ಸಿನಿಮಾ

‘ಬಿಳಿ ಹೆಂಡ್ತಿ’ ಸಿನಿಮಾ ಖ್ಯಾತಿಯ ಅನಿಲ್‌ ಕುಮಾರ್‌ ಇನ್ನಿಲ್ಲ..…

ಸ್ಯಾಂಡಲ್ ವುಡ್ ‘ಬಿಳಿ ಹೆಂಡ್ತಿ’ ಚಿತ್ರದಲ್ಲಿ ಅಭಿನಯ ಮಾಡಿದ್ದ ಹಿರಿಯ ನಟ ಅನಿಲ್ ಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

 

 

ಅನಿಲ್ ಕುಮಾರ್ ನಿನ್ನೆ ಬೆಳಿಗ್ಗೆ ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಲ್ಲೇಶ್ವರಂನ ಅಲಮೇಲು ಅಪಾರ್ಟ್‌ಮೆಂಟ್‌ನ ಅವರ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದರು. ಅನಿಲ್‌ ಕುಮಾರ್‌ ಕೊನೆಯ ಆಸೆಯಂತೆ ಪಾರ್ಥಿವ ಶರೀರವನ್ನು ಎಂಎಸ್‌ ರಾಮಯ್ಯ ಕಾಲೇಜಿಗೆ ದೇಹದಾನ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ತಿಳಿಸಿದ್ದಾರೆ.

 

 

ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದ 1975ರಲ್ಲಿ ರಿಲೀಸ್ ‘ಬಿಳಿ ಹೆಂಡ್ತಿ’ ಚಿತ್ರದಲ್ಲಿ ನಟ ಅನಿಲ್ ಕುಮಾರ್ ಅವರ ಜೊತೆ ಆರತಿ, ಮಾರ್ಗರೆಟ್, ಅಂಬರೀಶ್ ಮುಂತಾದವರು ಅಭಿನಯ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top