್ಮ ಪ್ರಕಾರ ಹಿಂದುಗಳನ್ನು ಹೊರತುಪಡಿಸಿ ಬೇರೆ ಯಾರೂ ಕರ್ನಾಟಕದಲ್ಲಿ ಬದಕುವುದಕ್ಕೆ ಅವಕಾಶ ಇಲ್ಲವೇ? ಅವರ್ಯಾರು ಬದುಕಬಾರದೇ? ದೇಶ ಉದ್ದಾರವಾಗಬೇಕೆಂದರೆ ಅಲ್ಲಿರುವ ಎಲ್ಲಾ ಜನರು ಉದ್ದಾರವಾಗಬೇಕು ಕೇವಲ ಒಂದು ಧರ್ಮ ಉದ್ಧಾರವಾದರೆ ಇಡೀ ದೇಶ ಉದ್ದಾರವಾಗುವುದ್ದಲ್ಲ.

ನಮ್ಮ ದೇಶ ಒಂದು ಒಕ್ಕೂಟ ರಾಷ್ಟ್ರ. ಎಲ್ಲ ಜಾತಿ, ಎಲ್ಲಾ ಧರ್ಮದ ಜನರಿಗೂ ಇಲ್ಲಿ ಬದುಕುವ ಸಮಾನ ಅವಕಾಶವಿದೆ. ದಯಮಾಡಿ ಈ ವಿಷಯವನ್ನು ಅರ್ಥ ಮಾಡಿಕೊಂಡು ಧರ್ಮ ರಾಜಕೀಯವನ್ನು ನಿಲ್ಲಿಸಿ, ಕಲಾವಿದರಾಗಿ ಎಲ್ಲಿದ್ದೀರಾ? ಎಂಬುದನ್ನು ದಯವಿಟ್ಟು ನೆನಪಿಸಿಕೊಳ್ಳಿ. ನಿಮ್ಮ ಹೆಸರನ್ನು ನೀವೇ ಕೆಡಿಸಿಕೊಳ್ಳಬೇಡಿ. ” ಎಂಬುದು ಆಕೆಯ ವಿಡಿಯೋದಲ್ಲಿ ಹೇಳಿರುವ ಮಾತುಗಳ ಸಂಕ್ಷಿಪ್ತ ಸಾರಾಂಶ,

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top