ಮನೋರಂಜನೆ

“ಚಾನ್ಸ್ ಬೇಕಂದ್ರೆ ನಿನ್ನನ್ನು ನೈಟಿಯಲ್ಲಿ ನೋಡ್ಬೇಕು” ಎಂದ ಕಾಮುಕ ಡೈರೆಕ್ಟರ್.

ಹೀರೋಯಿನ್ನುಗಳಿಗೆ ಥರ ಥರದ ಕಾಟ ಕೊಡುವ ಪ್ರವೃತ್ತಿ ಬಾಲಿವುಡ್ ಸೇರಿದಂತೆ ಎಲ್ಲ ಭಾಷೆಗಳ ಚಿತ್ರರಂಗಕ್ಕೂ ಅಂಟಿಕೊಂಡಿರೋ ಸಾಂಕ್ರಾಮಿಕ ಖಾಯಿಲೆ. ಭಾರತದ ಸಾಮಾಜಿಕ ರಚನೆಯಲ್ಲಿಯೇ ಹಾಸು ಹೊಕ್ಕಾಗಿರುವ ಪುರುಷ ಪ್ರಧಾನದ ದೌಲತ್ತು ಲೀಡ್ ಹೀರೋಯಿನ್ನುಗಳನ್ನೂ ಕೂಡಾ ಯಾವ್ಯಾವ ರೀತಿಯಲ್ಲಿ ಕಾಡುತ್ತದೆ ಎಂಬುದಕ್ಕೆ ಇತ್ತೀಚಿನ ಕೆಲವು ದಿನಗಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವ(ಕಾಸ್ಟಿಂಗ್ ಕೌಚ್) ಅನಿಷ್ಟ ಪದ್ದತಿಯೇ ಸ್ಪಷ್ಟ ಸಾಕ್ಷಿ!

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಯುವನಟಿಯರನ್ನು ಮಂಚಕ್ಕೆ ಕರೆಯುವ ಕಾಯಿಲೆಯ ವಿರುದ್ಧ ಅನೇಕ ಚಿತ್ರರಂಗಗಳ ಯುವ ನಟಿಯರು ಧ್ವನಿಯೆತ್ತಿದ್ದು ತಾವು ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿ ಮಾಹಿ ಗಿಲ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾಳೆ.

 

 

ಸದಾ ಟ್ರೋಲ್ ಪೇಜುಗಳಿಗೆ ಆಹಾರವಾಗುತ್ತಾ ಆಗಾಗ ಅನ್ನಿಸಿದ್ದನ್ನು ಹೇಳಿ ವಿವಾದ ಸೃಷ್ಟಿಸುತ್ತಾ ಸುದ್ದಿಯಲ್ಲಿರುವ ಮಾಹಿ ಗಿಲ್ ಆಗಾಗ್ಗೆ ಅಂಗಾಂಗ ಪ್ರದರ್ಶನದ ಮೂಲಕವೂ ಸುದ್ದಿಯಲ್ಲಿರುತ್ತಾಳೆ. ಆದರೆ ಈಕೆ ನಟನೆಯ ಬಲದಿಂದಲೇ ಬಾಲಿವುಡ್ಡಲ್ಲಿ ಚಾಲ್ತಿಯಲ್ಲಿರುವವಳು. ಆದರೆ ಹೀಗೆ ಬಾಲಿವುಡ್ಡಲ್ಲಿ ಬೇಡಿಕೆಯ ನಟಿಯಾಗಿ ರೂಪುಗೊಂಡಿದ್ದರ ಹಿಂದೆ ತಾನು ಅನುಭವಿಸಿತ್ತಾ ಬಂದ ನಾನಾ ಕಿರುಕುಳ, ಸಂಕಟಗಳಿವೆ ಎಂಬುದನ್ನು ಮಹಿಯೇ ಹೇಳಿಕೊಂಡಿದ್ದಾಳೆ.

 

 

ಇತ್ತೀಚಿಗೆ ಖಾಸಗಿ ವಾಹಿನಿಯೊಂದರಲ್ಲಿ ಭಾಗವಹಿಸಿದ್ದ ಮಾಹಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವ ಪೆಡಂ ಭೂತ ಚಾಲ್ತಿಯಲ್ಲಿರುವದನ್ನು ಒಪ್ಪಿಕೊಂಡಳು. ಈ ಬಗ್ಗೆ ತನ್ನ ಅನುಭವನ್ನು ಬಿಚ್ಚಿಟ್ಟ ಮಾಹಿ ಹನ್ನೊಂದು ವರ್ಷದ ಹಿಂದಿನ ಕಹಿ ಘನಟನೆಯೊಂದನ್ನು ಹಂಚಿಕೊಂಡಿದ್ದಾಳೆ. ಈಕೆಯೇ ಹೇಳುವ ಹಾಗೆ ಒಮ್ಮೆ ಒಬ್ಬ ನಿರ್ದೇಶಕನ ಬಳಿ ಅವಕಾಶ ಕೇಳಲು ಚೂಡಿದಾರ ಧರಿಸಿಕೊಂಡು ಹೋಗಿದ್ದಳಂತೆ ಆದರೆ ಈಕೆಯನ್ನು ನೋಡಿ ಒಳಗೊಳಗೇ ಜೊಲ್ಲು ಸುರಿಸಿಕೊಂಡಿದ್ದ ಆ ಕಾಮುಕ ನಿರ್ದೇಶಕ “ಇಂಥ ಬಟ್ಟೆ ಹಾಕೋದ್ರೆ ಯಾರೂ ನಿನಗೆ ಅವಕಾಶ ಕೊಡೋಲ್ಲ, ಚೂಡಿದಾರಬಿಟ್ಟು ಬಿಟ್ಟು ಮಾಡ್ರನ್ ಡ್ರೆಸ್ ಹಾಕೊಂಡು ಬಾ., ನೈಟಿಯಲ್ಲಿ ನೀನು ಹೇಗೆ ಕಾಣ್ತಿಯಾ ನೋಡಬೇಕು” ಎಂದು ವಿಚಿತ್ರವಾಗಿ ಸನ್ನೆ ಮಾಡುತ್ತಾ ಹೇಳಿದ್ದರಂತೆ. ಆತನ ಮಾತುಗಳನ್ನು ಕೇಳಿ ಕಳವಳಗೊಂಡ ಮಾಹಿ ಅಲ್ಲಿಂದ ಕಾಲ್ಕಿತ್ತಿದ್ದರಂತೆ ಅಲ್ಲದೆ ಆ ನಂತರ ಯಾವುದಾದರೂ ನಿರ್ದೇಶಕನ ಬಳಿ ಹೋಗಬೇಕು ಅಂದ್ರೆ ಭಯ ಪಟ್ಟುಕೊಳ್ಳುತ್ತಿದ್ದಳಂತೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top