ಸಿನಿಮಾ

ಪ್ರಧಾನಿಗೆ ಪತ್ರ ಬರೆದು ಫ್ಲೈ ಓವರ್ ಗೆ ನೇಣುಬಿಗಿದುಕೊಂಡು ಬಾಲಕ ಆತ್ಮಹತ್ಯೆ

ತಮಿಳುನಾಡು ರಾಜ್ಯದಲ್ಲಿ ಚೆನ್ನೈ ಜಿಲ್ಲೆಯ ವನ್ನಾರಪೇಟೆ ನಗರದಲ್ಲಿ ಬಾಲಕನೊಬ್ಬ ಫ್ಲೈ ಓವರ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

 

 

ಬಾಲಕ ವನ್ನಾರಪೇಟೆ ನಮಕ್ಕಲ್ ಶಾಲೆಯಲ್ಲಿ 12 ನೇ ತರಗತಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಬಾಲಕ ಸಾವಿಗೂ ಮುನ್ನ ಪತ್ರವೊಂದನ್ನು ಬರೆದಿದ್ದು ಅದ್ದರಲ್ಲಿ ತಾನು ಸಾಯಲು ಕಾರಣ ಬರೆದಿಟ್ಟು ಸಾವನ್ನಪ್ಪಿದ್ದಾನೆ. ಬಾಲಕ ಬರೆದಿರುವ ಪತ್ರ ಈಗ ಪೊಲೀಸರಿಗೆ ಲಭಿಸಿದೆ ಎಂದು ತಿಳಿದು ಬಂದಿದೆ.

 

 

ಬಾಲಕ ಬರೆದಿರುವ ಪತ್ರದಲ್ಲಿ ತನ್ನ ತಂದೆ ಮದ್ಯ ವ್ಯಸನಿ ಆಗಿದ್ದು ದಯಮಾಡಿ ರಾಜ್ಯದಲ್ಲಿ ಮದ್ಯ ನಿಷೇಧ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ರವರಿಗೆ ಪತ್ರ ಮೂಲಕ ಮನವಿ ಮಾಡಿಕೊಂಡಿದ್ದಾನೆ. ಅಲ್ಲದೇ ತನ್ನ ಅಂತಿಮ ವಿಧಿ ವಿಧಾನಗಳಿಂದ ತಂದೆಯನ್ನು ದೂರವಿಡುವಂತೆ ಬೆರೆದಿದ್ದಾನೆ ಎಂದು ತಿಳಿದು ಬಂದಿದೆ.

 

 

 

ಈ ಹಿಂದೆ 1971 ರಲ್ಲಿ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಮಧ್ಯ ನಿಷೇದ ಮಾಡಲಾಗಿತ್ತು ಆದರೆ ಕೆಲವೇ ತಿಂಗಳಲ್ಲಿ ಈ ನಿಯಮವನ್ನು ಹಿಂಪಡೆಯಲಾಗಿತ್ತು. 2015 ರಲ್ಲಿ ಜಯಲಲಿತಾ ಮಧ್ಯ ನಿಷೇದ ಮಾಡುವುದಾಗಿ ಹೇಳಿದ್ದರು ಆದರೆ ಅವರು ಕೂಡ ಮಧ್ಯ ನಿಷೇದ ಮಾಡಲು ಸಾಧ್ಯವಾಗಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top