fbpx
ರಾಜಕೀಯ

ಪ್ರಧಾನಿ ವಿರುದ್ಧ ಮುಂದುವರೆದ ರಮ್ಯಾ ಕುಚೋದ್ಯ: ಈ ಭಾರಿ ನೇರವಾಗಿ ಮೋದಿ ಜಾಕೆಟ್ಟಿಗೆ ಕೈ ಹಾಕಿ ಎಳೆದ ಮಾಜಿ ಸಂಸದೆ.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾಗೆ ಪ್ರಧಾನಿ ಮೋದಿಯನ್ನು ಅಣಕಿಸದೆ ಇದ್ದರೇ ನಿದ್ದೆಯೇ ಬರುವುದಿಲ್ಲವೇ? ಹೀಗೊಂದು ಪ್ರಶ್ನೆ ಒಂದು ಕಾಲದಲ್ಲಿ ಅವರನ್ನು ಆರಾಧಿಸುತ್ತಿದ್ದ ಅಭಿಮಾನಿಗಳನ್ನು ಕಾಡುತ್ತಿದೆ ಎಂಬುದು ಸುಳ್ಳಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಷ್ಟೂ ದಿನ ಬರೀ ಜಗಳ ಮತ್ತು ಕಿತಾಪತಿಗಳಿಗೆ ಫೇಮಸ್ ಆಗಿದ್ದ ರಮ್ಯಾ ತಮ್ಮ ಚಾಳಿಯನ್ನು ರಾಜಕೀಯದಲ್ಲೂ ಅಚ್ಚುಕಟ್ಟಾಗಿ ಮುಂದುವರಿಸುತ್ತಿದ್ದಾರೆ. ಪದೇ ಪದೇ ಪ್ರಧಾನಿ ಮೋದಿಯವರನ್ನು ಕೆಣಕುವಂತ ಮತ್ತು ಅವರ ಮೇಲಿನ ಅವಹೇಳನಕಾರಿ ಟ್ವೀಟ್ ಮಾಡುವುದೇ ತನ್ನ ಕುಲಕಸುಬನ್ನಾಗಿಸಿಕೊಂಡಿರುವ ರಮ್ಯಾ ಇದೀಗ ಮತ್ತೊಮ್ಮೆ ಮೋದಿಯನ್ನು ನೇರಾ ನೇರಾವಾಗಿ ಟೀಕಿಸಿ ಅವರ ಜಾಕೆಟ್ಟಿಗೆ ನೇರವಾಗಿ ಕೈಹಾಕಿ ಎಳೆದಿದ್ದಾರೆ.

 

 

ಎಂದಿನಂತೆ ತಮ್ಮ ಟ್ವಿಟರ್ ಅಕೌಂಟಿನಲ್ಲೇ ಮೋದಿಯನ್ನು ಕೆಣಕಿರುವ ರಮ್ಯಾ “ನರೇಂದ್ರ ಮೋದಿ ಜೀ…ನೀವು ತುಂಬಾ ಫ್ಯಾನ್ಸಿ, ನೀವು ಧರಿಸಿರುವ ಲೋರೋ ಪಿಯಾನಾ ಜಾಕೆಟ್ ಬಹಳ ಚನ್ನಾಗಿದೆ, ಅದರ ಬೆಲೆ ಎಷ್ಟುಗೊತ್ತಾ? ಸುಮಾರು 17ಸಾವಿರ ಯುರೋ…. ನಿಮಗೆ ಇದು ತುಂಬಾ ಅಗ್ಗದ ಬೆಲೆಯೇ ಬಿಡಿ. ಅದು ಸರಿ ಅದನ್ನು ಕೊಂಡುಕೊಳ್ಳಲು ಯಾರ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದೀರೀ” ಎಂದು ಪ್ರಶ್ನಿಸಿ ರಮ್ಯಾ ಪ್ರಧಾನಿ ಮೋದಿಯನ್ನು ಗೇಲಿ ಮಾಡಿದ್ದಾರೆ.

 

 

ರಮ್ಯಾ ಅವರ ಈ ಟ್ವೀಟ್ ನರೇಂದ್ರ ಮೋದಿಯವರ ಅಭಿಮಾನಿಗಳ ನೆಮ್ಮದಿಗೆ ಭಂಗ ತಂದಿದ್ದು ರಮ್ಯಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅದರಂತೆ ತಾವು ಕೂಡ ರಮ್ಯಾಗಿಂತ ಏನು ಕಡಿಮೆ ಇಲ್ಲ ಎಂಬಂತೆ ರಮ್ಯಾ ವಿರುದ್ದವೂ ಮನಬಂದಂತೆ ಟೀಕಾಪ್ರಹಾರ ನಡೆಸುತ್ತಿದ್ದಾರೆ. ರಮ್ಯಾ ಮತ್ತು ಮೋದಿ ಅಭಿಮಾನಿಗಳ ನಡುವಿನ ವಾಕ್ಸಮರ ಇದೇ ಮೊದಲೇನಲ್ಲಾ ಅದೊಂತರ ಮೂರಕ್ಕಿಳಿಯುತ್ತಿಲ್ಲ ಆರಕ್ಕೇಳುತ್ತಲೂ ಇಲ್ಲ, ಇವರುಗಳ ಕೋಳಿ ಜಗಳ ಮುಂದಿನ ದಿನಗಳಲ್ಲಿ ಯಾವೆಲ್ಲಾ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top