fbpx
ರಾಜಕೀಯ

ಬಿಎಸ್‌ವೈ ಪುತ್ರ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದಕ್ಕೆ ಮೋದಿ ಕೊಡದ ಸ್ಪಷ್ಟ ಸಂದೇಶ ಏನು ಗೊತ್ತಾ?

ಕೆಲವೇ ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಭರ್ಜರಿಯಾಗಿ ಸಜ್ಜಾಗಿದ್ದು ಘಟಾನುಘಟಿ ನಾಯಕರುಗಳೇ ಇದೀಗ ಜಿದ್ದಾಜಿದ್ದಿನ ಅಖಾಡಕ್ಕೆ ಇಳಿದಿದ್ದಾರೆ. ಒಂದು ಕಡೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಕಡೆಯಿಂದ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಪರಸ್ಪರ ತೀವ್ರ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ.. ಆದರೆ ನೆನ್ನೆಯ ಮೋದಿ ಭಾಷಣದಲ್ಲಿ ಅನೇಕ ವಿದ್ಯಮಾನಗಳ ಬಗ್ಗೆ ಮೋದಿ ಸೂಕ್ಷವಾಗಿ ಟೀಕಿಸಿದ್ದಾರೆ ಈ ಮೂಲಕ ಬಹುಕುತೊಹಲ ಕೆರಳಿಸಿದ್ದ ವರುಣ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೆ ಬಿಜೆಪಿ ಟಿಕೆಟ್ ನಿಷೇದಿಸಿದ್ದು ಏಕೆ ಎಂಬ ಪ್ರಶ್ನೆಗೆ ನರೇಂದ್ರ ಮೋದಿಯವರೇ ಪರೋಕ್ಷವಾಗಿ ಸ್ಪಷ್ಟ ಸಂದೇಶ ನೀಡಿದ್ದಾರೆ.

 

ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಯಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಚಾರ ಬೃಹತ್ ಸಭೆಯಲ್ಲಿ ಮಾತನಾಡಿದ ಮೋದಿ, “ಸಿದ್ದರಾಮಯ್ಯ ಅವರು ರಾಜ್ಯದಲ್ಲಿ 2+1 ಎಂಬ ಹೊಸ ರಾಜಕೀಯ ಫಾರ್ಮುಲಾವನ್ನು ಪರಿಚಯಿಸಿದ್ದಾರೆ. ಸೋಲುವ ಭೀತಿಯಿಂದಲೇ ತನ್ನ ಸ್ವಂತ ಕ್ಷೇತ್ರದಿಂದ ಪಲಾಯನ ಮಾಡಿ ಇನ್ನೊಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅವರು, ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ತಮ್ಮ ಮಗನಿಗೆ ಬಿಟ್ಟುಕೊಟ್ಟಿದ್ದಾರೆ. ಒಟ್ಟು ಮೂರು ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಗೆದ್ದರೂ ಸಾಕು, ಕುಟುಂಬ ರಾಜಕಾರಣದ ಚಕ್ರ ಉರುಳುತ್ತದೆ ಎಂಬ ಭಾವನೆ ಅವರದು ಎಂದು ಮೋದಿ ಲೇವಡಿವಾಡಿದ್ದಾರೆ.

 

 

ಇದರ ಜೊತೆಗೆ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸಿರುವ ರಾಜ್ಯದ ಕಾಂಗ್ರೆಸ್ ನಾಯಕರು 1+1 ಎಂಬ ಫಾರ್ಮುಲಾ ಅಳವಡಿಸಿಕೊಂಡಿದ್ದಾರೆ ಎಂದು ಮೋದಿ ಟೀಕಿಸಿದ್ದಾರೆ. ತಮ್ಮ ವಿರೋಷಿಯಾದ ಕಾಂಗ್ರೆಸ್ ನಲ್ಲಿ ಆಚರಣೆಯಲ್ಲಿರುವ ಕುಟುಂಬ ರಾಜಕಾರಣವನ್ನು1+1,2 +1 ಎಂಬಂತೆ ಟೀಕಿಸುವ ಈ ಹೊತ್ತಿನಲ್ಲಿ ಒಂದೊಮ್ಮೆ ವರುಣದಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಟ್ಟಿದ್ದಾರೆ ಮುಜುಗರಕ್ಕೆಡಾಗುವ ಸಾಧ್ಯತೆಯಿದ್ದು ಆ ಕಾರಣಕ್ಕಾಗಿಯೇ ಟಿಕೆಟ್ ನಿರಾಕರಿಸಲಾಗಿದೆ, ಮತ್ತು ತಮ್ಮಲ್ಲಿ ಯಾವುದೇ ರೀತಿಯ ಫಾರ್ಮುಲಾಗಳು ಚಾಲ್ತಿಯಲ್ಲಿಲ್ಲ ಎಂದು ಪರೋಕ್ಷವಾಗಿ ವಿಜಯೇಂದ್ರರಿಗೆ ಟಿಕೆಟ್ ಕೈತಪ್ಪಿದ್ದು ಯಾಕೆ ಎನ್ನುವ ಸಂದೇಶವನ್ನು ಕ್ಷೇತ್ರದ ಕಾರ್ಯಕರ್ತರಿಗೆ ರವಾನಿಸಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top