fbpx
ರಾಜಕೀಯ

ದೇವೇಗೌಡ್ರು ಮನೆಗೆ ಬಂದಾಗ ಅವರ ಕಾರಿನ ಡೋರ್ ತೆಗೆಯುತ್ತೇನೆ ಎಂದ ಮೋದಿ ಅವರ ಹೇಳಿಕೆ ಒಳಾರ್ಥವೇನು

ಇನ್ನೇನು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ ಮೇ ಹನ್ನೆರಡನೇ ತಾರೀಕಿನಿಂದ ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ವಿಧಾನಸಭೆಯ ಚುನಾವಣೆ ನಡೆಯಲಿದೆ ಈ ಸಮಯದಲ್ಲಿ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ.

 

 

ಬಿಜೆಪಿ ಪ್ರಚಾರ ನಿಮಿತ್ಯ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಿಂದ ರಾಜ್ಯ ಪ್ರವಾಸ ಕೈಗೊಂಡಿದ್ದು ಇಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಎಚ್.ಡಿ. ದೇವೇಗೌಡರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ ದೇವೇಗೌಡರು ನನ್ನ ಮನೆಗೆ ಬಂದಾಗ ನಾನು ಬಾಗಿಲಿನ ಬಳಿಯೇ ಕಾದಿದ್ದು ಅವರ ಕಾರಿನ ಬಾಗಿಲನ್ನು ತೆರೆದು ಅವರನ್ನು ಬರಮಾಡಿಕೊಂಡಿದ್ದೇನೆ, ವಾಪಾಸ್ಸು ತೆರಳುವಾಗ ನಾನೇ ತೆರಳಿ ಅವರನ್ನು ಕಾರಿನಲ್ಲಿ ಕೂರಿಸಿ ವಿದಾಯ ಹೇಳಿದ್ದೇನೆ ಎಂದು ಹೇಳಿದ್ದಾರೆ.

 

 

ಎಚ್.ಡಿ. ದೇವೇಗೌಡರಿಗೆ ಅಪಮಾನ ಮಾಡಿದವರು ರಾಜ್ಯಕ್ಕೆ ಮಾರಕವಾಗಿದ್ದಾರೆ ಅಂತ ಮುಖಮಂತ್ರಿ ಸಿದ್ದರಾಮಯ್ಯ ರವರ ವಿರುದ್ದ ಪ್ರಧಾನಿ ಮೋದಿ ಅವರು ಪರೋಕ್ಷವಾಗಿ ಕುಟುಕಿದ್ದಾರೆ ಎನ್ನಲಾಗುತ್ತಿದೆ. ಉಡುಪಿಯಲ್ಲಿ ಮಾತನಾಡಿದ ಮೋದಿ ಅವರು ದೇವೇಗೌಡರನ್ನು ಅವಮಾನಿಸಿದ ಪಕ್ಷವನ್ನು ಮತ್ತೆ ಅರಿಸಬೇಡಿ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕರೆ ನೀಡಿದ್ದಾರೆ. ಎಚ್​.ಡಿ.ದೇವೇಗೌಡರನ್ನು ಮಣ್ಣಿನ ಮಗ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದ ಪುಣ್ಯಭೂಮಿಯ ಮಗ ದೇವೇಗೌಡ ಎಂದು ಹೇಳಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ ಅವರು ಹೀಗೆ ಏಕಾ ಏಕಿ ದೇವೇಗೌಡರನ್ನು ಇನ್ನಿಲ್ಲದಂತೆ ಹೊಗಳಿರುವುದು ಹಲವು ರಾಜಕೀಯ ಅನುಮಾನಗಳಿಗೆ ಎಡೆ ಮಾಡಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯ ವಾಸನೆಯನ್ನು ಮೋದಿ ಅವರ ಹೊಗಳಿಕೆಯಲ್ಲಿ ಸುಲಭದಲ್ಲಿ ಗುರುತಿಸಬಹುದು ಎಂದು ರಾಜಕೀಯ ಮಂದಿ ಮಾತನಾಡುತ್ತಿದ್ದಾರೆ. ಮೇ 15 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು ಯಾರು ಬಹುಮತ ಸಾಧಿಸಲಿದ್ದಾರೆ ಎಂದು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top