fbpx
ರಾಜಕೀಯ

ಜೆಡಿಎಸ್, ಬಿಜೆಪಿ ಅಬ್ಯರ್ಥಿಗಳ ಪರ ಮತಯಾಚನೆ ಮಾಡ್ತಿರೋದು ಏಕೆ? ರಾಕಿಂಗ್ ಸ್ಟಾರ್ ಹೇಳ್ತಾರೆ ಕೇಳಿ

ಸದ್ಯಕ್ಕೆ ಎಲ್ಲೆಲ್ಲೂ ಚರ್ಚೆಗೆ ಗ್ರಾಸವಾಗಿರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಲ್ಲಷ್ಟೇ ಬಾಕಿ ಉಳಿದಿದ್ದುಇಂಥಾ ವಾತಾವರಣದಲ್ಲಿ ರಾಜಕೀಯ ವಲಯದಲ್ಲಿ ಬಿರುಸಿನ ವಾತಾವರಣ ಇರೋದು ಸಹಜವೇ. ಆದರೆ ಈ ಸಲ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಚಿತ್ರರಂಗದಲ್ಲಿಯೂ ಚುನಾವಣಾ ಪ್ರಭಾವ ಕೂಡ ಬಲು ಜೋರಾಗಿದೆ.. ವಿವಿಧ ಪಕ್ಷಗಳಿಗೆ ಸಿನಿಮಾ ರಂಗದಿಂದ ಅನೇಕ ಮಂದಿ ಪ್ರಚಾರ ನಡೆಸುತ್ತಿದ್ದು ಇದೀಗ ಅವರ ಸಾಲಿಗೆ ರಾಕಿಂಗ್ ಸ್ಟಾರ್ ಯಶ್ ಸೇರ್ಪಡೆಗೊಂಡಿದ್ದಾರೆ.

 

 

ತಮ್ಮ ಸ್ವಂತೂರಿನಲ್ಲಿ ಪ್ರಚಾರ ಕೈಗೊಳ್ಳಲು ನಿರ್ಧರಿಸಿರುವ ಯಶ್ ಸ್ನೇಹ ಪೂರ್ವಕವಾಗಿ ಕೆ.ಆರ್. ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮತ್ತು ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಈ ಹಿಂದೆ ಅನೇಕ ಭಾರಿ ತಾವು ಯಾವ ಪಕ್ಷಕ್ಕೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದ ಯಶ್ ಇದೀಗ ಇದ್ದಕ್ಕಿದ್ದ ಹಾಗೆ ಪ್ರಚಾರಕ್ಕೆ ಧುಮುಕಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

 

ಕೆಆರ್ ನಗರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಯಶ್ “ನಾನು ಜನರಿಂದ ಸ್ಟಾರ್ ಆಗಿದ್ದೇನೆ. ಮುಂದಿನ 5 ವರ್ಷಗಳ ಜನಜೀವನ ಈ 10 ದಿನದ ಕೆಲಸ ನಿರ್ಧರಿಸುತ್ತದೆ. ಹಾಗಾಗಿ ನನಗೆ ನಂಬಿಕೆ ಇರುವವರು, ನನ್ನ ಸ್ನೇಹಿತರು, ನನ್ನ ಮಾತಿಗೆ ಬೆಲೆ ಕೊಡುವವರಿಗೆ ಮಾತ್ರ ಬೆಂಬಲಿಸುತ್ತಿದ್ದೇನೆ. ನನಗೆ ಬಹಳಷ್ಟು ಜನ ಪ್ರಚಾರ ಮಾಡುವಂತೆ ಕೇಳಿಕೊಂಡರು ಆದರೆ ನನಗೆ ಯಾರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಮತ್ತು ಒಳ್ಳೆಯ ಗುರಿಯನ್ನು ಇಟ್ಟುಕೊಂಡಿದ್ದಾರೆ ಎಂದು ಅನಿಸಿತೋ ಅವರನ್ನು ಬೆಂಬಲಿಸುತ್ತೇನೆ.”

 

 

” ಸಾರಾ ಮಹೇಶ್ ಎಂದರೆ ನನಗೆ ಬಹಳ ಇಷ್ಟ. ನಾವು ಬಹಳ ವರ್ಷದಿಂದ ಸ್ನೇಹಿತರು. ನನ್ನ ಮಾತಿಗೆ ಯಾವತ್ತು ಇಲ್ಲ ಅನ್ನಲ್ಲ, ಮಾತಿಗೆ ನಿಲ್ಲೋ ವ್ಯಕ್ತಿ. ಹಾಗಾಗಿ ಇವರಿಗೆ ನನ್ನ ಬೆಂಬಲ ಸಿಗುತ್ತಿದೆ. ನಾನು ಎರಡೂ ಪಕ್ಷದ ಪರವಾಗಿ ಪ್ರಚಾರ ಮಾಡ್ತೀನಿ ಅಂತ ಗೊಂದಲವಾಗಬೇಕಾಗಿಲ್ಲ ನಾನು ಯಾವುದೇ ಪಕ್ಷಕ್ಕಾಗಲಿ ಅಥವಾ ಸಿದ್ಧಾಂತಕ್ಕಾಗಲಿ ಬೆಲೆ ಕೊಡುವವನಲ್ಲ. ನಾನು ವ್ಯಕ್ತಿಗಳಿಗೆ ಬೆಲೆ ಕೊಡುತ್ತೇನೆ. ಆ ವ್ಯಕ್ತಿಗಳು ನನ್ನ ಸ್ನೇಹಿತರು, ನಂಬಿಕಸ್ತರಾಗಿರುತ್ತಾರೆ ಹಾಗಾಗಿ ನಾನು ಅವರನ್ನು ಬೆಂಬಲಿಸುತ್ತಿದ್ದೇನೆ.”\

 

 

ನಾನು ಅವರನ್ನು ಬೆಂಬಲಿಸುತ್ತಿದ್ದೇನೆ, ಜನರು ನನ್ನನ್ನು ಬೆಂಬಲಿಸುತ್ತಾರೆ. ಮುಂದೆ ಒಂದು ವೇಳೆ ಅವರು ಗೆದ್ದರೇ ಅವರಿಂದ ಎಲ್ಲ ಕೆಲಸಗಳನ್ನು ದಕ್ಷವಾಗಿ ಮಾಡಿಸಬೇಕು ಇದು ನನ್ನ ಜವಾಬ್ದಾರಿಯಾಗುತ್ತದೆ ಹಾಗಾಗಿಯೇ ನನ್ನ ಮಾತಿಗೆ ನಿಲ್ಲುವ ವ್ಯಕ್ತಿಗಳಿಗೆ ಮಾತ್ರ ಬೆಂಬಲ ನೀಡುತ್ತಿದ್ದೇನೆ. ಬೆಳಗ್ಗೆ ಕೆಆರ್ ನಗರ ಕ್ಷೇತ್ರದ ಸಾರಾ ಮಹೇಶ್ ಪರ ಪ್ರಚಾರ ಮಾಡಿದರೆ, ಸಂಜೆ ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್‍ದಾಸ್ ಪರ ಮತಯಾಚನೆ ಮಾಡುತ್ತೇನೆ” ಎಂದು ಯಶ್ ತಿಳಿಸಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top