ಸಮಾಚಾರ

ಮತದಾನ ಮಾಡಲು ವೋಟರ್ ಐಡೀನೇ ಇರ್ಬೇಕು ಅಂತೇನಿಲ್ಲಾ, ಈ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು!

ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಮನವರಿಕೆ ಮಾಡಲು ಅನೇಕ ಕಸರತ್ತು ನಡೆಸುತ್ತಿದೆ. ಮತದಾನ ಪ್ರಮಾಣವನ್ನು ಹೆಚ್ಚುಗೊಳಿಸುವ ಸಲುವಾಗಿ ಹಲವು ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿರುವ ಚುನಾವಣಾ ಆಯೋಗ, ಮತಪತ್ರ ಗುರುತಿನ ಚೀಟಿ ಇಲ್ಲದೆ ಇದ್ದರೂ ಬೇರೆ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬಹುದು ಎಂದು ತಿಳಿಸಿದೆ.

 

 

ಮತದಾರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡಿರುವವರು ತಮ್ಮ ಬಳಿ ಗುರುತಿನ ಚೀಟಿ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದಾರೆ ಸಾಕು ಈ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು ಎಂದು ತಿಳಿಸಿದೆ.
ಆ 12 ದಾಖಲೆಗಳು ಈ ರೀತಿ ಇವೆ.
1.ಪಾಸ್​ಪೋರ್ಟ್,
2.ಡ್ರೈವಿಂಗ್ ಲೈಸೆನ್ಸ್,
3.ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅರೆ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ನೀಡಿರುವ ಗುರುತಿನ ಚೀಟಿ,
4. ಫೋಟೋವುಳ್ಳ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್,
5.ಪಾನ್ ಕಾರ್ಡ್,
6.ಸ್ಮಾರ್ಟ್​ಕಾರ್ಡ್,
7.ನರೇಗಾ ಜಾಬ್ ಕಾರ್ಡ್,
8.ಕಾರ್ವಿುಕರ ಸಚಿವಾಲಯ ಯೋಜನೆಯಡಿ ನೀಡಿರುವ ಆರೋಗ್ಯ ಕಾರ್ಡ್,
9.ಫೋಟೋಸಹಿತ ಪಿಂಚಣಿ ದಾಖಲೆ,
10.ಚುನಾವಣಾ ಆಯೋಗದಿಂದ ನೀಡಿರುವ ದೃಢೀಕೃತ ಫೋಟೋ ವೋಚರ್ ಸ್ಲಿಪ್ಸ್,
11.ಸಂಸದರು, ವಿಧಾನಸಭೆ, ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ,
12.ಅಧಾರ್ ಕಾರ್ಡ್​.

 

 

ಒಂದು ವೇಳೆ ವೋಟರ್ ಐಡಿಯಲ್ಲಿ ಏನಾದರೂ ದೋಷವಿದ್ದರೆ ಅಥವಾ ಕಾರ್ಡ್​ನಲ್ಲಿರುವ ಫೋಟೋ ಹೊಂದಾಣಿಕೆ ಆಗದಿದ್ದರೆ ಅಥವಾ ವೋಟರ್ ಐಡಿಯೇ ಕಳೆದುಹೋಗಿದ್ದರೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಸಾಕು ಮೇಲೆ ತಿಳಿಸಲಾಗಿರುವ 12ದಾಖಲಾತಿಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು.. ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಬೇರೆ ವಿಧಾನಸಭಾ ಕ್ಷೇತ್ರದ ಎಪಿಕ್ ಕಾರ್ಡ್ ತೋರಿಸಿದರೂ ಅವರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top