fbpx
ರಾಜಕೀಯ

ಮಂತ್ರಿಯಾಗಿ ಗಿನ್ನಿಸ್ ರೆಕಾರ್ಡ್ ಲೆವೆಲ್‌ಗೆ ಕೆಲ್ಸ ಮಾಡ್ತೀನಿ ಎಂದು ನುಡಿಮುತ್ತು ಉದುರಿಸಿದ ಜಮೀರಣ್ಣ

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ ಮೇ 12 ಕ್ಕೆ ಇನ್ನೂರ ಇಪ್ಪತ್ನಾಲ್ಕು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗ ಚುನಾವಣಾ ಅಭ್ಯರ್ಥಿಗಳು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇನ್ನು ಚಾಮರಾಜಪೇಟೆ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಅಹ್ಮದ್ ಸಿದ್ದರಾಮಯ್ಯ ಸಿಎಂ ಆದ್ರೆ ನಾನು ಸಚಿವ ಆಗುತ್ತೇನೆ ಆಮೇಲೆ ನಾನು ಗಿನ್ನಿಸ್ ರೆಕಾರ್ಡ್ ಲೆವೆಲ್ ಕೆಲಸ ಮಾಡುತ್ತೇನೆ ಎಂದು ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

 

ಕ್ಷೇತ್ರದಲ್ಲಿ ಪ್ರಚಾರ ಸಮಯದಲ್ಲಿ ಮಾತನಾಡಿದ ಜಮೀರ್ ಅಹ್ಮದ್, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯೋಕೆ ಆಗಲ್ಲ. ಸಿದ್ದರಾಮಯ್ಯ ಸಿಎಂ ಅದ್ರೇ ನಿಮ್ಮ ಜಮೀರ್ ಮಂತ್ರಿ ಅಗೋದನ್ನ ಯಾರಿಂದಲೂ ತಡೆಯೋಕೆ ಆಗಲ್ಲ ಎಂದು ಹೇಳಿಕೆ ನೀಡಿದ್ದಾರೆ.

 

 

ಸದಾ ಒಂದಿಲ್ಲ ಒಂದು ಹೇಳಿಕೆ ಮೂಲಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುವ ಜಮೀರ್ ಮತದಾನ ನಡೆಯುವ ಮುಂಚೆಯೇ ಮಂತ್ರಿ ಪದವಿ ಮೇಲೆ ಕಣ್ಣಿಟ್ಟಿದ್ದಾರೆ. ಜಮೀರ್ ವಿರುದ್ಧ ರಣತಂತ್ರ ಹೆಣೆದಿರುವ ಜೆಡಿಎಸ್ ಹಾಗು ಬಿಜೆಪಿ ವಿವಿಧ ರಣತಂತ್ರ ರೂಪಿಸಿ ಜಮೀರ್ ರನ್ನು ಸೋಲಿಸಲು ಪ್ರಯತ್ನ ಮಾಡುತ್ತಿದ್ದಾರೆ.

 

 

ಮೇ 15 ರಂದು ಫಲಿತಾಂಶ ಹೊರಬೀಳಲಿದ್ದು ಯಾರು ಬಹುಮತ ಪಡೆದು ವಿಜಯಶಾಲಿ ಅಗಲಿದ್ದಾರೆ ಎಂಬುದನ್ನು ಕಾಡು ನೋಡಬೇಕಿದೆ. ಒಂದು ವೇಳೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದರೆ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಕ್ಕೆ ಜೆಡಿಎಸ್ ಮೊರೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top